Bhagyashri Borse: ದಕ್ಷಿಣಕ್ಕೆ ಮತ್ತೊಬ್ಬ ಭರವಸೆಯ ನಟಿ ಎಂಟ್ರಿ, ಈಕೆಯ ಚಾರ್ಮ್-ಸೌಂದರ್ಯವೇ ಸೆನ್ಸೇಷನ್!
ಬೆಂಗಳೂರು, ಆಗಸ್ಟ್ 06: ಸಿನಿಮಾ ನಟಿಯರ ವಿಚಾರಕ್ಕೆ ಬರುವುದಾದರೆ ಯಾವುದೇ ಚಿತ್ರರಂಗದಲ್ಲಿ ನೆಲೆ ನಿಲ್ಲಲು, ಉತ್ತಂಗಕ್ಕೆ ಏರಲು ಸಹಜ ಸುಂದರಿಯಾಗಿರುವುದರ ಜೊತೆಗೆ ಗ್ಲಾಮರ್, ಉತ್ತಮ ನಟನೆ, ನಟನೆ, ಡಾನ್ಸ್‌ನಂತರ ಅನೇಕ ಕೌಶಲ್ಯಗಳು ಇರಬೇಕು. ಈ ಸಾಲಿಗೆ ಈಗಾಗಲೇ ನಟಿ ರಶ್ಮಿಕಾ ಮಂದಣ್ಣ, ನಟಿ ಶ್ರೀಲೀಲಾ ಸೇರಿದ್ದಾರೆ. ಇದೀಗ ದಕ್ಷಿಣ ಭಾರತಕ್ಕೆ ಮತ್ತೊಬ್ಬ ನಟಿ ಎಂಟ್ರಿ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ನಟಿಯದ್ದೆ ಸೆನ್ಸೇಷನ್ ಶುರುವಾಗಿದೆ.
ಹೌದು, ನಾವು ಹೇಳಲು ಹೊರಟಿರುವ ಯುವ ನಟಿ ತೆಲುಗಿನ ಮಾಸ್ ಮಹಾರಾಜ ರವಿತೇಜ್ ಅವರ ಹೊಸ ಸಿನಿಮಾ 'ಮಿಸ್ಟರ್ ಬಚ್ಚನ್' ನಾಯಕಿ ಮತ್ತು ಮಾಡೆಲ್ ಭಾಗ್ಯಶ್ರೀ ಬೋರ್ಸೆ ಅವರು.

'ಮಿಸ್ಟರ್ ಬಚ್ಚನ್' ನಟಿ ಭಾಗ್ಯಶ್ರೀ ಬೋರ್ಸೆ ಅವರ ಮೂರನೇ ಸಿನಿಮಾ ಈ ಹಿಂದೆ ಅವರು, 'ಯಾರಿಯಾನ್ 2 (2023)', 'ವಿಡಿ12' ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ನಟಿಯ ಹೊಸ ಸಿನಿಮಾದ ಹಾಡು ಸಾಕಷ್ಟು ವೀಕ್ಷಣೆ ಪಡೆದಿದೆ. ನಟಿಯ ಡಾನ್ಸ್, ಸೌಂದರ್ಯ, ಆಕರ್ಷಕ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಟನೆ, ಗ್ಲಾಮರ್ ಲುಕ್‌ಗೆ ಶಹಬ್ಬಾಷ್‌ಗಿರಿ
ಒಂದೊಳ್ಳೆ ನಟರಾಗಲಿ, ನಟಿಯರಾಗಲಿ ಚಿತ್ರರಂಗಕ್ಕೆ ಕಾಲಿಟ್ಟರೇ ಅಭಿಮಾನಿಗಳು ಕೈ ಬಿಡಲ್ಲ ಎಂಬುದಕ್ಕೆ ಮತ್ತೊಮ್ಮೆ ಭಾಗ್ಯಶ್ರೀ ಬೋರ್ಸೆ ಅವರು ಪಾತ್ರರಾಗಲಿದ್ದಾರೆ. ಏಕೆಂದರೆ ತಮ್ಮದೇ ಆದ ನಟನೆ, ಗ್ಲಾಮರ್, ನೃತ್ಯದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಯುವ ನಟಿ ಎಂಬ ಭಾವನೆ ಮೂಡದಂತೆ ಅಭಿನಯಸಿದ್ದಾರೆ.
