Nandamuri Balakrishna: ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ ತೆಲುಗು ನಟ ಬಾಲಕೃಷ್ಣ; ವ್ಯಾಪಕ ಆಕ್ರೋಶ
ತೆಲುಗು ಸಿನಿಮಾ ರಂಗದ ಹಿರಿಯ, ಖ್ಯಾತ ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ಅವರು, ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ನಟಿಯನ್ನು ತಳ್ಳಿದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ನಟನ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
'ಗ್ಯಾಂಗ್ಸ್ ಆಫ್ ಗೋದಾವರಿ' ಎನ್ನುವ ತೆಲುಗು ಸಿನಿಮಾ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆಯಲ್ಲಿ ನಟಿ ಅಂಜಲಿಯನ್ನು ದೂರ ತಳ್ಳುತ್ತಿರುವ ವಿಡಿಯೋ ಸದ್ಯ ವಿವಾದಕ್ಕೆ ಕಾರಣವಾಗಿದೆ.

ವೈರಲ್ ವೀಡಿಯೊದಲ್ಲಿ, ನಟ ಮತ್ತು ರಾಜಕಾರಣಿ ಬಾಲಕೃಷ್ಣ ಅವರು ವೇದಿಕೆಯಲ್ಲಿ ನಟಿಯನ್ನು ಅನುಚಿತ ರೀತಿಯಲ್ಲಿ ತಳ್ಳುತ್ತಿರುವುದನ್ನು ನೋಡಬಹುದು. ನಟಿ ಒಂದು ಕ್ಷಣ ತಬ್ಬಿಬ್ಬಾಗಿದ್ದು, ಬಳಿಕ ನಗುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ವೇದಿಕೆಯಲ್ಲಿದ್ದ ಸಹ ನಟರಾದ ವಿಶ್ವಕ್ ಸೇನ್ ಮತ್ತು ನೇಹಾ ಶೆಟ್ಟಿ ಅವರು ಘಟನೆಯನ್ನು ನಿರ್ಲಕ್ಷಿಸಿದರು.
ಸಾರ್ವಜನಿಕರಿಂದ ಟೀಕೆ
ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತೆಲುಗು ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟನ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Telugu actor and politician #NandamuriBalakrishna aka Balayya stirred controversy after a video of him pushing actor #Anjali on stage at the '#GangsOfGodavari' event went viral. pic.twitter.com/2NkCMihikX
— 𝑩𝒓𝒂𝒊𝒏𝑩𝒊𝒕𝒆𝒔 (@PublicHaiHum) May 30, 2024
ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ನಟನನ್ನು ಟೀಕಿಸುವ ಮತ್ತು ಅಂಜಲಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ, ಎಕ್ಸ್‌ನಲ್ಲಿ ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದು, "ಯಾರು ಈ ಕೊಳಕು?" ಎಂದು ಪ್ರಶ್ನೆ ಮಾಡಿದ್ದಾರೆ.
ಆ ವ್ಯಕ್ತಿ ತೆಲುಗು ಹಿರಿಯ ನಟ, ಆಂಧ್ರಪ್ರದೇಶದ ಶಾಸಕ ಮತ್ತು ತೆಲುಗು ನಟ ಮತ್ತು ಮಾಜಿ ಆಂಧ್ರಪ್ರದೇಶದ ಮಾಜಿ ಸಿಎಂ ಎನ್‌ಟಿ ರಾಮರಾವ್ ಅವರ ಪುತ್ರ ನಂದಮೂರಿ ಬಾಲಕೃಷ್ಣ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಈ ಘಟನೆ ಬಗ್ಗೆ ನಟಿ ಅಂಜಲಿ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಆಕೆಯ ಮೌನವು ವ್ಯಾಪಕವಾದ ಊಹಾಪೋಹಗಳಿಗೆ ಕಾರಣವಾಗಿದೆ, ಕೆಲವರು ಬಾಲಕೃಷ್ಣ ಚಿತ್ರರಂಗದ ಪ್ರಮುಖರಾಗಿದ್ದು, ಅವಕಾಶ ಕೈತಪ್ಪುವ ಭಯದಿಂದ ಸುಮ್ಮನಿರಬಹುದು, ಅಥವಾ ಆಕೆಯ ಮೇಲೆ ಒತ್ತಡ ಇರಬಹುದು ಎಂದು ಹೇಳಿದ್ದಾರೆ.
ನಂದಮೂರಿ ಬಾಲಕೃಷ್ಣ ಪ್ರಸ್ತುತ ತಮ್ಮ 109 ನೇ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದು ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications