ಸಿನಿಮಾ ಪೈರಸಿ ಕೊಲೆ, ಕಳ್ಳತನ ಮಾಡಿದಷ್ಟೇ ಅಪರಾಧ: ನಟ ಜಗ್ಗೇಶ್‌

ಸ್ಯಾಂಡಲ್‌ವುಡ್‌ಗೆ ಪೈರಸಿ ಕಂಟಕ ಎದುರಾಗಿರುವುದು ಗೊತ್ತೇ ಇದೆ. ಇತ್ತೀಚೆಗೆ ಕಿಚ್ಚ ಸುದೀಪ್‌ ಕೂಡ ಪೈರಸಿ ವಿರುದ್ಧ ಯುದ್ಧಕ್ಕೆ ರೆಡಿ ಎಂದು ತೊಡೆತಟ್ಟಿದ್ದರು. ಇದೀಗ ನಟ ಜಗ್ಗೇಶ್‌ ಕೂಡ ಸಿನಿಮಾ ಪೈರಸಿ ತಡೆಗೆ ಕರೆ ನೀಡಿದ್ದಾರೆ. ಜಗ್ಗೇಶ್‌ ಸಹೋದರ ಕೋಮಲ್ ನಟನೆಯ "ಕೋಣ" ಸಿನಿಮಾ ಪೈರಸಿ ಆಗಿತ್ತು. ಇದರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಸದ್ಯ ನಂದಿನಿ ಲೇಔಟ್ ಪೊಲೀಸರು ಪೈರಸಿ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಜಗ್ಗೇಶ್‌, ಪೈರಸಿ ಮಾಡೋದು ದರೋಡೆ, ಕೊಲೆ ಮಾಡುವುದಕ್ಕೆ ಸಮಾನ ಎಂದು ಎಚ್ಚರಿಸಿದ್ದಾರೆ.

'ಕನ್ನಡ ಚಿತ್ರರಂಗದಲ್ಲಿ ಇಂದು ಯಾವುದೇ ಸಿನಿಮಾ ಬಿಡುಗಡೆಯಾದರೂ ಒಂದು ಪ್ರದರ್ಶನ ಮುಗಿಯುವ ವೇಳೆಗೆ ಅದನ್ನು ಲೀಕ್‌ ಮಾಡಲಾಗುತ್ತಿದೆ. ಇದು ಯಾರು ಮಾಡ್ತಿದ್ದಾರೋ ಗೊತ್ತಿಲ್ಲ, ಎಲ್ಲರೂ ಡೌನ್‌ಲೋಡ್‌ ಮಾಡಿ ನೋಡ್ತಿದ್ದಾರೆ. ಕಷ್ಟಪಟ್ಟು ಒಂದು ಸಿನಿಮಾ ಮಾಡಬೇಕು. ಇದೊಂದು ಉದ್ಯಮ, ಇದನ್ನು ಕೇವಲ ಸಂತೋಷಕ್ಕಾಗಿ ಮಾಡುತ್ತಿಲ್ಲ, ಇದೊಂದು ವ್ಯಾಪಾರ. ಕನ್ನಡ ಮಾತ್ರವಲ್ಲ ಎಲ್ಲ ಭಾಷೆಗಳಲ್ಲಿಯೂ ವ್ಯಾಪಾರ ಆಗಿದೆ' ಎಂದಿದ್ದಾರೆ.

Movie Piracy Is Equal To Murder And Theft Actor Jaggesh Warns Against Piracy

'ಇದು 80 ವರ್ಷದ ಸಿನಿಮಾ ರಂಗ. ಒಳ್ಳೆಯ ಸಿನಿಮಾ ಮಾಡಿದಾಗ ಜನಕ್ಕೆ ಇಷ್ಟ ಆದ್ರೆ ನೋಡ್ತಾರೆ. ಇಲ್ಲದಿದ್ರೆ ನೋಡಲ್ಲ. ಮೊದಲಿನಿಂದಲೂ ಇದೇ ನಡೆದುಕೊಂಡು ಬಂದಿದೆ. ಆದರೆ, ಇತ್ತೀಚೆಗೆ ಸಿನಿಮಾ ರಿಲೀಸ್‌ ಆಗಿ ಮಾರ್ನಿಂಗ್‌ ಶೋ ಮುಗಿಯುವ ಹೊತ್ತಿಗೆ ಎಲ್ಲರ ಮೊಬೈಲ್‌ಗೆ ಆ ಸಿನಿಮಾ ಬರುತ್ತೆ ಅಂದ್ರೆ, ಥಿಯೇಟರ್‌ಗೆ ಯಾರೂ ಬರೋದಿಲ್ಲ. ಯಾಕಂದ್ರೆ ನಮ್ಮ ಕೈಯಲ್ಲೇ ಮೊಬೈಲ್‌ ಇದೆ, ಸಿನಿಮಾ ನೋಡಿಕೊಳ್ತೀವಿ ಅಂತಾರೆ' ಎಂದು ಬೇಸರ ಹಂಚಿಕೊಂಡಿದ್ದಾರೆ.

