ಡಿವೋರ್ಸ್‌ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ಎ.ಆರ್.ರೆಹಮಾನ್‌ ಪತ್ನಿ

ಖ್ಯಾತ ಸಂಗೀತ ಸಂಯೋಜಕ ಎ.ಆರ್‌.ರೆಹಮಾನ್‌ ಹಾಗೂ ಸೈರಾ ಬಾನು ದಂಪತಿಯ ವಿಚ್ಛೇದನದ ವಿಚಾರವು ಎಲ್ಲೆಡೆ ಸಂಚಲನ ಮೂಡಿಸಿದ್ದು, ಇದೀಗ ಸೈರಾ ಅವರು ತಮ್ಮ ಡಿವೋರ್ಸ್‌ ವಿಚಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿ ಶಾಕ್‌ ಕೊಟ್ಟಿದ್ದಾರೆ.

ಈ ಹಿಂದೆ ಅಧಿಕೃತವಾಗಿಯೇ ಎ.ಆರ್.ರೆಹಮಾನ್‌ ಹಾಗೂ ಸೈರಾ ಬಾನು ದಂಪತಿ ಪರಸ್ಪರವಾಗಿ ಡಿವೋರ್ಸ್‌ ಪಡೆದಿರುವುದಾಗಿ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೈರಾ, ನಾವು ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಇವರ ಡಿವೋರ್ಸ್‌ ಇನ್ನೂ ಅಧಿಕೃತವಾಗಿಲ್ಲವಾ ಎಂದು ನಿಟ್ಟುಸಿರು ಕೂಡ ಬಿಟ್ಟಿದ್ದಾರೆ.

Music Composer AR Rahman s Wife Saira Banu Has Clarified About The Divorce

ಎ.ಆರ್‌.ರೆಹಮಾನ್‌ ಅವರು ಒಂದು ರತ್ನವಿದ್ದಂತೆ. ಅವರು ವಿಶ್ವದ ಅತ್ಯುತ್ತಮ ವ್ಯಕ್ತಿ. ಎಲ್ಲ ಯೂಟ್ಯೂಬರ್‌ಗಳು, ಮಾಧ್ಯಮಗಳು ಏನೇನೋ ವಿಚಾರಗಳನ್ನು ಹಬ್ಬಿಸಬೇಡಿ. ದಯವಿಟ್ಟು ರೆಹಮಾನ್‌ ಅವರು ಇಮೇಜ್‌ಗೆ ಕಳಂಕ ತರಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ರೆಹಮಾನ್‌ ಅವರು ಅಧಿಕೃತವಾಗಿ ಘೋಷಿಸುವವರೆಗೆ ಅವರನ್ನು ಏಕಾಂಗಿಯಾಗಿ ಬಿಡುವಂತೆ ಎಲ್ಲರಿಗೂ ವಿನಂತಿಸಿದ್ದಾರೆ.

ಮಾಧ್ಯಮಗಳೊಂದಿಗೆ ಅವರು ಆಡಿಯೋ ಕ್ಲಿಪ್‌ವೊಂದನ್ನು ಹಂಚಿಕೊಂಡಿದ್ದಾರೆ. ನಾನು ಪ್ರಸ್ತುತ ಮುಂಬೈನಲ್ಲಿದ್ದೇನೆ. ನಾನು ಕಳೆದೆರಡು ತಿಂಗಳಿಂದ ದೈಹಿಕವಾಗಿ ಅಸ್ವಸ್ಥಗೊಂಡಿದ್ದೇನೆ. ಈ ಕಾರಣದಿಂದ ನಾನು ಪತಿ ಎ.ಆರ್.ರೆಹಮಾನ್‌ ಅವರಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ. ಇದಕ್ಕೆ ಇಲ್ಲದ ಕಥೆ ಕಟ್ಟಿ ಅವರ ಹೆಸರಿಗೆ ಕಳಂಕ ತರಬೇಡಿ ಎಂದು ಯೂಟ್ಯೂಬರ್‌ಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.

