ಎಣ್ಣೆ ಹೊಡಿ, ಸ್ಟೋರಿ ಬರಿ: ಇದು ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಉಗ್ರಂ’ ದಿನಚರಿ!

'ಕೆಜಿಎಫ್' ಚಾಪ್ಟರ್-1 ಹಾಗೂ 'ಕೆಜಿಎಫ್' ಚಾಪ್ಟರ್-2 ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಹಲ್‌ಚಲ್ ಎಬ್ಬಿಸಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ಅವರ 'ಸಲಾರ್-1' ಸಿನಿಮಾ ಕೂಡ ಇತ್ತೀಚೆಗೆ ರಿಲೀಸ್ ಆಗಿ ಬರೋಬ್ಬರಿ 700 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಕಲೆಕ್ಷನ್ ಮಾಡಿದೆ. ಹೀಗಿದ್ದಾಗ ಪ್ರಶಾಂತ್ ನೀಲ್ ಅವರ 'ಉಗ್ರಂ' ಸಿನಿಮಾ ರಿಲೀಸ್ ಆಗಿ 10 ವರ್ಷ ತುಂಬಿದ್ದು, ಈ ಸಮಯದಲ್ಲೇ ತಾವು ಕಥೆ ಬರೆಯೋದು ಹೇಗೆ? ಅಂತಾ ನೀಲ್ ವಿವರಿಸಿದ್ದಾರೆ.

ಉಗ್ರಂ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 10 ವರ್ಷಗಳೇ ಕಳೆದು ಹೋಗಿದೆ. ಹೀಗಿದ್ದಾಗ, ಆಂಕರ್ ಅನುಶ್ರೀ ಅವರು ವಿಶೇಷ ಕಾರ್ಯಕ್ರಮ ಒಂದನ್ನ ನಡೆಸಿದರು. ಈ ವೇಳೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ತಮ್ಮ ಜೀವನದ ಕಷ್ಟಗಳನ್ನ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅವರು ಇದೇ ಸಮಯದಲ್ಲಿ ತಾವು ಎಣ್ಣೆ ಹೊಡೆದು, ಉಗ್ರಂ ಕಥೆ ಬರೆಯುತ್ತಿದ್ದರ ಬಗ್ಗೆ ಕೂಡ ಮಾತನಾಡಿದ್ದಾರೆ. ಅದ್ರಲ್ಲೂ ಪ್ರಶಾಂತ್ ನೀಲ್ ಯಾವ ಬ್ರಾಂಡ್ ಎಣ್ಣೆಯನ್ನ ಹೊಡೀತಾರೆ ಅನ್ನೋದು ಕೂಡ ಈಗ ರಿವೀಲ್ ಆಗಿದೆ. ಹಾಗಾದರೆ ಯಾವ ಬ್ರಾಂಡ್ ಅದು? ಮುಂದೆ ಓದಿ.

Prashanth Neel Told That He Wrote The Story Of Ugram While He Drunk

ಪ್ರಶಾಂತ್ ನೀಲ್ ಬ್ರಾಂಡ್ ಯಾವುದು?

'ಕೆಜಿಎಫ್' ಚಾಪ್ಟರ್-2 ರಿಲೀಸ್ ಆದ ಸಮಯದಲ್ಲಿ ಕೂಡ ಪ್ರಶಾಂತ್ ನೀಲ್ ಹೇಳಿಕೆಯು ವೈರಲ್ ಆಗಿತ್ತು. ಅದ್ರಲ್ಲೂ ಪ್ರಶಾಂತ್ ನೀಲ್ ಅವರು ತಾವು ಎಣ್ಣೆ ಹೊಡೆದು ಕಥೆಯನ್ನ ಬರೆಯೋದು ಎಂದಿದ್ದ ವಿಡಿಯೋ ಹಲ್‌ಚಲ್ ಎಬ್ಬಿಸಿತ್ತು. ರಾತ್ರಿ ಎಣ್ಣೆ ಹೊಡೆದಾಗ ತಾವು ಬರೆದ ಕಥೆಯನ್ನ, ಬೆಳಗ್ಗೆ ಎಣ್ಣೆ ಕಿಕ್ ಇಳಿದಾಗ ರಿಪೇರಿ ಮಾಡ್ತಾರೆ ಅಂತಾ ನೀಲ್ ಅವರ ಬಗ್ಗೆ ಕೆಲವರು ಆರೋಪ ಮಾಡಿದ್ದರು.