'ನಿರ್ಮಾಪಕ ಬಡ್ಡಿಗೆ ಹಣ ತಂದಿರುತ್ತಾನೆ'

'ಇದು ಎಂತಹ ದೊಡ್ಡ ಅಪರಾಧ ಅಂದ್ರೆ, ಸಾಮಾನ್ಯವಾಗಿ ಯಾರಾದ್ರೂ ಒಂದು ಸಣ್ಣ ಕಳ್ಳತನ ಮಾಡಿದ್ರೆ ಅವನಿಗೆ ವಿವಿಧ ಕಾನೂನಿನಡಿ ಶಿಕ್ಷೆ, ಕೇಸ್‌ ಅನ್ನೋದು ಇರುತ್ತೆ. ಕೊಲೆ, ಬ್ಯಾಂಕ್‌ ದರೋಡೆಗೂ ಶಿಕ್ಷೆ ಇರುತ್ತೆ. ಆದರೆ ಸಿನಿಮಾ ಮಾಡುವ ನಿರ್ಮಾಪಕ ಅದರ ಹಿಂದಿನ ಸಂಕಷ್ಟಗಳು ಮಾತ್ರ ಗೊತ್ತಿರುತ್ತೆ. ಎಲ್ಲೆಲ್ಲೋ ಸಾಲ, ಬಡ್ಡಿಗೆ ಹಣ ತಂದಿರುತ್ತಾನೆ. ಇದರೊಂದಿಗೆ ಕನ್ನಡ ಸಿನಿಮಾ ಮಾಡ್ತೀನಿ ಅನ್ನೋ ಹೆಮ್ಮೆ ಕೂಡ ಇರುತ್ತೆ. ಅದರಿಂದ ನಾನು ಹಾಕಿದ್ದ ಹಣಕ್ಕೆ ಪ್ರತಿಯಾಗಿ ಏನಾದ್ರೂ ಬರುತ್ತೆ ಅಂದುಕೊಂಡಿರ್ತಾನೆ' ಎಂದಿದ್ದಾರೆ.

'ಸಣ್ಣ ಸಿನಿಮಾ ಬಂಡವಾಳ ₹10 ಕೋಟಿ'

'ಆದರೆ ಈಗ ಒಂದು ಸಿನಿಮಾವನ್ನೇ ಕಳ್ಳತನ ಮಾಡುವುದು ನನ್ನ ಪ್ರಕಾರ ಒಂದು ಕೊಲೆಗೆ ಸಮಾನ. ಒಬ್ಬ ನಿರ್ಮಾಪಕನಿಗೆ ಈ ರೀತಿ ಮಾಡುವುದು, ನಿಜವಾಗಿ ಕೊಲೆ ಮಾಡಿದಷ್ಟೇ ತಪ್ಪಾಗುತ್ತೆ. ಬ್ಯಾಂಕ್‌ ದರೋಡೆ ರೀತಿ ಇದು ಕೂಡ ದರೋಡೆ. ಈಗಿನ ವಾತಾವರಣದಲ್ಲಿ ಒಂದು ಚಿಕ್ಕ ಸಿನಿಮಾ ಮಾಡೋಕೆ ಕನಿಷ್ಠ ಅಂದ್ರೂ ₹10 ಕೋಟಿ ಬೇಕು. ದೊಡ್ಡ ಸಿನಿಮಾ ಅಂದ್ರೆ ₹50-100 ಕೋಟಿ ಇರಬೇಕು. ಇಷ್ಟು ದೊಡ್ಡ ಖಜಾನೆಯನ್ನ ಒಂದು ಮೊಬೈಲ್‌ನಲ್ಲಿ ಕದಿಯೋದು ದೊಡ್ಡ ತಪ್ಪು' ಎಂದು ಎಚ್ಚರಿಕೆ ನೀಡಿದ್ದಾರೆ.

'ನನ್ನ ತಮ್ಮ ಕೋಮಲ್‌ ನಟನೆಯ ಕೋಣ ಸಿನಿಮಾ ಇಂದು ಎಲ್ಲೆ ನೋಡಿದರೂ ಮೊಬೈಲ್‌ನಲ್ಲಿ ಸಿಗುತ್ತಿದೆ. ಇಂದು ಎಲ್ಲ ಸಿನಿಮಾಗಳು ಆನ್‌ಲೈನ್‌ನಲ್ಲಿ ಸಿಗುತ್ತಿವೆ. ನೋಡುವವರಿಗೆ ಸಂತೋಷ ಆಗಬಹುದು. ಆದ್ರೆ ಕಳೆದುಕೊಂಡವನಿಗೆ ಅದರ ನಿಜವಾದ ನೋವು ಗೊತ್ತಾಗುತ್ತೆ. ಹಾಗಾಗಿ ಇದು ಪೈರಸಿ ಕೊಲೆ, ಕಳ್ಳತನ ಮಾಡಿದಷ್ಟೇ ತಪ್ಪು. ಹೀಗಾಗಿ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಒಬ್ಬನನ್ನು ಬಂಧಿಸಿದ್ದಾರೆ. ಆತ ನೂರು ಸಿನಿಮಾ ಪೈರಸಿ ಮಾಡಿದ್ದಾನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ನೀವು ನಮ್ಮ ಜೊತೆ ನಿಲ್ಲಿ, ಪೈರಸಿಯಿಂದ ಕನ್ನಡ ಚಿತ್ರರಂಗಕ್ಕೆ ಆಗುತ್ತಿರುವ ಅನ್ಯಾಯ ನಿಲ್ಲಿಸಿ. 80 ವರ್ಷದ ಕನ್ನಡ ಚಿತ್ರರಂಗದ ಜೊತೆ ನಿಲ್ಲುವ ಸ್ನೇಹಿತರೇ' ಎಂದು ಕರೆ ಕೊಟ್ಟಿದ್ದಾರೆ ಜಗ್ಗೇಶ್‌.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+