Niveditha Gowda: ನಟಿ ನಿವೇದಿತಾ ವಿಡಿಯೋ ಭಾರೀ ವೈರಲ್, ಶೆಟ್ರೆ ಯಾಕ್ ಬಿಟ್ರಿ ಎಂದ ಫ್ಯಾನ್ಸ!

Niveditha Gowda Viral Video: ಕಾಮಿಡಿ ಶೋಗಳ ಮೂಲಕ ಹೆಚ್ಚು ರಂಜಿಸಿದ ನಟಿ ನಿವೇದಿತಾ ಗೌಡ ಅವರು ತಮ್ಮದೇ ಆದ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಅವರು ಅಭಿಮಾನಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಂಜಿಸುವುದನ್ನು ಮರೆಯುವುದಿಲ್ಲ. ಕೆಂಪು ಡ್ರೆಸ್‌ನಲ್ಲಿ ಸೊಂಟ ಬಳುಕಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗುತ್ತಿದೆ. ಅನೇಕರು ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ. ಜೊತೆಗೆ ಶೆಟ್ರನ್ನು ಟ್ಯಾಗ್ ಮಾಡಿ ಯಾಕ್ ಬಿಟ್ರಿ ಶೆಟ್ರೆ ಎಂದು ಕೇಳಿದ್ದಾರೆ.

ರ್ಯಾಪರ್ ಚಂದನ್ ಶೆಟ್ಟಿ ಅವರೊಂದಿಗೆ ಸಪ್ತಪದಿ ತುಳಿದಿ ಹಣೆ ಮಣೆ ಏರಿದ್ದ ನಟಿ ನಿವೇದಿತಾ ಗೌಡ ವಿವಾಹವಾಗಿ ನಾಲ್ಕು ವರ್ಷ ಅನ್ಯೂನ್ಯವಾಗಿದ್ದರು. ನಂತರ ಅದೇನಾಯ್ತು ಗೊತ್ತಿಲ್ಲ ಇಬ್ಬರು ಪರಸ್ಪರ ಒಪ್ಪಿ ಡಿವೋರ್ಸ್ ಪಡೆದಿದ್ದಾರೆ. ಅವರಿಬ್ಬರು ತಮ್ಮ ಭವಿಷ್ಯ, ನಟನೆ, ಹಾಡು ಮುಂತಾದ ಕೆಲಸಗಳನ್ನು ತೊಡಗಿಕೊಂಡಿದ್ದಾರೆ. ಹೀಗಿದ್ದರು ಇಬ್ಬರ ವಿಚಾರ ಸುದ್ದಿಯಲ್ಲಿರುತ್ತದೆ.

Niveditha Gowda s Dance Video in Red Outfit Goes Viral Fans Call Her Hot Beauty

ಇದೀಗ ಒಂದು ದಿನದ ಹಿಂದಿನ ನಿವೇದಿತಾ ಗೌಡ ಅವರು ಸೊಂಟ ಬಳುಕಿಸಿ ನೃತ್ಯ ಮಾಡುವ ವಿಡಿಯೋ ಹಂಚಿಕೊಂಡಿದ್ದರು. ಇದು ಒಂದೇ ದಿನದಲ್ಲಿ 2.3 ಮಿಲಿಯನ್ ವಿಕ್ಷಣೆ ಪಡೆದಿದೆ. 68 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, ಒಂದು ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಉದ್ದಕ್ಕೂ ನಿವೇದಿತ ಗೌಡ ಹಾಟ್, ಹಾಟ್ ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ಹಾಟ್ ಸುಂದರಿಯನ್ನು ಯಾಕ್ ಬಿಟ್ರಿ ಅಂತಲೂ ಕೆಲವರು ಮಾಜಿ ಪತಿ ಚಂದನ್ ಶೆಟ್ಟಿ ಅವರನ್ನು ಎಳೆದು ತಂದಿದ್ದಾರೆ.

ಕೆಂಪು ಹಾರ್ಟ್ ಸಿಂಬಾಲ್, ಬೆಂಕಿ ಎಮೋಜಿ ಕಳುಹಿಸುವ ಮೂಲಕ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಾವಳಿಗೆ ಮಾರುಕಟ್ಟೆಗೆ ಹೊಸ ಬಾಂಬ್ ಬಂದಿದೆ. ಹುಷಾರಾಗಿ ಎಂದು ಕೆಲವು ಕಾಲೆಳೆದಿದ್ದಾರೆ. ಅಲ್ಲದೇ ಅನೇಕ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದು, ಅದಕ್ಕೆ ಕೆಲವೊಬ್ಬರು ಮಹಿಳೆಯರಿಗೆ ಮರಿಯಾದೆ ಕೊಡಿ ಎಂದು ಆಗ್ರಹಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ಆಗಾಗ ಅನೇಕ ಫೋಟೋ ವಿಡಿಯೋಗಳನ್ನು ನಿವೇದಿತಾ ಗೌಡ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಅವರು ಕಲರ್ಸ್ ಕನ್ನಡದಲ್ಲಿ 'ಕ್ವಾಟ್ಲೆ ಕಿಚನ್' ಶೋನಲ್ಲಿ ಬ್ಯೂಸಿಯಾಗಿದ್ದಾರೆ. ಚಂದನ್ ಶೆಟ್ಟಿ ಅವರು ಸಹ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ. ಇಬ್ಬರು ಮತ್ತೆ ಒಂದಾಗುತ್ತಾರೆ ಎಂಬು ಸುಳ್ಳು ಸುದ್ದಿ ಸಹ ಹರಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+