ಆದರೂ ಇದ್ಯಾವುದಕ್ಕೂ ಕೇರ್ ಮಾಡದ ಕನ್ನಡಿಗ ಪ್ರಶಾಂತ್ ನೀಲ್ ಅವರು, ಮತ್ತೆ ಅದೇ ಮಾತನ್ನ ಪುನರ್ ಪ್ರಸ್ತಾಪಿಸಿದ್ದಾರೆ. ಹಾಗೇ ತಾವು ಎಣ್ಣೆ ಹೊಡೆದು ಉಗ್ರಂ ಕಥೆ & ಡೈಲಾಗ್ಸ್ ಬರೆಯುತ್ತಿದೆ ಅಂತಾ ಹೇಳಿದ್ದಾರೆ. ಈ ಸಮಯದಲ್ಲೇ ತಮ್ಮ ಬ್ರಾಂಡ್ ಎಂಎಚ್ ಅಂತಾನೂ ಪರೋಕ್ಷವಾಗಿ ತಿಳಿಸಿದ್ದಾರೆ! ಇದು ಈಗ ಫುಲ್ ವೈರಲ್ ಆಗುತ್ತಿದೆ.

ಕಷ್ಟದ ನಡುವೆ ಗೆದ್ದು ಬೀಗಿದ್ದರು

ಪ್ರಶಾಂತ್ ನೀಲ್ ಅವರ ಕೆಪಾಸಿಟಿ ಈಗ ಇಂಡಿಯನ್ ಸಿನಿಮಾ ಇಂಡಸ್ಟ್ರಿಗೇ ಗೊತ್ತಾಗಿದ್ದು ಇವರ ಜತೆ ಸಿನಿಮಾ ಮಾಡಲು ಸ್ಟಾರ್ ಹೀರೋಗಳು ಸಾಲಾಗಿ ನಿಲ್ಲುತ್ತಿದ್ದಾರೆ. ಇದೇ ಪ್ರಶಾಂತ್ ನೀಲ್, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನಗಳಲ್ಲಿ ಭಾರಿ ಸಂಕಷ್ಟ ಎದುರಿಸಿದ್ದರಂತೆ 'ಉಗ್ರಂ'ನ ನಿರ್ಮಿಸೋದಕ್ಕೆ ಪ್ರಶಾಂತ್ ನೀಲ್ ತಮ್ಮ ಮನೆ ಮಾರಿಕೊಂಡಿದ್ದರು ಎನ್ನುವ ಸುದ್ದಿ ಇತ್ತೀಚೆಗೆ ಅವರಿಂದಲೇ ಹೊರಬಿದ್ದಿತ್ತು. ಈಗ ಉಗ್ರಂ ಸಿನಿಮಾಗೆ 10 ವರ್ಷ ತುಂಬಿದ ಸಮಯದಲ್ಲು ಅನೇಕ ಕಹಿ ಸತ್ಯಗಳನ್ನ ಬಯಲು ಮಾಡಿದ್ದಾರೆ ನೀಲ್.

Prashanth Neel Told That He Wrote The Story Of Ugram While He Drunk

ನಟ ದರ್ಶನ್ ಸಹಾಯ ನೆನೆದರು

ಪ್ರಶಾಂತ್ ನೀಲ್ ಅಂದ್ರೆ ಈಗ ಭಾರತ ಮಾತ್ರವಲ್ಲ, ವರ್ಲ್ಡ್ ಲೆವೆಲ್ ಕ್ರೇಜ್ ಇದ್ದು. ಏಷ್ಯಾ ಟು ಆಫ್ರಿಕಾ, ಅಮೆರಿಕ ಟು ಆಸ್ಟ್ರೇಲಿಯಾ ಜನರು ಗುರುತು ಹಿಡಿಯುತ್ತಿದ್ದಾರೆ. ಆದ್ರೆ ಇದೇ ಪ್ರಶಾಂತ್ ನೀಲ್ ಸರಿಯಾಗಿ 10 ವರ್ಷಗಳ ಹಿಂದೆ ಮೊದಲ ಸಿನಿಮಾ ರಿಲೀಸ್ ಮಾಡಿದ್ದಾಗ, ಸಾಕಷ್ಟು ಕಷ್ಟಪಟ್ಟಿದ್ದರು. ಆದರೆ ಅವರ ಕಷ್ಟಗಳಿಗೆ ಶ್ರೀಮುರಳಿ ಹೆಗಲು ಕೊಟ್ಟಿ ನಿಂತರು ಅನ್ನೋದು ವಿಶೇಷ.

ಹಾಗೇ ರಿಲೀಸ್ ಸಮಯದಲ್ಲಿ ನಟ ದರ್ಶನ್ ಅವರು ಸಹಾಯವನ್ನ ಮಾಡಿದ್ದರು, ಹೀಗಾಗಿಯೇ ತಮಗೆ ದೊಡ್ಡ ಬೆಂಬಲ ಸಿಕ್ಕಿತ್ತು ಅನ್ನೋದು ನೀಲ್ ಅವರಿಂದ ಬಂದ ಮಾತಾಗಿತ್ತು. ಈ ಮೂಲಕ ಎಲ್ಲವನ್ನೂ ಎದುರಿಸಿ ನಿಂತಿದ್ದ ಪ್ರಶಾಂತ್ ನೀಲ್ ಅವರು ಈಗ, ಪರ ಭಾಷೆಯ ಸಿನಿಮಾಗಳನ್ನೂ ನಿರ್ದೇಶನ ಮಾಡುತ್ತಾ ಮಿಂಚುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+