ನಿರ್ದೇಶಕ ಹರೀಶ್ ಶಂಕರ್ ನಿರ್ದೇಶನದ ನಟ ರವಿತೇಜ ಅವರ ಮಾಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಮಿಸ್ಟರ್ ಬಚ್ಚನ್' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ (ಟಾಲಿವುಡ್) ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡಿನಲ್ಲಿ ರವಿತೇಜ್ ಅವರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
ಸಿನಿಮಾ ಪ್ರೊಮೋ, ಹಾಡಿನಗಳು ಹಿಟ್ ಲಿಸ್ಟ್‌ಗೆ ಸೇರಿವೆ. ಇದೆಲ್ಲ ನೋಡುತ್ತಿದ್ದಂತೆ ನಟಿ ಭಾಗ್ಯಶ್ರೀ ಬೋರ್ಸೆ ಅವರು ಭರವಸೆ ನಟಿ ಮಾತ್ರವಲ್ಲದೇ, ಎಲ್ಲ ಪಾತ್ರಗಳಿಗೂ ಸೂಟ್ ಆಗುವಂತೆ ಕಾಣುತ್ತಾರೆ. ಸಾಂಪ್ರದಾಯಿಕವಾಗಿಯೂ, ಹಾಟ್ ಅವತಾರದಲ್ಲೂ ನಟಿಸಿ ಸೈಎನ್ನಿಸಿಕೊಳ್ಳುವ ಕೌಶಲ್ಯ ಇವರಲ್ಲಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ರಶ್ಮಿಕಾ, ಶ್ರೀಲೀಲಾ ಸಾಲಿಗೆ ಸೇರ್ತಾರಾ ಬೋರ್ಸೆ
ಸಿನಿಮಾದ 'ಸಿತಾರ್' ಮೊದಲ ಹಾಡು ಬಿಡುಗಡೆ ಆಗಿದೆ. ಈ ಹಾಡು, ಪ್ರೊಮೋ, ಟೀಸರ್ ಮೂಲಕವೇ ನಟಿ ಬೋರ್ಸೆ ಅವರು ಎಲ್ಲ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ 'ಮಿಸ್ಟರ್ ಬಚ್ಚನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದೇ ಆದಲ್ಲಿ ಭಾಗ್ಯಶ್ರೀ ಬೋರ್ಸೆ ಅವರು ನಟಿ ರಶ್ಮಿಕಾ ಮಂದಣ್ಣಾ ಹಾಗೂ ಶ್ರೀಲೀಲಾ ಅವರ ರೀತಿಯಲ್ಲಿ ಅತ್ಯಂತ ಬ್ಯುಸಿ ನಟಿಯರಲ್ಲಿ ಸಾಲಿಗೆ ಸೇರಲಿದ್ದಾರೆ.
ಸಿನಿಮಾ ಯಾವಾಗ ರಿಲೀಸ್
ಸಿನಿಮಾದ ಟೀಸರ್ ನೋಡಿದರೆ ಹಳ್ಳಿ ಹುಡುಗಿ ಪಾತ್ರದಲ್ಲಿ, ಸುಂದರವಾಗಿ ಮತ್ತು ಹಾಡಿನಲ್ಲಿ ಗ್ಲಾಮರ್ ಪಾತ್ರದಲ್ಲೂ ಮಿಂಚಿರುವ ಬೋರ್ಸೆ ಹಾಗೂ ರವಿತೇಜ ನಟನೆಯ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ನಾಳೆ ಆಗಸ್ಟ್ 07ರಂದು ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ.












Click it and Unblock the Notifications