ಆ ನಟ ನನ್ನ ಕೆನ್ನೆಗೆ 14 ಸಲ ಬಾರಿಸಿದ: "ಸೂರ್ಯವಂಶ" ನಟಿಗೆ ಆ ದಿನ ಆಗಿದ್ದೇನು?
ಸ್ಯಾಂಡಲ್‌ವುಡ್ ಮಂದಿಗೆ ಇಶಾ ಕೊಪ್ಪಿಕರ್ (Isha Koppikar) ಗೊತ್ತಾ ಅಂದ್ರೆ ಅಷ್ಟಾಗಿ ನೆನಪಿಗೆ ಬರಲ್ಲ. ಆದರೆ "ಸೂರ್ಯವಂಶ"ದ ಸತ್ಯಮೂರ್ತಿಗಳ ಸೊಸೆ ಅಂದ್ರೆ ಗೊತ್ತು..ಗೊತ್ತು ಅಂತಾರೆ. ಅಷ್ಟರ ಮಟ್ಟಿಗೆ ಅವರ ಪಾತ್ರ ಇಂದಿಗೂ ಸಿನಿಪ್ರೇಕ್ಷಕರ ತಲೆಯಲ್ಲಿ ಕೂತಿದೆ. 90ರ ದಶಕದಲ್ಲೇ ಚಂದನವನದಲ್ಲಿ ಕೆಲವೇ ಸಿನಿಮಾಗಳನ್ನು ಮಾಡಿದ್ದ ನಟಿ ಇಶಾ ಕೊಪ್ಪಿಕರ್ ಇಂದಿಗೂ ಅದೇ ಪಾತ್ರದಿಂದ ಗುರುತಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಿಂಚಿರುವ ಅವರು ಹಲವು ವರ್ಷಗಳ ನಂತರ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ನಟರೊಬ್ಬರು ತಮ್ಮ ಕೆನ್ನೆಗೆ 14 ಬಾರಿ ಹೊಡೆದಿದ್ದರು ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ, ಹೂ ಅಂತಿಯಾ ಉಹೂ ಅಂತಿಯಾ, ಕವಚ ಸಿನಿಮಾಗಳಲ್ಲಿ ಇಶಾ ನಟಿಸಿದ್ದರು. ಇನ್ನು ವಿಷ್ಣುವರ್ಧನ್ ಅವರೊಂದಿಗೆ ಸೂರ್ಯವಂಶ ಚಿತ್ರದಲ್ಲಿ ಇವರ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ. ಇದು ಅವರ ಕನ್ನಡ ಚೊಚ್ಚಲ ಸಿನಿಮಾ. ಮೊದಲ ಸಿನಿಮಾದಲ್ಲೇ ಇಶಾ ಅವರು ಫುಲ್ ಫೇಮಸ್ ಆಗಿದ್ದರು. ಡಬಲ್ ರೋಲ್‌ನಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರಿಗೆ ಕನಕಮೂರ್ತಿಯ ಪತ್ನಿಯಾಗಿ, ಸತ್ಯಮೂರ್ತಿಯ ಸೊಸೆ ಎಂದೇ ಇಶಾ ಹೆಸರು ಪಡೆದಿದ್ದರು. ಸದ್ಯ ಅವರು ಬಾಲಿವುಡ್‌ನಲ್ಲೇ ಇದ್ದು, ಇತ್ತೀಚಿನ ಸಂದರ್ಶನದಲ್ಲಿ ನಟರೊಬ್ಬರು ತಮ್ಮ ಕೆನ್ನೆಗೆ 14 ಸಲ ಬಾರಿಸಿದ ವಿಚಾರ ಹೇಳಿಕೊಂಡಿದ್ದಾರೆ.

