Sanvi Sudeep: ನನ್ನ ಸ್ಕೂಲ್ ಲೈಫ್ ಕಷ್ಟಕರವಾಗಿತ್ತು: ಮನದಾಳದ ಮಾತು ಹಂಚಿಕೊಂಡ ಸಾನ್ವಿ ಸುದೀಪ್!
ಸ್ಟಾರ್ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಕಾಮನ್. ಈಗಾಗಲೇ ಹಲವು ನಟ-ನಟಿಯರ ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಯಶಸ್ಸು ಗಳಿಸುತ್ತಾರೆ, ಮತ್ತೆ ಕೆಲವರು ಸೂಕ್ತ ತಯಾರಿ ಮಾಡಿಕೊಂಡು ಚಂದನವನದಲ್ಲಿ ನೆಲೆ ಕಂಡುಕೊಳ್ಳಲು ಹಲವು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದ ದೂರವಿರುವ ಕೆಲ ನಟರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸಿನಿಮಾ ರಂಗದಿಂದ ದೂರ ಉಳಿದಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ರಾಧಾಕೃಷ್ಣನ್ ಅವರ ಮುದ್ದಿನ ಪುತ್ರಿ ಸಾನ್ವಿ ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸ್ಟಾರ್ ಮಗಳ ಜೀವನದ ನೋವು-ಸಂತೋಷದ ಬಗ್ಗೆ ಯೂಟ್ಯೂಬ್ ಚಾಲೆನ್ ಒಂದರಲ್ಲಿ ಸಾನ್ವಿ ಸುದೀಪ್ ಅವರು ಮಾತನಾಡಿದ್ದಾರೆ. ಸೂಪರ್‌ಸ್ಟಾರ್ ಮಗಳಾಗಿ ನನ್ನ ಸ್ಕೂಲ್ ಲೈಫ್ ಕಷ್ಟಕರವಾಗಿತ್ತು. ದೊಡ್ಡ ಕಾರಲ್ಲಿ ಬರುತ್ತಿದ್ದ ನನ್ನನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಮಕ್ಕಳಿಗೆಲ್ಲ ಅವರ ಮನೆಯವರು ನನ್ನ ಬಗ್ಗೆ ಹೇಳಿದ್ದರು ಅನಿಸುತ್ತೆ ಎಂದು ಸಾನ್ವಿ ಅವರು ಹೇಳಿದ್ದಾರೆ.

ಸೂಪರ್‌ಸ್ಟಾರ್ ಮಗಳಾಗಿ ನನ್ನ ಸ್ಕೂಲ್ ಲೈಫ್ ಕಷ್ಟಕರವಾಗಿತ್ತು. ದೊಡ್ಡ ಕಾರಲ್ಲಿ ಬರುತ್ತಿದ್ದ ನನ್ನನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಮಕ್ಕಳಿಗೆಲ್ಲ ಅವರ ಮನೆಯವರು ನನ್ನ ಬಗ್ಗೆ ಹೇಳಿದ್ದರು ಅನಿಸುತ್ತೆ, ಅವಳು ಸ್ಟಾರ್ ಮಗಳು, ಅಹಂಕಾರಿ ಆಗಿರ್ತಾಳೆ, ಅವಳ ಜೊತೆ ಸೇರಬೇಡ ಅಂತೆಲ್ಲ. ಮಕ್ಕಳೆಲ್ಲ ನನ್ನನ್ನು ದೂರವೇ ಇಡುತ್ತಿದ್ದರು. ಮನಸ್ಸಿಗೆ ನೋವಾಗುವಂತೆ ಮಾತಾಡುತ್ತಿದ್ದರು. ಕ್ರಮೇಣ ಇದಕ್ಕೆಲ್ಲ ಹೊಂದಿಕೊಳ್ಳುತ್ತ ನನ್ನ ಸಂತೋಷವನ್ನು ಇನ್ನೊಬ್ಬರಿಂದ ನಿರೀಕ್ಷಿಸುವ ಬದಲು ನಾನೇ ಕಂಡುಕೊಳ್ಳತೊಡಗಿದೆ ಎಂದು ತಿಳಿಸಿದ್ದಾರೆ.
