Pavithra Gowda Makeup: ನಟಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಬಿಟ್ಟು ತೊಂದರೆಗೆ ಸಿಲುಕಿದ ಪೊಲೀಸರು!

ಬೆಂಗಳೂರು, ಜೂನ್. 26: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿಯಾಗಿರುವ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಆದರೆ, ಅವರನ್ನು ಮಹಜರಿಗೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ ಅವರ ತುಟಿಯ ಮೇಲಿದ್ದ ಲಿಪ್‌ಸ್ಟಿಕ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಪವನ್‌ ಇಬ್ಬರನ್ನು ಜೂನ್ 15ರಂದು ಪೊಲೀಸರು ಸ್ಥಳ ಮಹಜರಿಗಾಗಿ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪವಿತ್ರಾ ಗೌಡ ಮುಖ ನೋಡಿದ ಮಾಧ್ಯಮದವರು ಮತ್ತು ಸಾರ್ವಜನಿಕರು ಹುಬ್ಬೇರಿಸಿದ್ದರು. ಇದಕ್ಕೆ ಕಾರಣ ಪವಿತ್ರಾ ಗೌಡ ಅವರ ಮೇಕಪ್ ಮತ್ತು ಎದ್ದು ಕಾಣುತ್ತಿದ್ದ ಲಿಪ್‌ಸ್ಟಿಕ್.

Pavitra Gowda Makeup Controversy Update Police in trouble

ಮೇಕಪ್‌ಗೆ ಅವಕಾಶ ನೀಡಿದ ಪಿಎಸ್​ಐಗೆ ಸಂಕಷ್ಟ

ಇಡೀ ಕರುನಾಡನ್ನು ಸ್ತಬ್ಧಗೊಳಿಸಿರುವ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಜೈಲು ಸೇರಿಸುವ ಘಟನೆ ಬಗ್ಗೆ ಪೊಲೀಸರು ತನಿಖೆ, ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಪವಿತ್ರಾ ಗೌಡ ಮೇಕಪ್ ಸುದ್ದಿ ಕೂಡ ಸಾಕಷ್ಟು ವೈರಲ್ ಆಗಿದೆ. ಹೀಗಾಗಿ ಲಿಪ್‌ಸ್ಟಿಕ್ ಹಚ್ಚಿಕೊಳ್ಳಲು ಅವಕಾಶ ನೀಡಿದ ಪಿಎಸ್​ಐಗೆ ಸಂಕಷ್ಟ ಎದುರಾಗಿದೆ.

ಮಹಜರಿಗೆ ಕರೆದುಕೊಂಡು ಹೋಗುವಾಗ ಮೇಕಪ್ ಮಾಡಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರು ನೋಟಿಸ್ ನೀಡಿದ್ದಾರೆ. ಪವಿತ್ರಾ ಗೌಡಗೆ ಮೇಕಪ್ ಮಾಡೋಕೆ ಯಾಕೆ ಬಿಟ್ಟಿದ್ದೀರಿ ಎಂದು ಕಾರಣ ಕೇಳಿ ಪಿಎಸ್‌ಐ ಗೀತಾ ಅವರಿಗೆ ಉತ್ತರ ಕೇಳಲಾಗಿದೆ.

Pavitra Gowda Makeup Controversy Update Police in trouble

ವಾಶ್‌ರೂಂಗೆ ಹೋಗಿದ್ದ ವೇಳೆ ಪವಿತ್ರಾಗೌಡ ಮೇಕಪ್!

ಪವಿತ್ರಾಗೌಡ ಮೇಕಪ್ ಮಾಡಿಕೊಂಡ ವಿಚಾರಕ್ಕೆ ಹಿರಿಯ ಅಧಿಕಾರಿಗಳ ನೋಟಿಸ್ ಗೆ ಉತ್ತರ ನೀಡಿರುವ ಪಿಎಸ್‌ಐ ಗೀತಾ ಮಹಜರು ವೇಳೆ ವಾಶ್ ರೂಮ್‌ಗೆ ಹೋಗಿದ್ದ ವೇಳೆ ಅಲ್ಲಿ ಇಟ್ಟಿದ್ದ ಮೇಕಪ್ ಸಾಮಾಗ್ರಿಗಳಿಂದ ಆರೋಪಿ ಪವಿತ್ರಾ ಗೌಡ ಮೇಕಪ್ ಮಾಡಿಕೊಂಡಿದ್ದಾರೆ. ನಾವು ಮೇಕಪ್‌ ಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಜೂನ್ 15ರಂದು ಸ್ಥಳ ಮಹಜರಿಗಾಗಿ ಪೊಲೀಸರ ಜೊತೆಗೆ ಹೋಗಿದ್ದ ಎ೧ ಆರೋಪಿ ಪವಿತ್ರಾ ಗೌಡ ಅವರ ಮುಖದಲ್ಲಿ ಯಾವ ಪಶ್ಚಾತಾಪವೂ ಕಾಣಿಸುತ್ತಿಲ್ಲ. ಬರಿ ಅಹಂ ಕಾಣಿಸುತ್ತಿದೆ ಎಂದು ಜನ ಅಭಿಪ್ರಾಯ ಪಟ್ಟಿದ್ದರು. ಅಂದು ಆಕೆಯ ಮುಖದಲ್ಲಿದ್ದ ನಗು ಮತ್ತು ಲಿಪ್‌ಸ್ಟಿಕ್ ನೋಡಿ ನೆಟ್ಟಿಗರು ಇಷ್ಟು ಕ್ರೂರತೆ ಇರಬಾರದು ಎಂದು ಟೀಕಿಸಿದ್ದರು.

ಪೊಲೀಸ್ ಕಸ್ಟಡಿಯಲ್ಲಿ ಇರುವ ಕೊಲೆ ಆರೋಪಿ ಪವಿತ್ರಾ ಗೌಡಗೆ ಮೇಕಪ್ ತಂದುಕೊಟ್ಟವರು ಯಾರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ಪ್ರಶ್ನೆಗಳು ವೈರಲ್ ಆಗುತ್ತಿದ್ದವು. ಇದನ್ನು ಗಂಭೀರವಾಗಿ ಪಎಇಗಣಿಸಿರುವ ಪೊಳಿಸರು ಮಹಿಳಾ ಪಿಎಸ್‌ಐನಿಮದ ಘಟನೆ ಬಗ್ಗೆ ನೋಟಿಸ್ ನೀಡಿ ಉತ್ತರ ಪಡೆದಿದ್ದಾರೆ.

ಇನ್ನು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ, ದರ್ಶನ್​ ಹಾಗೂ ಇತರ ಬಂಧಿತರಿಗೆ ನ್ಯಾಯಾಲಯ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇವರೆಲ್ಲ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ನಟ ದರ್ಶನ್ ಅವರ ಭೇಟಿಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ಬಂದಿದ್ದರೇ, ಪವಿತ್ರಾ ಗೌಡ ಭೇಟಿಗೆ ಮಗಳು ಖುಷಿ ಬಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+