ಬೆಂಗಳೂರು & ಯುಎಸ್‌ನಲ್ಲಿ ತೆಲುಗು ಭಾಷಿಕರ ಹಾವಳಿ, ಪವನ್ ಕಲ್ಯಾಣ್ ಸಿನಿಮಾ ನೆಪದಲ್ಲಿ ರಾದ್ಧಾಂತ!

ಟಾಲಿವುಡ್ ನಟ ಹಾಗೂ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರ ಬಹುನಿರೀಕ್ಷಿತ ಚಿತ್ರ ದಿ ಕಾಲ್ ಹಿಮ್ ಒಜಿ (They Call Him OG) ಸಿನಿಮಾ ಬಿಡುಗಡೆಯಾಗಿದೆ. ಆದರೆ ಈ ಸಿನಿಮಾ ಸಕ್ಸಸ್‌ಗಿಂತ ತೆಲುಗು ಭಾಷಿಕರು ಹಾಗೂ ನಟರ ಅಭಿಮಾನಿಗಳ ವರ್ತನೆಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಪವನ್ ಕಲ್ಯಾಣ್ ಅವರ ಸಿನಿಮಾವನ್ನು ನೋಡುವುದಕ್ಕೆ ಬಂದ ತೆಲುಗು ಅಭಿಮಾನಿಗಳು ತರ್ಲೆ ಮಾಡಿರುವುದು ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲ ವಿದೇಶದಲ್ಲೂ ತೆಲುಗು ಅಭಿಮಾನಿಗಳ ಸಿವಿಕ್‌ಸೆನ್ಸ್‌ (Civicsense / ನಾಗರಿಕಪ್ರಜ್ಞೆ) ಕೊರತೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರಿನಲ್ಲಿ ತೆಲುಗು ಅಭಿಮಾನಿಗಳ ಉದ್ಧಟತನವು ಮತ್ತೊಂದು ಭಾಷಾ ವಿವಾದಕ್ಕೂ ಕಾರಣವಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ವಲಸಿಗರ ಹಾವಳಿ ಹೆಚ್ಚಾಗಿ ಅವರಿಂದ ಸಮಸ್ಯೆ ಆಗುತ್ತಿದೆ ಎನ್ನುವ ಆರೋಪಕ್ಕೆ ಇದು ಪುಷ್ಟಿ ನೀಡಿದೆ. ಅಲ್ಲದೇ ದೂರದ ಅಮೆರಿಕಾದಲ್ಲೂ ಇವರ ವರ್ತನೆಯಿಂದಾಗಿ ಭಾರತೀಯರಿಗೆ ಕೆಟ್ಟ ಹೆಸರು ಬರುತ್ತಿದೆ. ನಾಗರಿಕ ಪ್ರಜ್ಞೆ ಇಲ್ಲದೆ ಇವರು ವರ್ತಿಸುತ್ತಿರುವ ರೀತಿಯೂ ಶೋಚನೀಯವಾಗಿದೆ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.

Pawan Kalyan Film Sparks Chaos Violence Reported Among Telugu Communities in Bengaluru amp amp US

ಬೆಂಗಳೂರಿನ ಕೆಲವು ಕಡೆ ಅಭಿಮಾನಿಗಳಂತೂ ಥಿಯೇಟರ್ ಬಳಿ ಲಾಂಗ್ ಹಿಡಿದು ಓಡಾಡಿ ಉದ್ಧಟತನ ಮೆರೆದಿದ್ದಾರೆ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರತಿಯೊಂದು ತೆಲುಗು ಚಿತ್ರವೂ ಮಡಿವಾಳದಲ್ಲಿ ಒಂದೇ ರೀತಿಯ ಸಮಸ್ಯೆಗೆ ಕಾರಣವಾಗಿದೆ ರಸ್ತೆ ತಡೆ, ಸಂಚಾರ ಉಲ್ಲಂಘನೆ, ಶಬ್ದ ಮತ್ತು ಭಾರಿ ಜನಸಂದಣಿ. ಕಾಲ್ತುಳಿತದಂತಹ ಪರಿಸ್ಥಿತಿ ಸಾರ್ವಜನಿಕರು ಆ ರಸ್ತೆಯಲ್ಲಿ ಹಾದುಹೋಗಲು ಸಹ ಸಾಧ್ಯವಿಲ್ಲ ಎಂದು Karnataka Update ಎನ್ನುವ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ರೀತಿಯ ಅಸಂಬದ್ಧ ವರ್ತನೆಗೆ ಕಡಿವಾಣ ಹಾಕಬೇಕು ಕಾಲ್ತುಳಿತ ಸಂಭವಿಸಿದರೆ - ಯಾರು ಹೊಣೆ ಎಂದೂ ಪ್ರಶ್ನೆ ಮಾಡಲಾಗಿದೆ.

ಅಮೆರಿಕಾದಲ್ಲೂ ತೆಲುಗು ಭಾಷಿಕರ ಹಾವಳಿ: ಇನ್ನು ಅಮೆರಿಕಾ ಹಾಗೂ ಲಂಡನ್‌ನಲ್ಲೂ ತೆಲುಗು ಭಾಷಿಕರು ಈ ಸಿನಿಮಾವನ್ನು ನೋಡುವಾಗ ಟಿಕೆಟ್‌ಗಳನ್ನು ಹರಿದು ಬಿಸಾಕಿರುವುದು ಹಾಗೂ ಕೂಗಿರುವ ವಿಡಿಯೋ ವೈರಲ್ ಆಗುತ್ತಿದೆ. ತೆಲುಗು ಭಾಷಿಕರ ವರ್ತನೆಗೆ ವ್ಯಾಪಕ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತವಾಗುತ್ತಿದೆ.

ಇನ್ನು ವಿದೇಶದಲ್ಲಿ ತೆಲುಗು ಭಾಷಿಕರ ಹಾವಳಿಯಿಂದ ಭಾರತೀಯರಿಗೆ ಕೆಟ್ಟ ಹೆಸರು ಬರುತ್ತಿದೆ. ಭಾರತೀಯರ ಬಗ್ಗೆ ವಿದೇಶಿಗರು ಕೆಟ್ಟ ಅಭಿಪ್ರಾಯವನ್ನು ಹೊಂದುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+