ಇಶಾ ಕೊಪ್ಪಿಕರ್ ತಮ್ಮ ನಟನೆಯ ಪ್ರಾರಂಭದ ದಿನಗಳಲ್ಲಿ ನಡೆದ ಒಂದು ಘಟನೆಯನ್ನು ಪ್ರಸ್ತಾಪಿಸಿದ್ದಾರೆ. 1998ರ "ಚಂದ್ರಲೇಖಾ" ಸಿನಿಮಾ ಶೂಟಿಂಗ್ ವೇಳೆ ಈ ಘಟನೆ ನಡೆಯಿತು. ಆ ಸಿನಿಮಾದಲ್ಲಿ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಅವರೊಂದಿಗೆ ಇಶಾ ನಟಿಸಿದ್ದು, ಶೂಟಿಂಗ್ ವೇಳೆ ನಿಜವಾಗಿ ಕೋಪ ತರಿಸಿಕೊಳ್ಳಬೇಕು ಎಂದು ದಯವಿಟ್ಟು ನನ್ನ ಕೆನ್ನೆಗೆ ನಿಜವಾಗಿ ಹೊಡೆಯಿರಿ ಎಂದು ಕೇಳಿಕೊಂಡೆ. ಮೊದಲಿಗೆ ಅವರು ಒಪ್ಪಲಿಲ್ಲ. ಕೊನೆಗೆ ನಾನು ಹೇಳಿದಂತೆ ನನಗೆ ಕಪಾಳಮೋಕ್ಷ ಮಾಡಿದರು. ಆದರೆ ನನಗೆ ಅದು ಅಷ್ಟಾಗಿ ತೃಪ್ತಿ ನೀಡಲಿಲ್ಲ. ಅದು ನನ್ನ ಎರಡನೇ ಸಿನಿಮಾ ಆಗಿದ್ದರಿಂದ ನಾಗ್ ನೀನು ನಿಜವಾಗಿಯೂ ನನ್ನನ್ನು ಹೊಡೆಯಿರಿ ಎಂದು ಹೇಳಿದೆ. ಆಗ ಅವರು ನನ್ನಿಂದ ಆಗಲ್ಲ ಎಂಬ ವಿಚಾರ ಹೇಳಿದ್ದಾರೆ.
ನಾಗಾರ್ಜುನ್‌ಗೆ ನಾನೇ ಕೇಳಿದೆ
ಈ ಸೀನ್‌ಗಾಗಿ ನನಗೆ ನಿಜವಾಗಿಯೂ ಕೋಪದ ಭಾವನೆ ಬೇಕು. ನನಗೆ ಅದು ಅನಿಸುತ್ತಿಲ್ಲ ಎಂದು ಕೇಳಿಕೊಂಡೆ. ಕೊನೆಗೆ ನಾನು ಕೋಪಗೊಂಡಂತೆ ಕಾಣುವಂತೆ ಮಾಡಲು ಪ್ರಯತ್ನಿಸಿದಾಗ, ಅವರು ನನಗೆ 14 ಬಾರಿ ಕಪಾಳಮೋಕ್ಷ ಮಾಡಿದರು. ಕೊನೆಯಲ್ಲಿ ನನ್ನ ಮುಖದ ಮೇಲೆ ಕಪಾಳಮೋಕ್ಷದ ಗುರುತುಗಳು ಕೂಡ ಇದ್ದವು. ಬಳಿಕ ನಾಗಾರ್ಜುನ್ ನನಗೆ ಕ್ಷಮೆ ಕೇಳಿದರು. ನೀವು ಏಕೆ ಕ್ಷಮಿಸಿ ಎಂದು ಕೇಳುತ್ತಿದ್ದೀರಿ? ಎಂದು ಕೇಳಿದೆ ಎಂದು ಇಶಾ ಆ ಸನ್ನಿವೇಷವನ್ನು ನೆನೆಪು ಮಾಡಿಕೊಂಡಿದ್ದಾರೆ. ಇಶಾ ಮೊದಲು ದಕ್ಷಿಣ ಚಿತ್ರರಂಗದಲ್ಲಿ ಕೆಲಸ ಮಾಡಿ, ಬಳಿಕ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ.












Click it and Unblock the Notifications