Meghana Raj: ಎರಡನೇ ಮದುವೆ ಕುರಿತು ಮಾತನಾಡಿದ ಮೇಘನಾ ರಾಜ್
ಬದುಕಿ ಬಾಳಬೇಕಿದ್ದ ಚಿರಂಜೀವಿ ಸರ್ಜಾ ಅವರನ್ನ ಕಳೆದು ಕೊಂಡ ನೋವು ಅವರ ಕುಟುಂಬಕ್ಕೆ ಹಾಗೂ ಅವರ ಪತ್ನಿ ಮೇಘನಾ ರಾಜ್ ಅವರುಗೆ ಇನ್ನೂ ಇನ್ನೂ ಕಡಿಮೆಯಾಗಿರಲಿಲ್ಲ. ಇತ್ತ ನಟಿ ಮೇಘನಾ ರಾಜ್ ಅವರು ಇನ್ನೊಂದು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಯಿತು. ಕೆಲವರು ಮೇಘನಾ ರಾಜ್ ಮತ್ತೊಂದು ಮದುವೆಯಾಗಬೇಕು ಅಂದರು. ಅಲ್ಲದೇ ಇನ್ನು ಕೆಲವರು ಮೇಘನಾ ರಾಜ್ ಚಿರು ಅವರನ್ನ ಬಹುಬೇಗ ಮರೆತರು ಅಂದರು. ಈ ಎಲ್ಲ ವಿಚಾರಗಳಿಗೆ ನಟಿ ಮೇಘನಾ ರಾಜ್ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.
ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮತ್ತೊಂದು ಮದುವೆ ಕುರಿತು ಮಾತನಾಡಿದ್ದಾರೆ. ನಮಗೆ ಸಮಾಧಾನವಾಗುತ್ತೆ ಎಂದು ಅಂದುಕೊಂಡು ಅವರು ಹೀಗೆ ಮಾತನಾಡುತ್ತಾರಾ ಅಥವಾ ನೋವಲ್ಲಿರುವ ನಮಗೆ ಇನ್ನೂ ನೋವು ಕೋಡಬೇಕು ಎಂಬ ಉದ್ದೇಶದಲ್ಲಿ ಮಾತನಾಡುತ್ತಾರಾ, ಟ್ರೋಲ್ ಮಾಡುತ್ತಾರಾ ಗೊತ್ತಿಲ್ಲ, ಆದರೆ ಅದೆಲ್ಲ ನೋಡಿದಾಗ ನನಗೆ ಸ್ವಲ್ಪ ಮನರಂಜನೆ ಸಿಗುತ್ತೆ ಎಂದು ಮೇಘನಾ ಹೇಳಿದ್ದಾರೆ. ಜನ ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಯಾಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ವಿಚಾರದಲ್ಲಿ ಕೂಡ ಜನ ಹೀಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ರಾಯನ್ ಕಣ್ಣೇದುರು ದೈಹಿಕವಾಗಿ ತಂದೆಯ ಸ್ಥಾನದಲ್ಲಿ ಒಬ್ಬರು ಇರಬೇಕಿತ್ತು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತೆ ಯಾಕೆಂದರೆ ನನ್ನ ಮಗ ಚಿರು ಬಗ್ಗೆ ಮಾತನಾಡದ ದಿನ ಇಲ್ಲ ಎಂದು ಹೇಳಿರುವ ಮೇಘನಾ, ಚಿರು ಹಾಡುಗಳನ್ನು ರಾಯನ್ ನೋಡುತ್ತಾನೆ, ಸಿನಿಮಾಗಳನ್ನು ನೋಡುತ್ತಾನೆ, ಅಪ್ಪ ಅಂದರೆ ಅದು ಚಿರು ಎಂದು ಅವನಿಗೆ ಗೊತ್ತು ಎಂದು ಮಗನ ಕುರಿತು ಮೇಘನಾ ಅವರು ಮಾತನಾಡಿದ್ದಾರೆ.