ಮೊದಲಿನಿಂದಲೂ ನಾನು ನನಗೆ ಏನು ಕಂಫರ್ಟ್ ಇದೆಯೋ ಹಾಗಿರುತ್ತೇನೆ. ಒಮ್ಮೆ ಹಳೆ ಸಾದಾ ಸೀದ ಉಡುಗೆಯಲ್ಲಿ ಸ್ನಾನವೂ ಮಾಡದೇ ಮುಖದ ತುಂಬ ಪಿಂಪಲ್ಸ್ ಇಟ್ಟುಕೊಂಡು ಅಪ್ಪನ ಜೊತೆ ಹೊರಬಂದಿದ್ದೆ. ಅಷ್ಟೊತ್ತಿಗೆ ಅಲ್ಲಿದ್ದ ಜನರೆಲ್ಲ ನನ್ನನ್ನು ಒಂಥರಾ ನೋಡಿದರು. ನನ್ನ ಬಗ್ಗೆ ಕಾಮೆಂಟ್ ಮಾಡಿದರು. ನನ್ನ ದೇಹದ ಬಗ್ಗೆ, ನನ್ನ ಬಟ್ಟೆ ಬಗ್ಗೆ ಅವಹೇಳನ ಮಾಡಲಾರಂಭಿಸಿದರು. ಇದು ಆಮೇಲೂ ಮುಂದುವರಿಯಿತು. ಜನ ನನಗೆ ಹೇಗೆ ತೂಕ ಇಳಿಸಬೇಕು ಅಂತ ಸಲಹೆ ನೀಡಲಾರಂಭಿಸಿದರು. ಇವೆಲ್ಲ ಬಹಳ ನೋವು ತರಿಸುತ್ತಿದ್ದವು. ನಿಮಗೆ ನಾನು ಇಷ್ಟವಾಗಿಲ್ಲ ಅಂದರೆ ಬಿಟ್ಟುಬಿಡಿ, ಯಾಕೆ ಕಾಮೆಂಟ್ ಮಾಡುತ್ತೀರಿ.. ಆದರೂ ನಾನು ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಕ್ರಮೇಣ ಜನರ ಹಾವಳಿ ಕಡಿಮೆ ಆಯ್ತು ಎಂದು ಸಾನ್ವಿ ಬೇಸರ ವ್ಯಕ್ತಪಡಿಸಿದರು.
ನನ್ನನ್ನು ಬಹಳ ಮಂದಿ ಸುದೀಪ್ ಮಗಳು ಅಂತ ಗುರುತಿಸುತ್ತಾರೆ. ನಾನವರಿಗೆ ಹೇಳೋದು ನನಗೆ ಒಂದು ಹೆಸರಿಟ್ಟಿದ್ದಾರೆ, ಸಾನ್ವಿ ಅಂತ. ಅದರಿಂದಲೇ ಕರೆಯಬಹುದಲ್ವಾ, ಹಾಗೆಂದು ನನ್ನ ಸರ್‌ನೇಮ್ ಬಗ್ಗೆ, ಅಪ್ಪನ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಅಪ್ಪನ ಮೂಲಕ ಗುರುತಿಸಿಕೊಳ್ಳೋದಕ್ಕಿಂತ ನನ್ನನ್ನು ನಾನಾಗಿ ಗುರುತಿಸುವುದು ಇಷ್ಟ. ಅಪ್ಪನ ಸಹಾಯವಿಲ್ಲದೇ, ಅವರ ಯಾವುದೇ ಇನ್‌ಫ್ಲುಯೆನ್ಸ್ ಇಲ್ಲದೇ ಸ್ವತಂತ್ರವಾಗಿ ನನ್ನ ಕೆರಿಯರ್ ನಾನೇ ಬೆಳೆಸುವಂತಾದ ದಿನ ನನ್ನನ್ನು ನಾನು ಯಶಸ್ವಿ ಅಂತ ಕರೆಯುತ್ತೇನೆ ಎಂದು ಸಾನ್ವಿ ಸುದೀಪ್ ಅವರು ಹೇಳಿದ್ದಾರೆ.












Click it and Unblock the Notifications