ಕೇವಲ ನನ್ನ ಆರೋಗ್ಯದ ಸಮಸ್ಯೆಯ ಕಾರಣದಿಂದ ನಾನು ಚೆನ್ನೈನಿಂದ ಹೊರಡಬೇಕಾಯಿತು. ಏಕೆಂದರೆ ನಾನು ಚೆನ್ನೈನಲ್ಲಿ ಇಲ್ಲದಿದ್ದರೆ, ನೀವು ಸೈರಾ ಎಲ್ಲಿದ್ದಾಳೆಂದು ಆಶ್ಚರ್ಯಪಡುತ್ತೀರಿ. ನಾನು ಸದ್ಯ ಬಾಂಬೆಗೆ ಬಂದಿದ್ದೇನೆ. ನಾನು ನನ್ನ ಚಿಕಿತ್ಸೆ ಕಡೆಗೆ ಗಮನ ಕೊಟ್ಟಿದ್ದೇನೆ. ಚೆನ್ನೈನಲ್ಲಿ ರೆಹಮಾನ್‌ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದ ಇದು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ನಾನು ನನ್ನ ಮಕ್ಕಳಿಗಾಗಲಿ, ಪತಿ ರೆಹಮಾನ್‌ ಅವರಿಗಾಗಲಿ ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

Music Composer AR Rahman s Wife Saira Banu Has Clarified About The Divorce

ನಾನು ಶೀಘ್ರದಲ್ಲೇ ಚೆನ್ನೈಗೆ ವಾಪಸ್‌ ಆಗುತ್ತೇನೆ. ಆದರೆ ನಾನು ನನ್ನ ಚಿಕಿತ್ಸೆಯನ್ನು ಪೂರ್ಣಗೊಳಿಸಿದ ನಂತರ ಅಲ್ಲಿಗೆ ಬರಬೇಕು. ಹಾಗಾಗಿ ಅವರ ಹೆಸರನ್ನು ಹಾಳು ಮಾಡುವುದನ್ನು ನಿಲ್ಲಿಸಿ. ಈ ವದಂತಿಗಳೆಲ್ಲ ಕೇಳಲು ಅಸಹ್ಯವಾಗಿದೆ. ನಾನು ಹೇಳಿದಂತೆ ಅವರೊಬ್ಬರು ರತ್ನವಿದ್ದಂತೆ, ಧನ್ಯವಾದಗಳು ಎಂದು ಸೈರಾ ಬಾನು ಆಡಿಯೋ ರಿಲೀಸ್‌ ಮಾಡಿದ್ದಾರೆ ಎಂದು ವರದಿಯಾಗಿದೆ.

ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್‌ ಅವರು ಕೂಡ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾನಹಾನಿಕಾರಕ ಸುದ್ದಿಗಳನ್ನು ಹಬ್ಬಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಸೋಶಿಯಲ್‌ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಿರುವವರ ಬಗ್ಗೆಯೂ ಕ್ರಮಕ್ಕೆ ಮುಂದಾಗಿದ್ದಾರೆ. ಯೂಟ್ಯೂಬ್‌ ಚಾನಲ್‌ಗಳಿಗೆ ಅವರು ಲೀಗಲ್‌ ನೋಟಿಸ್‌ ಕೂಡ ನೀಡಿದ್ದಾರೆ ಎನ್ನಲಾಗಿದೆ.

ಡಿವೋರ್ಸ್‌ ವಕೀಲೆ ವಂದನಾ ಶಾ ಅವರು ಸುದೀರ್ಘ ವಿವಾಹಗಳಲ್ಲಿ ಅದನ್ನು ಬಿಡಲು ಯಾರೂ ಸಂತೋಷಪಡುವುದಿಲ್ಲ. ಆದರೆ ನಮ್ಮ ಕಕ್ಷಿದಾರರಾದ ಸಂಗೀತಗಾರ ಎ.ಆರ್.ರೆಹಮಾನ್ ಮತ್ತು ಸೈರಾ ಬಾನು ತಮ್ಮ ಪ್ರತ್ಯೇಕತೆಯನ್ನು ಸೌಹಾರ್ದಯುತವಾಗಿ ವ್ಯವಹರಿಸುತ್ತಿದ್ದಾರೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+