Pavithra Gowda: ಬಿಗ್‌ ಅಪ್‌ಡೇಟ್‌‌‌ ಕೊಟ್ಟ ಪವಿತ್ರಾ ಗೌಡ

ಬೆಂಗಳೂರು, ಜನವರಿ 23: ಚಿತ್ರದುರ್ಗ ಮೂಲ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಹಾಗೂ ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರು ಬರೋಬ್ಬರಿ ಆರು ತಿಂಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರಗೆ ಬಂದಿದ್ದಾರೆ. ಆರು ತಿಂಗಳು ಜೈಲಿನಲ್ಲಿ ವಿಲವಿಲ ಎಂದಿದ್ದ ಪವಿತ್ರಗೌಡ ಹಾಗೂ ದರ್ಶನ್‌ ಸದ್ಯ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಆರು ತಿಂಗಳ ಬಳಿಕ ಜೈಲಿಂದ ಬರ್ತಿದ್ದಂತೆ ಪವಿತ್ರಾ ಗೌಡ ಅವರು ಅಮ್ಮನ ಮನೆ ಸೇರಿದ್ರು, ಬಳಿಕ ಹೊಸ ವರ್ಷದ ದಿನ ಆರ್​ ಆರ್​ ನಗರದ ಮನೆಗೆ ಬಂದಿದ್ರು. ಮನೆಯಲ್ಲಿ ಹೊಸ ವರ್ಷದಂದೇ ಪೂಜೆ ಕೂಡ ಮಾಡಿಸಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಹೊದ ವರ್ಷದಂದು ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದ್ದಾರಂತೆ. ಸದ್ಯ ನಟ ದರ್ಶನ್ ಜಾಮೀನು ರದ್ದು ಕೋರಿ ಪೊಲೀಸರ ಅರ್ಜಿ ವಿಚಾರಣೆ ಇದೇ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ನಟಿ ಪವಿತ್ರಾ ಗೌಡ ಅವರು ಬಿಗ್‌ ಅಪ್‌ಡೇಟ್‌ ಕೊಟ್ಟಿದ್ದಾರೆ ಎನ್ನಲಾಗಿದೆ.

Pavithra Gowda Gave A Big Update After Sankranti

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಬೆಂಗಳೂರು ಬಿಟ್ಟು ಹೊರ ಹೋಗಲು ಕೋರ್ಟ್ ಪರ್ಮಿಶನ್ ಕೊಟ್ಟ ಬೆನ್ನಲ್ಲೆ ಪವಿತ್ರಾಗೌಡ ಅವರು ದೆಹಲಿಗೆ ಹೋಗಿ ರೆಡ್ ಕಾರ್ಪೆಟ್ ಗೆ ಶಾಪಿಂಗ್ ಮಾಡಿ ಬಂದಿದ್ದಾರೆ ಎಂದು ಹೇಳಲಾಗಿದೆ. ಕಳೆದ ಸೋಮವಾರ ಶಾಪಿಂಗ್‌ಗಾಗಿ ದೆಹಲಿಗೆ ಹೋಗಿ ಪವಿತ್ರಾ ಗೌಡ ಅವರು ಬಂದಿದ್ದಾರೆ ಎನ್ನಲಾಗಿದೆ. ಇನ್ನೂ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ನಂತರ ರೆಡ್ ಕಾರ್ಪೆಟ್ ಕೆಲಸದಲ್ಲಿ ನಟಿ ಪವಿತ್ರಗೌಡ ಬ್ಯುಸಿಯಾಗಿದ್ದಾರೆ.

ಆರು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಪವಿತ್ರಾ ಗೌಡ ಹೊರ ಬಂದ ಬಳಿಕ ತಮ್ಮ ಜೀವನದ ಶೈಲಿಯನ್ನ ಬದಲಾಯಿಸಿಕೊಂಡಿದ್ದಾರೆ. ಧನುರ್ಮಾಸ ಮುಗಿದ ನಂತ್ರ ರೆಡ್ ಕಾರ್ಪೆಟ್ ರೀ ಓಪನ್ ಮಾಡಲು ಪವಿತ್ರ ತಯಾರಿ ನಡೆಸಿದ್ದು, ಈಗಾಗಲೇ ಬಟ್ಟೆ ಅಂಗಡಿಗೆ ರಾ ಮೇಟಿರಿಯಲ್ ಖರೀದಿಯಲ್ಲಿ ಬ್ಯುಸಿ ಆಗಿದ್ದರು ಎನ್ನಲಾಗಿತ್ತು. ಇದೀಗ ದೆಹಲಿಯಲ್ಲಿ ಶಾಪಿಂಗ್ ಮುಗಿಸಿ ಪವಿತ್ರ ಗೌಡ ಅವರು ರೆಡ್ ಕಾರ್ಪೆಟ್ ಓಪನ್ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಜೈಲು ಸೇರಿದ ಬಳಿಕ ರೆಡ್ ಕಾರ್ಪೆಟ್ ಶಾಪ್​ ಅನ್ನು ಪವಿತ್ರಾ ಗೆಳತಿ ಸಮತಾ ನಡೆಸುತ್ತಿದ್ರು. ಆದರೆ, ಕಳೆದ ಅಕ್ಟೋಬರ್ ನಿಂದ ರೆಡ್ ಕಾರ್ಪೆಟ್ ಶಾಪ್​ ​ ಕ್ಲೋಸ್ ಆಗಿತ್ತು. ಇದೀಗ ಧನುರ್ಮಾಸ ಮುಗಿಯುತ್ತಿದ್ದಂತೆ ಅದಷ್ಟು ಬೇಗ ರೆಡ್ ಕಾರ್ಪೆಟ್ ರೀಓಪನ್ ಅಂತ ಸ್ಟೇಟಸ್ ಕೂಡ ಪವಿತ್ರಾ ಗೌಡ ಹಾಕಿದ್ದಾರೆ. ರೆಡ್ ಕಾರ್ಪೆಟ್ ಓಪನ್ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿಯನ್ನ ಪವಿತ್ರಾ ಗೌಡ ಅವರು ಶೇರ್‌ ಮಾಡಿಕೊಂಡಿದ್ದಾರೆ.

ನಟಿ ಹಾಗೂ ನಟ ದರ್ಶನ್‌ ಅವರ ಗೆಳತಿ ಪವಿತ್ರಾ ಗೌಡ ಅವರು 2022ರಲ್ಲಿ ರೆಡ್ ಕಾರ್ಪೆಟ್ ಶಾಪ್ ಶುರು ಮಾಡಿದ್ರು. ಶಾಪ್​​ಗಾಗಿ 50 ಲಕ್ಷ ಬಂಡವಾಳ ಹೂಡಿಕೆ‌ ಮಾಡಿದ್ರೂ ಇದೀಗ ಮತ್ತೆ ಶಾಪ್​ ರೀ ಓಪನ್ ಮಾಡ್ತಿದ್ದಾರೆ . ಈಗಾಗಲೇ ಮುಚ್ಚಿದ್ದ ರೆಡ್‌ ಕಾರ್ಪೆಟ್‌ ಶಾಪ್‌ ಅನ್ನು ಪವಿತ್ರಾ ಗೌಡ ಅವರು ಕ್ಲೀನ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+