Comedy Kiladigalu Nayana: 'ಗಂಡನಿಂದಲೇ ಗರ್ಭ ಧರಿಸಿದ ನಯನಾ' : ಕ್ಯಾಕರಿಸಿ ಉಗಿದ ನಟಿ
ನಾನು ಮೊದಲ ಬಾರಿಗೆ ಗರ್ಭಿಣಿಯಾದಗ ನನಗೆ ಅದು ತುಂಬಾ ಖುಷಿ ವಿಚಾರ. ನಾನು ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದನ್ನ ಶೇರ್ ಮಾಡಿಕೊಂಡಿದ್ದೆ, ಆ ಫೋಟೋಶೂಟ್ ಗೂ ಕೆಟ್ಟದಾಗಿ ಕಾಮೆಂಟ್ ಗಳು ಬಂದ್ವು ಎಂದು ಕಾಮಿಡಿ ಕಿಲಾಡಿ ನಯನಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಪಂಚದಲ್ಲಿ ಯಾರು ಗರ್ಭಿಣಿ ಆಗದನ್ನ, ಇವಳು ಆಗಿದ್ದಾರೆ ಅಂತ ಕಾಮೆಂಟ್ ಬಂದ್ವು, ನಾನು ಪ್ರತಿ ತಿಂಗಳು ಪ್ರಗ್ನೆಂಟ್ ಆಗಲ್ಲ. ಇದು ಮೊದಲ ಪ್ರೆಗ್ನೆನ್ಸಿ. ಆ ಪ್ರೆಗ್ನೆನ್ಸಿ ಖುಷಿಯೇ ಬೇರೆಯಾಗಿರುತ್ತದೆ. ಮಗು ನಮ್ಮೊಳಗೆ ಇದೆ ಅಂದಾಗ ಆ ಪ್ರಪಂಚವೇ ಬೇರೆ ನಮಗೆ ಎಂದು ಸಂದರ್ಶನದಲ್ಲಿ ಕಾಮಿಡಿ ಕಿಲಾಡಿಗಳು ನಯನಾ ಹೇಳಿದ್ದಾರೆ.

ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಕಾಮಿಡಿ ಕಿಲಾಡಿಗಳು ನಯನಾ ಅವರು ಕ್ಯಾಕರಿಸಿ ಉಗಿದಿದ್ದಾರೆ. ಪ್ರೆಗ್ನೆಂಟ್ ಆದಾಗ ನಾವು ಪ್ರತಿಯೊಂದು ವಿಚಾರದಲ್ಲೂ ಸಾವಿರ ಸರಿ ಯೋಚನೆ ಮಾಡುತ್ತೇವೆ. ಯಾವುದನ್ನ ತಿನ್ಬೇಕು, ಯಾವುದನ್ನ ಬಿಡ್ಬೇಕು ಅಂತ ಸಾವಿರ ಸರಿ ಯೋಚನೆ ಮಾಡುತ್ತೇವೆ. ಯಾವುದನ್ನ ತಿಂದ್ರೆ ಮಗುವಿಗೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ ಅಂತ ಯೋಚನೆ ಮಾಡ್ತಿವಿ. ಆ ತರ ಮಗುವಿಗಾಗಿ ಯೋಚನೆ ಮಾಡಿ, ನಿರ್ಧಾರ ತೆಗೆದುಕೊಳ್ಳುವವರು ನಾವು.
ನಮ್ಮ ಖುಷಿಗಾಗಿ ನಾನು ಪ್ರೆಗ್ನೆನ್ಸಿ ಫೋಟೋವನ್ನ ಶೇರ್ ಮಾಡಿಕೊಂಡ್ವಿ. ಗಂಡನಿಂದಲೇ ಗರ್ಭ ಧರಿಸಿದ ನಯನಾ ಅಂತ ಕಾಮೆಂಟ್ ಹಾಕ್ತಾರೆ. ಈ ಕಾಮೆಂಟ್ ನಿಂದ ನನ್ನ ಗಂಡನಿಗೆ ತುಂಬಾ ಬೇಸರವಾಯ್ತು. ಈ ಫೀಲ್ಡ್ ನಮಗೆ ಬೇಕಾ ಅಂತ ನನ್ನ ಗಂಡ ಕೇಳಿದ್ರು. ನಾನು ಕಾಮಿಡಿ ಕಿಲಾಡಿಗೆ ಹೋಗೋಕೆ ನನ್ನ ಗಂಡನೇ ಕಾರಣ ಎಂದು ಕೆಟ್ಟದಾಗಿ ಕಾಮೆಂಟ್ ಹಾಕಿದವರ ವಿರುದ್ಧ ನಯನಾ ಗರಂ ಆಗಿದ್ದಾರೆ.
