Prabhu Deva: ಮೊದಲ ಮಗನ ಸಾವು, ಡಿವೋರ್ಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಪ್ರಭುದೇವಾ ಮಾಜಿ ಪತ್ನಿ
ನಾವೆಲ್ಲರೂ ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ಬೇಕಾದಷ್ಟು ಸೌಲಭ್ಯಗಳು ನಮಗೆ ಸುಲಭವಾಗಿ ಸಿಗುತ್ತಿವೆ. ಎಷ್ಟು ದುಡಿದರೂ ಸಹ ಮನಸ್ಸಿಗೆ ನೆಮ್ಮದಿ ಇಲ್ಲ. ನಮ್ಮವರ ಜೊತೆ ನಾವು ಸಂಬಂಧದ ಮೌಲ್ಯವನ್ನು ಮರೆತು ಬದುಕುತ್ತಿದ್ದೇವೆ ಮತ್ತು ಬಾಂಧವ್ಯವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆದ ಮದುವೆ ಎನ್ನುವುದು ಕೇವಲ ಕೆಲವೇ ದಿನಗಳಲ್ಲಿ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತುತ್ತಿದೆ. ಲವ್, ಮದುವೆ, ಕೆಲ ದಿನಗಳಲ್ಲೇ ಡಿವೋರ್ಸ್.. ಹೀಗೆ ಇತ್ತಿಚ್ಚೀನ ದಿನಗಳಳ್ಲಿ ಸಿನಿಮಾ ತಾರೆಯರ ನಡುವೆ ಡಿವೋರ್ಸ್ ಪ್ರಕರಣಗಳು ಸಹ ಸರ್ವೇ ಸಾಮಾನ್ಯವಾಗಿವೆ.
ಎಷ್ಟು ಬೇಗ ಲವ್ ಆಗುತ್ತದೋ ಅಷ್ಟೇ ಬೇಗ ಬ್ರೇಕಪ್ ಆಗಿಬಿಡುತ್ತದೆ. ಇನ್ನೂ, ಡಿವೋರ್ಸ್ ಪಡೆದಷ್ಟೇ ಬೇಗ ಮತ್ತೊಂದು ಮದುವೆ ಕೂಡ ಆಗಿಬಿಡುತ್ತಾರೆ. ಅದೇ ರೀತಿ ಕಾನೂನಾತ್ಮಕವಾಗಿ ದೂರಾದರೂ ಬಳಿಕವೂ ಒಳ್ಳೆಯ ಸ್ನೇಹಿತರಂತೆಯೇ ಇರುವವರು ಇದ್ದಾರೆ. ದೂರ ಆದವರೂ ಇದ್ದಾರೆ. ಪ್ರಭುದೇವಾ ಅವರ ಲವ್ ಸ್ಟೋರಿ, ಮದುವೆ, ಬ್ರೇಕಪ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಹಿಂದೆ ನಟಿ ನಯನತಾರ ಜೊತೆ ಮದುವೆ ಆಗಲು ಪ್ರಭುದೇವಾ ಮೊದಲ ಪತ್ನಿ ರಾಮ್‌ಲತಾಗೆ ಡಿವೋರ್ಸ್ ಕೊಟ್ಟಿದ್ದರು. ಆದರೆ ಬಳಿಕ ನಯನತಾರ ಜೊತೆಗೆ ಬ್ರೇಕಪ್ ಆಗಿತ್ತು. ಬಳಿಕ ಪ್ರಭುದೇವಾ ಅವರು ಹಿಮಾನಿ ಸಿಂಗ್ ಎಂಬುವವರನ್ನು ಪ್ರೀತಿಸಿ ಎರಡನೇ ಮದುವೆ ಆಗಿದ್ದರು. ಇತ್ತ ನಯನತಾರಾ ಅವರು ಸಹ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾದರು.

ಇನ್ನೂ ಪ್ರಭುದೇವಾ ಅವರು ಎಲ್ಲರಿಗೂ ಗೊತ್ತೇ ಇದೆ. ಆದರೆ, ಪ್ರಭುದೇವಾ ಅವರ ಮೊದಲ ಪತ್ನಿ ರಾಮ್‌ಲತಾ ಅವರ ಬಗ್ಗೆ ಮಾತ್ರ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ರಾಮ್‌ಲತಾ ಅವರನ್ನ ಪ್ರಭುದೇವಾ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದರು. ರಾಮ್‌ಲತಾ ಹಾಗೂ ಪ್ರಭುದೇವಾ ಅವರು ಈ ಹಿಂದೆ ಯಾವುದೋ ಕಾರಣಗಳಿಂದ ವಿಚ್ಚೇದನವನ್ನ ಪಡೆದಿದ್ದರು. ಆದರೆ, ಈ ಇಬ್ಬರು ಮಾತ್ರ ಇವತ್ತಿಗೂ ಒಳ್ಳೆಯ ಸ್ನೇಹ ಮುಂದುವರೆದಿದೆ. ಅವರಿಬ್ಬರೂ ವಿಚ್ಚೇದನವನ್ನ ಪಡೆದಿದ್ದರು ಸಹ ಮಕ್ಕಳಿಗಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಇಬ್ಬರೂ ಸಂಪರ್ಕದಲ್ಲಿದ್ದಾರೆ. ಮಕ್ಕಳ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಪ್ರಭುದೇವಾ ಮಾಜಿ ಪತ್ನಿ ರಾಮ್‌ಲತಾ ಇದೇ ಮೊದಲ ಬಾರಿಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿ, ಪ್ರಭುದೇವಾ ಹಾಗೂ ಮಕ್ಕಳ ಬಗ್ಗೆ ಮುಕ್ತವಾಗಿ ಮೊದಲ ಬಾರಿಗೆ ರಾಮ್ ಲತಾ ಅವರು ಮಾತನಾಡಿದ್ದಾರೆ.ಸರ್(ಪ್ರಭುದೇವಾ) ಬಹಳ ಒಳ್ಳೆಯವರು. ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತೀವಿ. ಮಕ್ಕಳು ಅಪ್ಪನನ್ನು ನೋಡಲು ಹೋಗುತ್ತಾರೆ, ಅವರು ಕೂಡ ಮಕ್ಕಳಿಗಾಗಿ ಮನೆಯವರೆಗೂ ಬರ್ತಾರೆ ಎಂದು ತಮಿಳು ಸಂದರ್ಶನದಲ್ಲಿ ರಾಮ್‌ಲತಾ ಹೇಳಿದ್ದಾರೆ.
