'ರಾಜಾಸಾಬ್' ಸ್ಟೈಲ್ ಕಾಪಿ ಮಾಡಲು ಮೊಸಳೆಗಳನ್ನೇ ಥಿಯೇಟರ್‌ಗೆ ತಂದ ಪ್ರಭಾಸ್ ಫ್ಯಾನ್ಸ್
ತೆಲುಗು ನಟ ಪ್ರಭಾಸ್ ನಟನೆಯ ಬಹುನಿರೀಕ್ಷಿತ ದಿ ರಾಜಾಸಾಬ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಮೊಸಳೆಯೊಂದಿಗೆ ಸೆಣಸಾಡುವ ದೃಶ್ಯವಿದ್ದು, ಇದನ್ನೇ ಅನುಕರಿಸಿರುವ ಅವರ ಅಭಿಮಾನಿಗಳನ್ನು ಮೊಸಳಗಳನ್ನೇ ತಮ್ಮೊಂದಿಗೆ ಥಿಯೇಟರ್‌ಗೆ ಕರೆತಂದಿದ್ದಾರೆ. ಪ್ರೀಮಿಯರ್ ಶೋ ನೋಡಲು ಬಂದಿರುವ ಅಭಿಮಾನಿಗಳು ಕೈಯಲ್ಲಿ ಒಂದೊಂದು ಮೊಸಳೆ ಹಿಡಿದು ಪ್ರಭಾಸ್ ಸ್ಟೈಲ್ ಕಾಪಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ದಿ ರಾಜಾಸಾಬ್' ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ. ಇತ್ತೀಚೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮೊಸಳೆ ಪೋಸ್ ಅಭಿಮಾನಿಗಳನ್ನು ಫಿದಾ ಮಾಡಿದ್ದು, ಅದೇ ಸ್ಟೈಲ್ ಅನ್ನು ಕಾಪಿ ಮಾಡುವ ಹುಚ್ಚಾಟ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ದಿ ರಾಜಾಸಾಬ್' ಸಿನಿಮಾದ ಪ್ರಭಾಸ್ ಅವರ ಲುಕ್ ಮತ್ತು ವಿಭಿನ್ನ ಬಾಡಿ ಲ್ಯಾಂಗ್ವೇಜ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದ್ದು, ಅದರಲ್ಲೂ ಮೊಸಳೆಯ ಜೊತೆಗೆ ಕಾಣಿಸುವ ಪೋಸ್ ಅಭಿಮಾನಿಗಳಿಗೆ ಹೊಸ ರೀತಿಯ ಥ್ರಿಲ್ ನೀಡಿದೆ. ಇದೇ ಪ್ರೇರಣೆಯಿಂದ ಕೆಲ ಅಭಿಮಾನಿಗಳು ನಕಲಿ ಮೊಸಳೆಗಳನ್ನು ಹಿಡಿದು ಪ್ರಭಾಸ್ ಅವರ ಸ್ಟೈಲ್ ಕಾಪಿ ಮಾಡಲು ಮುಂದಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಹರಿದಾಡುತ್ತಿದೆ.
ಥಿಯೇಟರ್ ತುಂಬ ಮೊಸಳೆ
ವಿಡಿಯೋಗಳಲ್ಲಿ ಅಭಿಮಾನಿಗಳು ಪ್ರಭಾಸ್ ಅವರಂತೆಯೇ ಪೋಸ್ ಕೊಡಲು ಪ್ರಯತ್ನಿಸುತ್ತಿದ್ದು, ಕೆಲವರು ಸಿನಿಮಾದ ಡೈಲಾಗ್‌ಗಳನ್ನು ಕೂಡ ಅನುಕರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಒಂದೆಡೆ ಹಾಸ್ಯದ ಕಾಮೆಂಟ್‌ಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ "ಸ್ಟಾರ್ ಕ್ರೇಜ್ ಅಂದ್ರೆ ಇದೇ" ಎಂದು ಅಭಿಮಾನಿ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪುಣ್ಯಕ್ಕೆ ನಕಲಿ ಮೊಸಳೆ ತಂದಿದ್ದೀರಿ, ರಿಯಲ್ ಮೊಸಳೆ ಹತ್ತಿರದಲ್ಲೇ ಇದ್ದಿದ್ರೆ ಹಿಡಿದು ತರುತ್ತಿದ್ರೇನೋ? ಎಂದು ಕಾಲೆಳೆದಿದ್ದಾರೆ.
ಕೆಲವರು ಈ ರೀತಿಯ ಟ್ರೆಂಡ್ ಬಗ್ಗೆ ಎಚ್ಚರಿಕೆಯ ಮಾತನ್ನೂ ಹೇಳಿದ್ದಾರೆ. "ಇದು ನಕಲಿ ಮೊಸಳೆಯಾದರೂ, ಇಂತಹ ಸ್ಟೈಲ್‌ಗಳನ್ನು ಅಂಧವಾಗಿ ಅನುಸರಿಸಬಾರದು" ಎಂದು ಸಲಹೆ ನೀಡಿದ್ದಾರೆ. ಪ್ರಭಾಸ್ ಅವರ ಕ್ರೇಜ್ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. 'ದಿ ರಾಜಾಸಾಬ್' ಸಿನಿಮಾದ ಮೊಸಳೆ ಪೋಸ್ ಈಗ ಸಿನಿಮಾ ಪರದೆಯನ್ನು ದಾಟಿ, ರಿಯಲ್ ಲೈಫ್‌ನಲ್ಲೂ ಟ್ರೆಂಡ್ ಆಗಿದೆ.
Omg 😱 see the Rebels bring crocodile 🐊 to #RajaSaab movie theatres 🥵🔥💥#Prabhas 🔥🔥🥵 pic.twitter.com/4FuA3V1UdP
— ℙℝ𝔼𝔼𝕋𝕐 (@MySelf_Preety) January 8, 2026
'ದಿ ರಾಜಾಸಾಬ್' ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ತೆಲುಗು ಭಾಷೆಯ ಫ್ಯಾಂಟಸಿ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಮಾರುತಿ ನಿರ್ದೇಶಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಿಸಿದೆ. ಇದು ಸಂಜಯ್ ದತ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಸಲಾರ್, ಕಲ್ಕಿ ಬಳಿಕ ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಒಂದು ದೊಡ್ಡ ಹಾರರ್-ಫ್ಯಾಂಟಸಿ ಕಥೆಗೆ ಸಿನಿಮಾ ಪ್ರೇಕ್ಷಕರು ಫಿದಾ ಆಗಿದ್ದಾರೆ.












Click it and Unblock the Notifications