ಕಾಮಿಡಿ ಕಿಲಾಡಿ ಯಾಕೆ ಆಡಿಷನ್ ಕೊಡ್ತಿಲ್ಲ. ಹೋಗು ಆಡಿಷನ್ ಕೊಡು ಅಂತ ನನ್ನ ಗಂಡನೇ ನನ್ನನ್ನ ಕಳ್ಸಿದ್ದು. ಜನ ಸಾವಿರ ಮಾತ್ನಾಡ್ಲಿ. ನಿನಗೆ ಆಕ್ಟಿಂಗ್ ಮಾಡೋಕೆ ಆಸಕ್ತಿ ಇದಿಯಾ? ಯಾಕೆ ಬಿಡ್ತಿಯಾ ಹೋಗು ಅಂತ ಕಳಿಸಿದವರೇ. ಈ ಕಾಮೆಂಟ್ ನಿಂದ ಯಾಕೆ ಬೇಕು ನಮಗೆ ಈ ಫೀಲ್ಡ್ ಅಂತ ಕೇಳಿದ್ದಾರೆ. ನಿನಗೆ ಮೂರು ಹೊತ್ತು ಹೊಟ್ಟೆ ತುಂಬಾ ಅನ್ನ ಹಾಕ್ತಿನಿ ನಾನು. ಇದೆಲ್ಲಾ ಬಿಟ್ಟು ಆರಾಮಗಿ ಮನೆಯಲ್ಲಿ ಇರು. ಒತ್ತಡ ತೆಗೆದುಕೊಂಡು ಕೆಲಸ ಮಾಡಬೇಡ ನೀನು ಅಂತ ನನ್ನ ಗಂಡ ಹೇಳಿದ್ರು. ಕಾಮೆಂಟ್ ಹಾಕುವವರ ಮನೆಯಲ್ಲಿ ಅವರ ಸೊಸೆ, ಮಗಳು ಪ್ರೆಗ್ನೆಂಟ್ ಆದ್ರೆ ಎಷ್ಟು ನಯ,ನಾಜೂಕುನಲ್ಲಿ ನೋಡಿಕೊಳ್ಳುತ್ತಾರೆ ಎಂದು ನಯನಾ ಅವರು ಹೇಳಿದ್ದಾರೆ.
ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಕುರಿತು ಸ್ಪಷ್ಟನೆ
ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತು ಜಗ್ಗಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಸ್ಪಷ್ಟನೆ ಕೊಡುತ್ತೇನೆ.ನಾವು ತುಂಬಾ ಚೆನ್ನಾಗಿದ್ದೇವೆ. ಬ್ಯಾಚುಲರ್ ಜೀವನ ತುಂಬಾ ಕಷ್ಟವಾಗಿತ್ತು. ಅಂತದರಲ್ಲಿ ಅವಳು ಈಗ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಜಗ್ಗಪ್ಪ ಡಿವೋರ್ಸ್ ಕುರಿತು ಸ್ಪಷ್ಟಪಡಿಸಿದ್ದಾರೆ.
'ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ. ದಯವಿಟ್ಟು ನಮ್ಮಿಬ್ಬರನ್ನು ದೂರ ಮಾಡಬೇಡಿ. ಅವಳ ಮನೆಯಲ್ಲಿ ಅವಳು ಕೆಲಸ ಮಾಡುತ್ತಿರಲಿಲ್ಲ. ಆದರೆ ಈಗ ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತಾಳೆ. ನಮಗೆಲ್ಲಾ ತಿಂಡಿ ರೆಡಿ ಮಾಡಿ, ಅವಳಿಗೆ ಆರು ಗಂಟೆಗೆ ಶೂಟಿಂಗ್ ಇದ್ದರೆ ಹೋಗುತ್ತಾಳೆ. ಮತ್ತೆ ಮನೆಗೆ ಬಂದು ಎಲ್ಲಾ ಕೆಲಸ ಮಾಡುತ್ತಾಳೆ. ನಾವಿಬ್ಬರು ತುಂಬಾ ಚೆನ್ನಾಗಿದ್ದೇವೆ. ತುಂಬಾ ಅನ್ಯೋನ್ಯವಾಗಿದ್ದೇವೆ ಎಂದು ಜಗ್ಗಪ್ಪ ತಿಳಿಸಿದ್ದಾರೆ.
