ಡಿವೋರ್ಸ್ ನೋವು ಮರೆಯಲು ಚಂದನ್‌ ಶೆಟ್ಟಿ ಹೊಸ ಐಡಿಯಾ ಏನು ಗೊತ್ತಾ..?

ಕಿರುತೆರೆಯ ಸ್ಟಾರ್‌ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ದೂರಾಗಿ ಒಂದು ತಿಂಗಳು ಕಳೆಯುತ್ತಿದ್ದು, ಚಂದನ್ ತಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.

ವಿಚ್ಛೇದನ ಬಳಿಕ ಚಂದನ್‌ ಶೆಟ್ಟಿ ಹೇಗಿದ್ದಾರೆ. ಈ ಘಟನೆಯ ಬಳಿಕ ಅವರು ಓವರ್‌ ಕಮ್‌ ಮಾಡಲು ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಮಿಸ್ಟರ್‌ ಡಿ ಪಿಕ್ಚರ್‌ ಜೊತೆ ಚಂದನ್‌ ಶೆಟ್ಟಿ ಮಾತನಾಡಿದ್ದಾರೆ.

Music Director Chandan Shetty New Ideas To Forget The Pain Of Divorce

'ವೈಯಕ್ತಿಕ ಜೀವನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆಯಾ ಎನ್ನುವ ಪ್ರಶ್ನೆಗೆ ಚಂದನ್‌ ಶೆಟ್ಟಿ ಉತ್ತರಿಸಿದ್ದಾರೆ. ಸಹಜವಾಗಿ ಇಬ್ಬರು ಒಂದೇ ಕ್ಷೇತ್ರದಲ್ಲಿ ಇದ್ದಾಗ ಆ ರೀತಿ ಒಂದಿಷ್ಟು ಸಮಸ್ಯೆಗಳಾಗುವುದು ಬಹಳ ಸಹಜ ಅಂತಾ ಅಂದುಕೊಂಡಿದ್ದೇನೆ. ಅದೆ ರೀತಿ ಆಗಿದೆ ಕೂಡ. ವೈಯಕ್ತಿಕ ಜೀವನ ವೃತ್ತಿ ಜೀವನಕ್ಕೆ ತೊಂದರೆ ಆಗಿಲ್ಲ ಎಂದು ಹೇಳುವುದಿಲ್ಲ ಎಲ್ಲೋ ಒಂದು ಕಡೆ ಹೈಸ್ಪೀಡ್‌ನಲ್ಲಿ ಹೋಗಬೇಕಿದ್ದ ಗಾಡಿ ಸ್ವಲ್ಪ ಸ್ಲೋ ಡೌನ್‌ ಆಯಿತು ಅಂತಾ ನನಗೆ ಅನಿಸುತ್ತದೆ ಎಂದರು.

ಇನ್ನು ಡಿವೋರ್ಸ್ ನೋವಿನಿಂದ ಹೊರಬರುವ ಬಗ್ಗೆ ಮಾತನಾಡಿದ ಚಂದನ್‌, ಇದರಿಂದ ಓವರ್ ಕಮ್‌ ಮಾಡಲು ಲೈಫ್‌ ಅಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದೇನೆ. ಕೆಲಸದಲ್ಲಿ ಬ್ಯೂಸಿಯಾಗಿದ್ದೇನೆ. ಇಲ್ಲದಿದ್ರೆ ಮನೆಯಲ್ಲಿ ರೂಮ್‌ನಲ್ಲಿ ಒಬ್ಬನೆ ಕುಳಿತುಕೊಂಡು ಅಳಬೇಕು ಅಷ್ಟೆ. ಜೀವನ ಮುಂದುವರಿಯಬೇಕು ಎಂದು ಹೇಳಿದರು.

Music Director Chandan Shetty New Ideas To Forget The Pain Of Divorce

ಅಷ್ಟೇ ಅಲ್ಲದೇ ಇಂತಹ ಸಂದರ್ಭದಲ್ಲಿ ನಾನು ಹೊರಗೆ ಬರಲು ಸಂಗೀತ ನನ್ನ ಕೈ ಹಿಡಿಯಿತು. ನೂರಕ್ಕೆ ನೂರಷ್ಟು ಮ್ಯೂಸಿಕ್‌ ನನ್ನ ಜೊತೆಗಿತ್ತು. ಮ್ಯೂಸಿಕ್‌ ಆಗಿರಬಹುದು, ಸಿನಿಮಾ ಆಗಿರಬಹುದು, ವಿಶೇಷವಾಗಿ ನನ್ನ ಫಾಲೋವರ್ಸ್ ಹಾಗೂ ಫ್ಯಾನ್ಸ್‌ ನನ್ನ ಜೊತೆಗೆ ನಿಂತುಕೊಂಡರು. ಸಾವಿರಾರು ಜನ ಮೆಸೇಜ್‌ ಮಾಡುತ್ತಾರೆ. ನಾನಂತೂ ಎಲ್ಲರ ಮೆಸೇಜ್‌ ನೋಡಿ ಓದಿ ರೀಪ್ಲೆ ಮಾಡಿದ್ದೇನೆ. ಇಂತಹ ಸಮಯದಲ್ಲಿ ನನಗೆ ಸ್ಪಂದಿಸಿದರಲ್ಲ. ಅವರ ಮಾತುಗಳು ನನಗೆ ಡಿಪ್ರೆಷನ್‌ಗೆ ಹೋಗಲು ಬಿಡಲೇ ಇಲ್ಲ ಎಂದು ಚಂದನ್‌ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+