ನಾನು ಅವನಿಗೆ ಹೇಳ್ತಾ ಇರ್ತಿನಿ, ನೀನು ನಿನ್ನ ಅಪ್ಪನ ತರಹನೇ ಮಾಡ್ತೀಯಾ. ನನ್ನ ತಾಯಿ ಬಳಿಯೂ ಹೇಳ್ತಾ ಇರ್ತಿನಿ ರಾಯನ್ ಎಲ್ಲಾ ಚಿರುನೇ ಅಮ್ಮ ಅಂತ. ತಂದೆ ಅಂತ ಒಬ್ಬರು ನನ್ನ ಜೀವನದಲ್ಲಿ ಇದ್ದಾರೆ ನಮ್ಮ ಸುತ್ತ ಮುತ್ತ ಇದ್ದಾರೆ ಎನ್ನುವುದು ರಾಯನ್‌ಗೆ ಗೊತ್ತು ಆದರೆ ದೈಹಿಕವಾಗಿ ಅವನು ನೋಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ. ಫಿಸಿಕಲ್ ಫಿಗರ್ ನಮ್ಮ ನಡುವೆ ಇದ್ದರೆ ಚೆನ್ನಾಗಿರುತ್ತೆ ಎನ್ನುವ ಆಲೋಚನೆ ನನಗೆ ಆಗಾಗ ಬಂದಿದೆ ಎಂದು ಕೂಡ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಎರಡನೇ ಮದ್ವೆಯಾಗ್ತಾರಾ ಹಾಗೊಂದು ವೇಳೆ ಆದರೆ ಸಮಾಜ ಒಪ್ಪಿಕೊಳ್ಳುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಮೇಘನಾ ಸಮಾಜ ಒಪ್ಪಿಕೊಳ್ಳುತ್ತಾ ಅಥವಾ ನನ್ನ ನಿರ್ಧಾರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒತ್ತಡ ಇದ್ದೇ ಇದೆ ಎಂದು ಹೇಳಿದ್ದಾರೆ. ನನಗೆ ಇರುವ ಇಮೇಜ್ ನನ್ನದಲ್ಲ ಬದಲಿಗೆ ಅದು ನನ್ನ ಸುತ್ತ ಮುತ್ತ ಇರುವ ವ್ಯಕ್ತಿಗಳಿಂದ, ಅಭಿಮಾನಿಗಳಿಂದ, ಸೋಶಿಯಲ್ ಮೀಡಿಯಾ ಫ್ಯಾಮಿಲಿಯಿಂದ ಸೃಷ್ಟಿಯಾಗಿದ್ದು, ಹೀಗಾಗಿ ಬೇರೆ ರೀತಿ ಯೋಚನೆ ಮಾಡಬೇಕು ಎಂದು ಅಂದುಕೊಂಡರು ಕೂಡ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಮೇಘನಾ ತೀರಾ ಇತ್ತೀಚೆಗೆ ನನ್ನಂತೆಯೇ ನೋವು ಅನುಭವಿಸಿರುವ ಚಿತ್ರರಂಗದಲ್ಲಿನ ವ್ಯಕ್ತಿಯೊಬ್ಬರು ಅಕ್ಕನ ಸ್ಥಾನದಲ್ಲಿ ನಿಂತು ನನಗೆ ಸಲಹೆ ನೀಡಿದರು. ನೀನು ಖುಷಿಯಾಗಿರುವುದನ್ನು ನೋಡಬೇಕು ಎಂದು ಹೇಳಿದರು ಆಗ ನಮಗೆ ಅರಿವು ಇಲ್ಲದೆ ಮದುವೆ ಯೋಚನೆ ಬರುತ್ತೆ ಎಂದು ಹೇಳಿದ್ದಾರೆ.
ಇನ್ನು, ಹಾಗಂಥ ಮೇಘನಾ ರಾಜ್ ಎರಡನೇ ಮದುವೆಯಾಗುವುದಿಲ್ಲ ಅಂತ ಅಲ್ಲ. ಹಾಗೊಂದು ವೇಳೆ ಚಿರು ಹರಸಿ ಹಾರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ ಮೇಘನಾ. ಈ ಕುರಿತು ಮಾತನಾಡಿರುವ ಮೇಘನಾ ರಾಜ್ ಮುಂಬರುವ ದಿನಗಳಲ್ಲಿ ನನ್ನ ಬದುಕಿನಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಬಂದರೆ, ಚಿರುಗೆ ಆ ವ್ಯಕ್ತಿ ನನಗೆ ಸೂಕ್ತ ಎಂದು ಅನಿಸಿದರೆ ಖುದ್ದು ಚಿರು ಅವರೇ ಮುಂದುವರೆಸುತ್ತಾರೆ ಇಲ್ಲದಿದ್ದರೆ ಚಿರು ತಡೆಯುತ್ತಾರೆ ಎಂದು ಹೇಳಿದ್ದಾರೆ.
ನಾನು ಹೀಗೆ ಇರುವುದು ಬೆಸ್ಟ್ ಎಂದು ಅನಿಸಿದರೆ ಚಿರು ಅದನ್ನು ನೋಡಿಕೊಳ್ಳುತ್ತಾರೆ. ನನಗೆ ದೇವರ ಮೇಲೆ ನಂಬಿಕೆ ಇದೆ, ನನ್ನ ಸುತ್ತ ಮುತ್ತ ಇರುವ ಎನರ್ಜಿಗಳ ಮೇಲೆ ನಂಬಿಕೆ ಇದೆ, ಚಿರುನ ಕಳೆದುಕೊಂಡ ನಂತರ ನನ್ನ ಬದುಕಿನಲ್ಲಿ ಕೆಲವು ಅಲ್ಲ ಹಲವು ಪವಾಡಗಳು ನಡೆದಿವೆ. ನನಗೆ ದೇವರ ಆಶೀರ್ವಾದ ಸಿಕ್ಕಿದೆ. ಚಿರು ದೇವರ ಹತ್ತಿರ ಹೋಗಿದ್ದಾರೆ, ಹೀಗಾಗಿ ಅಲ್ಲಿಂದನೇ ಚಿರು ನನಗೆ ಸದಾ ಒಳ್ಳೆಯದನ್ನು ಬಯಸುತ್ತಾರೆ, ಒಳ್ಳೆಯದನ್ನೇ ನನಗೆ ಮಾಡುತ್ತಾರೆ ಕೂಡ ಎಂದು ಮೇಘನಾ ರಾಜ್ ಹೇಳಿದ್ದಾರೆ.
-
Gen Z: ಉದ್ಯೋಗ ಕ್ಷೇತ್ರದಲ್ಲಿ ಜೆನ್ ಜಿ: ನೋಡಿ ಸ್ವಾಮಿ ನಾವಿರೋದು ಹೀಗೆ ಜೆನ್ ಜಿ ಪೀಳಿಗೆ ಮಾತು, ಕಂಪನಿಗಳು ಹೇಳುವುದೇನು -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
South India: ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ: ತಮಿಳುನಾಡು ಮುನ್ನಡೆ, ಕರ್ನಾಟಕದಲ್ಲಿ ಏಕೆ ಹಿನ್ನಡೆ












Click it and Unblock the Notifications