ಇನ್ನೂ ಸುಶ್ಮಿತಾ ನನ್ನ ಎರಡನೇ ತಾಯಿ. ಅವಳು ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ನಾನು ನನ್ನ ಅಜ್ಜಿ ಮನೆಯಲ್ಲಿ ಬೆಳೆದಿದ್ದು, ನನಗೆ ತಾಯಿ ಪ್ರೀತಿನು ಸರಿಯಾಗಿ ಸಿಗಲಿಲ್ಲ. ಆಮೇಲೆ ಹಾಸ್ಟೆಲ್ ಜೀವನ ಹೀಗಾಗಿ ಜಾಸ್ತಿ ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ. ಆಮೇಲೆ ಕೆಲಸ ಅಂತಾ ಹೊರಗಡೆ ಬಂದೆ. ಈ ಜಂಜಾಟದಲ್ಲಿ ನಮಗೆ ತಾಯಿ ಪ್ರೀತಿ-ತಂದೆ ಪ್ರೀತಿ ನಮಗೆ ಸಿಕ್ಕೇ ಇಲ್ಲ. ಅದಾದ ಮೇಲೆ ಅತಿ ಹೆಚ್ಚು ಪ್ರೀತಿ ಕೊಟ್ಟಿದ್ದು ನನ್ನ ಪತ್ನಿ ಸುಶ್ಮಿತಾ. ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ ಎಂದು ನಟ ಜಗ್ಗಪ್ಪ ಭಾವುಕರಾಗಿದ್ದಾರೆ.
'ಮಜಾಭಾರತ ಆರಂಭದಲ್ಲಿ ಬಂದಾಗ ಯಾರ ಹತ್ತಿರನೂ ದುಡ್ಡಿರಲಿಲ್ಲ. ನನ್ನ ಹತ್ತಿರ ಆಗ ಎರಡು ಮೂರು ಟೀಶರ್ಟ್ ಎರಡು ಪ್ಯಾಂಟ್ ಇತ್ತು. ಸುಶ್ಮಿತಾನೇ ನನ್ನ ಕರೆದುಕೊಂಡು ಬಂದು ಅದೇ ಅದೇ ಬಟ್ಟೆ ಯಾಕೆ ಹಾಕಿ ಕೊಳ್ಳುತ್ತೀರಾ ಅಂತಾ ಬಗ್ಗೆ ಕೊಡಿಸಿದ್ದಳು. ನಮಗೆ ಬೆಂಗಳೂರು ಪರಿಚಯಿಸಿದ್ದೇ ಸುಶ್ಮಿತಾ. ಜೊತೆಗೆ ಇಲ್ಲಿ ಜೀವನ ತೋರಿಸಿದ್ದು ಸಹ ಅವರೇ ನನಗೆ. ಅವಳಿಲ್ಲ ಅಂದರೆ ನಾನು ಇಲ್ಲಿ ಇರುತ್ತಾನೇ ಇರಲಿಲ್ಲ. ವಾಪಸ್ ಹೋಗುತ್ತಿದೆ. ಅವತ್ತು ನನ್ನ ಜೊತೆಗಿದ್ದು, ನನಗೆ ಒಂದು ಜೀವನ ಕೊಟ್ಟು ಇಂದು ನನ್ನ ಜೊತೆಗೆ ಜೀವನ ಮಾಡುತ್ತಿದ್ದಾಳೆ. ಅದಕ್ಕೆ ಅವಳು ನನ್ನ ಎರಡನೇ ತಾಯಿ' ಎಂದರು.
ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಎನ್ನುವ ಸುದ್ದಿಗೆ ಜಗ್ಗಪ್ಪ ಸ್ಪಷ್ಟನೆ ನೀಡಿದ್ದು, ನಾನು ಸುಶ್ಮಿತಾ ತುಂಬಾ ಚೆನ್ನಾಗಿದ್ದೇವೆ. ಬ್ಯಾಚುಲರ್ ಜೀವನ ತುಂಬಾ ಕಷ್ಟವಾಗಿತ್ತು. ಅಂತದರಲ್ಲಿ ಅವಳು ಈಗ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಅನುಶ್ರೀ ಮುಂದೆ ಜಗ್ಗಪ್ಪ ಹೇಳಿಕೊಂಡಿದ್ದಾರೆ.












Click it and Unblock the Notifications