ಮಗನನ್ನು ಕೂಡ ಕೊರಿಯಯೋಗ್ರಫರ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರಭುದೇವಾ ಡ್ಯಾನ್ಸ್ ಶೋವೊಂದರಲ್ಲಿ ಪುತ್ರ ರಿಷಿ ಹೆಜ್ಜೆ ಹಾಕಿದ್ದು, ಬಹಳ ಖುಷಿಯಾಗಿತು ಎಂದು ರಾಮ್‌ಲತಾ ಹೇಳಿದ್ದಾರೆ. ಮಗ ಸಖತ್ತಾಗಿ ಡ್ಯಾನ್ಸ್ ಮಾಡಿದ್ದ. ಚಿಕ್ಕಂದಿನಿಂದ ಡ್ಯಾನ್ಸ್ ಅಂದರೆ ಮಗ ಇಷ್ಟ ಇಲ್ಲ ಎನ್ನುತ್ತಿದ್ದ, ಆದರೆ ಕಳೆದ ಎರಡು ವರ್ಷಗಳಿಂದ ಡ್ಯಾನ್ಸ್ ಬಗ್ಗೆ ಆಸಕ್ತಿ ಬಂದು ಕಲಿತಿದ್ದಾನೆ. ಎಷ್ಟೇ ಆದರೂ ಅಪ್ಪನ ರಕ್ತ ಅಲ್ಲವೇ? ಎಂದು ರಾಮ್‌ಲತಾ ಹೇಳಿದ್ದಾರೆ.
ಪ್ರಭುದೇವಾ ಒಳ್ಳೆ ತಂದೆ. ಮಕ್ಕಳು ಅಂದರೆ ಅಪಾರ ಪ್ರೀತಿ. ಏನೇ ಇದ್ದರೂ ಮಕ್ಕಳು ಅಪ್ಪನ ಬಗ್ಗೆ ಮಾತನಾಡುತ್ತಾರೆ. ನಾವಿಬ್ಬರೂ ಚರ್ಚೆ ನಡೆಸಿ ಮಕ್ಕಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ನಮಗೆ ಮೂವರು ಗಂಡು ಮಕ್ಕಳು. ಅದರಲ್ಲಿ ದೊಡ್ಡ ಮಗ ಕೊನೆಯುಸಿರೆಳೆದ ಎಂದು ರಾಮ್‌ಲತಾ ಹೇಳಿದ್ದಾರೆ. ಇನ್ನೊಬ್ಬ ಮಗ ಜರ್ನಲಿಸಂ ಪದವಿ ಪಡೆದಿದ್ದಾನೆ. ಡ್ಯಾನ್ಸ್, ನಟನೆ ಬಗ್ಗೆ ಆಸಕ್ತಿ. ಈಗಾಗಲೇ ಕೆಲ ಅವಕಾಶಗಳು ಬರ್ತಿದೆ ಎಂದು ಹೇಳಿದ್ದಾರೆ.
ಡಿವೋರ್ಸ್ ಬಳಿಕ ಆ ನೋವಿನಿಂದ ಹೊರಬಂದೆ ಎನ್ನುವುದಕ್ಕಿಂತ ಅದನ್ನು ಅರಗಿಸಿಕೊಂಡು ಒಪ್ಪಿಕೊಳ್ಳಲು ಆರಂಭಿಸಿದೆ. ಇದೇ ನಮ್ಮ ಜೀವನ, ಮುಂದೆ ನಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು ಎಂದುಕೊಂಡೆ. ಹಾಗೆ ಮುಂದುವರೆಯಿತು. ಸರ್(ಪ್ರಭುದೇವಾ) ನನಗೆ ಬೆಂಬಲವಾಗಿದ್ದಾರೆ. ಡಿವೋರ್ಸ್ ಎನ್ನುವುದು ನಮ್ಮ ನಡುವೆ ಸಮಸ್ಯೆ ಆಗಲಿಲ್ಲ, ಈ ಕ್ಷಣಕ್ಕೂ ನನ್ನೊಟ್ಟಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಪ್ರಭುದೇವಾ ಅವರ ಬಗ್ಗೆ ರಾಮ್‌ಲತಾ ಅವರು ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ.












Click it and Unblock the Notifications