Darshan Thoogudeepa: ದರ್ಶನ್ ತೂಗುದೀಪ್‌ಗೆ ಜಾಮೀನು ಸಿಕ್ಕಿದ್ದಕ್ಕೆ ಪವಿತ್ರಾ ಗೌಡ ದಿಲ್ ಖುಷ್...
ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಜೈಲಾಧಿಕಾರಿಗಳ ಬಳಿ ಪವಿತ್ರಾ ಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇಂದು ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಹೀಗಾಗಿ ದರ್ಶನ್ ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ. ಇತ್ತ ಜೈಲಿನಲ್ಲಿರುವ ಪವಿತ್ರಾ ಗೌಡಗೂ ದರ್ಶನ್ ಅವರಿಗೆ ಜಾಮೀನು ಸಿಕ್ಕಿರುವ ವಿಚಾರ ಖುಷಿ ತಂದಿದೆ.
ಹೌದು.... ಪರಪ್ಪನ ಅಗ್ರಹಾರ ಮಹಿಳಾ ಜೈಲಿನಲ್ಲಿರುವ ಪವಿತ್ರಾ ಗೌಡ ಜೈಲಾಧಿಕಾರಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ. ದರ್ಶನ್ ತನ್ನಿಂದ ಜೈಲು ಸೇರುವ ರೀತಿ ಆಯ್ತು. ದರ್ಶನ್‌ಗೆ ಬೇಲ್ ಸಿಕ್ಕದ್ದು ನಿರಾಳ ಆಗಿದೆ ಎಂದು ಪವಿತ್ರಾ ಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ತೀರ್ಪು ನೀಡಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಜಾಮೀನು ಕೊಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಬರೋಬ್ಬರಿ 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಬರುತ್ತಿದ್ದಾರೆ.
ಇವತ್ತೇ ಜೈಲಿನಿಂದ ದರ್ಶನ್ ಬಿಡುಗಡೆಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆರು ವಾರಗಳ ಕಾಲ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಅವರ ಪಾಸ್‌ಪೋರ್ಟ್ ವಶಕ್ಕೆ ಪಡೆಯಲಾಗಿದ್ದು, ಈ ಸಮಯದಲ್ಲಿ ದರ್ಶನ್ ಎಲ್ಲಿ ಹೇಳ್ತಾರೋ ಅಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರ ಚಿಕಿತ್ಸೆ ಕೊಡಿಸಿ ಮೆಡಿಕಲ್ ರಿಪೋರ್ಟ್ ಕೊಡಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಆದರೆ ಚಿಕಿತ್ಸೆ ಪಡೆದ ಬಳಿಕ ಜೈಲಿಗೆ ವಾಪಸ್ ಬರಲೇಬೇಕಾಗುತ್ತದೆ. ಚಿಕಿತ್ಸೆಗೆ ಮಾತ್ರ ಹೈಕೋರ್ಟ್ ಆರು ವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಸಮಯದಲ್ಲಿ ಮೆಡಿಕಲ್ ರಿಪೋರ್ಟ್ ನೀಡಲು ಕೋರ್ಟ್ ಸೂಚನೆ ನೀಡಿದೆ. ಒಂದು ವೇಳೆ ಸರ್ಜರಿ ಬಳಿಕ ದರ್ಶನ್‌ಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದರೆ ಅಥವಾ ಇನ್ನೂ ಹೆಚ್ಚುವರಿ ಸಮಯ ಬೇಕಾದರೆ ಈ ಬಗ್ಗೆ ಕೋರ್ಟ್ ಗಮನಕ್ಕೆ ತರಬೇಕು.
ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ, ಸಾಕ್ಷಿನಾಶಕ್ಕೆ ಪ್ರಯತ್ನ ಪಡುವಂತಿಲ್ಲ. ಎರಡು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ನೀಡಬೇಕು. ಜಾಮೀನಿನ ದುರುಪಯೋಗ ಕಂಡು ಬಂದರೆ ಜಾಮೀನು ರದ್ದು ಮಾಡಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ಜೊತೆಗೆ ಚಿಕಿತ್ಸೆ ಪಡೆದ ನಂತರ ದರ್ಶನ್ ಜೈಲಿಗೆ ವಾಪಸ್ ಬರಬೇಕು.












Click it and Unblock the Notifications