Nayanthara Vs Dhanush: ನೀನೊಬ್ಬ ನೀಚ! ಧನುಶ್ ವಿರುದ್ಧ ನಯನಾತಾರ ಸಿಟ್ಟು
ನಯನತಾರಾ ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್. ತಮ್ಮದೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ. ಸದ್ಯ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ತಮಿಳುಚಿತ್ರರಂಗದಲ್ಲಿ ನಯನತಾರಾ ಮತ್ತು ಧನುಶ್ ನಡುವೆ ಸಂಘರ್ಷ ಉಂಟಾಗಿದ್ದು ತಾರಕಕ್ಕೇರಿದೆ. ಈ ಬೆನ್ನಲ್ಲೇ ನಯನತಾರಾ ಬರೋಬ್ಬರಿ 3 ಪುಟಗಳ ಸುದೀರ್ಘ ಪತ್ರವೊಂದನ್ನು ಬರೆದಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಧನುಷ್ ಮತ್ತು ನಯನಾತಾರಾ ನಡುವೆ ಸಂಘರ್ಷ ಉಂಟಾಗಲು ಡಾಕ್ಯುಮೆಂಟರಿ ಕಾರಣವಾಗಿದೆ. ಧನುಶ್ ನಿರ್ಮಾಣ ಮಾಡಿದ್ದ 2015 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ 'ನಾನುಮ್ ರೌಡಿ ಧಾನ್' ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ನಯನತಾರಾ ಕುರಿತಾದ ಸಾಕ್ಷ್ಯಚಿತ್ರವೊಂದನ್ನು ನೆಟ್‌ಫ್ಲಿಕ್ಸ್ ನಿರ್ಮಾಣ ಮಾಡುತ್ತಿದ್ದು, 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಎಂದು ಹೆಸರಿಟ್ಟಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಇದೀಗ ನಯನತಾರಾ ಕುರಿತಾದ ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ 'ನಾನುಮ್ ರೌಡಿ ಧಾನ್' ಸಿನಿಮಾದ ಕೇವಲ 3 ಸೆಕೆಂಡ್‌ನ ದೃಶ್ಯವನ್ನು ಬಳಕೆ ಮಾಡಿಕೊಂಡಿರುವುದಕ್ಕೆ ನಿರ್ಮಾಪಕ ಧನುಷ್ ಆಕ್ಷೇಪ ವ್ಯಕ್ತಪಡಿಸಿದ್ದು, 10 ಕೋಟಿ ರೂಪಾಯಿ ಪರಿಹಾರ ಕೊಡುವಂತೆ ನಯನತಾರಾ ಮತ್ತು ನೆಟ್‌ಫ್ಲಿಕ್ಸ್‌ಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ. ಇದಕ್ಕೆ ನಯನಾತಾರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.
ನಟ ಧನುಷ್ ವಿರುದ್ಧ ಟೀಕೆ
ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ನಯನತಾರಾ ಧನುಶ್‌ರನ್ನು ನೀಚ, ಅಹಂಕಾರಿ, ಹಣಕ್ಕಾಗಿ ಆಸೆ ಪಡುವ ವ್ಯಕ್ತಿ, ಕೃತಜ್ಞತೆ ಇಲ್ಲದ ಮನುಷ್ಯ ಎಂದು ಟೀಕಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಈ ಸಿನಿಮಾದ ಹಾಡು ಮತ್ತು ವಿಡಿಯೋ ತುಣುಕು ಬಳಸಿಕೊಳ್ಳಲು ಅನುಮತಿ ಕೇಳಿದ್ದೇವೆ, ನಿಮ್ಮಿಂದ ಯಾವುದೇ ಉತ್ತರ ಬರದೇ ಇದ್ದಾಗ ಅದೇ ಸಿನಿಮಾದ ಶೂಟಿಂಗ್ ದೃಶ್ಯಗಳನ್ನು ಬಳಸಿಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದ 3 ಸೆಕೆಂಡ್ ಬಳಸಿಕೊಂಡಿದ್ದಕ್ಕೆ 10 ಕೋಟಿ ರೂಪಾಯಿ ನೋಟಿಸ್ ಕೇಳಿದ್ದೀರಾ, ಸಿನಿಮಾದ ಹಾಡು ಬಳಸಿಕೊಳ್ಳಲು ಕೂಡ ಅವಕಾಶ ಕೊಡದೇ ಇರುವುದು ತುಂಬಾ ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ಸಿನಿಮಾ ಬಿಡುಗಡೆಯಾಗಿ 10 ವರ್ಷಗಳಾಗಿದೆ, ಆ ಸಿನಿಮಾ ನಿರ್ಮಾಣದ ವೇಳೆ ನೀನು ನಮ್ಮ ಮೇಲೆ ಅದೆಷ್ಟು ವಿಷ ಕಾರಿದ್ದೆ ಎನ್ನುವುದು ನನಗೆ ಇನ್ನೂ ನೆನಪಿದೆ. ಆ ಸಿನಿಮಾ ಗೆದ್ದರೂ, ನಿರ್ಮಾಕಪನಾದ ನೀನು ಸಿನಿಮಾ ತಂಡದ ವಿರುದ್ಧ ಅಸಹ್ಯವಾದ ಮಾತುಗಳನ್ನು ಆಡಿದ್ದೆ, ಸಿನಿಮಾ ಬಿಡುಗಡೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ನೀನು ಆಡಿರುವ ಮಾತುಗಳನ್ನು ನಾನು ಮರೆತಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮಗಳಲ್ಲಿ ನಿನ್ನ ಅಭಿಮಾನಿಗಳ ಎದುರು, ಸುಳ್ಳು ಹೇಳುತ್ತಾ, ನಾಟಕ ಆಡುತ್ತಾ ನೀನು ತುಂಬಾ ಒಳ್ಳೆಯವನು ಎನ್ನುವಂತೆ ಬಿಂಬಿಸುತ್ತಿದ್ದೀಯಾ. ಆದರೆ ನೀನೆಂಥ ನೀಚ ಎನ್ನುವುದು ಒಂದಲ್ಲ ಒಂದು ದಿನ ಜಗತ್ತಿಗೆ ಗೊತ್ತಾಗುತ್ತದೆ. ಹೆಚ್ಚು ದಿನ ಮುಖವಾಡ ಹಾಕಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಯನತಾರಾ ಹೇಳಿಕೆಗೆ ಅಭಿಮಾನಿಗಳು ಬೆಂಬಲಿಸಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಧನುಶ್ ಪರವಾಗಿ ಮಾತನಾಡಿದ್ದಾರೆ. ಒಟ್ಟಾರೆ ಇಬ್ಬರು ತಾರೆಗಳ ನಡುವಿನ ಜಗಳ ತಮಿಳು ಚಿತ್ರರಂಗದಲ್ಲಿ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.












Click it and Unblock the Notifications