ಮೇಘನಾ ರಾಜ್ ಅಭಿಮಾನಿಗಳಿಗೆ ಶೀಘ್ರದಲ್ಲೇ ಗುಡ್ ನ್ಯೂಸ್
ಸ್ಯಾಂಡಲ್‌ವುಡ್‌ನ ಟಾಪ್ ನಟಿಯರಲ್ಲಿ ಮೇಘನಾ ರಾಜ್ ಒಬ್ಬರು. ಒಂದು ಕಾಲದಲ್ಲಿ ಮೇಘನಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದರೆ ಸಾಕು ಅಭಿಮಾನಿಗಳು ಆ ಸಿನಿಮಾವನ್ನು ಒಂದಕ್ಕಿಂತ ಹೆಚ್ಚು ಬಾರಿ ನೋಡದೆ ಇರುತ್ತಿರಲಿಲ್ಲ. ಮೇಘನಾ ರಾಜ್ ಅವರಿಗೆ ಸಖತ್ ಡಿಮ್ಯಾಂಡ್ ಇದ್ದ ಕಾಲವದು. ಆದರೀಗ ಎಲ್ಲವೂ ಬದಲಾಗಿ ಹೋಗಿದೆ. ಮೇಘನಾ ರಾಜ್ ಸಾಕಷ್ಟು ಮುಳ್ಳು ತುಂಬಿದ ದಾರಿಯನ್ನು ದಾಟಿ ಮತ್ತೆ ಸಿನಿ ಜರ್ನಿಯನ್ನು ಆರಂಭಿಸಿದ್ದಾರೆ. ಹೀಗಾಗಿ ಮೇಘನಾ ರಾಜ್ ಅಭಿಮಾನಿಗಳಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗುವ ಲಕ್ಷಣಗಳಿವೆ.
ಹೌದು ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಒಂಟಿ ಆಗಿದ್ದಾರೆ. ಈ ಸಮಯದಲ್ಲಿ ಇವರೊಂದಿಗೆ ನಿಂತು ಧೈರ್ಯ ಹೇಳಿದವರಿಗಿಂತ ಇವರ ಜೀವನ ಮುಗಿದು ಹೋಯ್ತು ಅನ್ನೋ ರೀತಿ ಮಾತನಾಡಿಕೊಂಡವರೇ ಹೆಚ್ಚು. ಪ್ರೀತಿಸಿ ಮದುವೆಯಾಗಿದ್ದ ಚಿರುವನ್ನು ಕಳೆದುಕೊಂಡು ಮಡಿಲಲ್ಲಿ ಪುಟ್ಟ ಕಂದಮ್ಮನನ್ನು ಇಟ್ಟುಕೊಂಡು ಮೇಘನಾ ರಾಜ್ ಪಟ್ಟ ನೋವು ಅಷ್ಟಿಷ್ಟಲ್ಲ.

ಈ ಅಘಾತದಿಂದ ಮೇಘನಾ ರಾಜ್ ಹೊರಬರುವುದು ತುಂಬಾ ಕಷ್ಟವಾಗಿತ್ತು. ಆದರೆ ಈ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮಿಳಾ ರಾಜ್. ಪ್ರಪಂಚವೇ ಚಿರುವಾಗಿದ್ದ ಮೇಘನಾಗೆ ಚಿರು ಅಗಲಿದ ಬಳಿಕ ತಂದೆ-ತಾಯಿಯೇ ಆಸರೆಯಾದರು. ಗರ್ಭಿಣಿಯಾಗಿದ್ದ ಮೇಘನಾ ಅವರನ್ನು ನೋಡಿಕೊಳ್ಳುವ ಸಂಪೂರ್ಣ ಜವಬ್ದಾರಿ ಹೊತ್ತುಕೊಂಡರು.
ನಟ ಚಿರು ಸರ್ಜಾ ಅವರ ಸಾವಿನ ಬಳಿಕ ನಟಿ ಮೇಘನಾ ರಾಜ್ ಅವರು ಸಾಕಷ್ಟು ಕುಗ್ಗಿ ಹೋಗಿದ್ದರು. ಇದೇ ಬೇಸರದಲ್ಲಿ ಖಾಸಗಿ ಯೂಟ್ಯೂಬ್ ಸಂದರ್ಶನವೊಂದರಲ್ಲಿ ನಾನು ಬದುಕಿರುವುದು ನನ್ನ ಮಗ ರಾಯನ್ ರಾಜ್ ಸರ್ಜಾಗೋಸ್ಕರ ಎಂದು ಹೇಳಿಕೊಂಡಿದ್ದರು. ಅಷ್ಟರ ಮಟ್ಟಿಗೆ ಮೇಘನಾ ರಾಜ್ ಜೀವನದಲ್ಲಿ ನೋವನ್ನು ಅನುಭವಿಸಿದ್ದಾರೆ.

ನಿಜ ಜೀವನದಲ್ಲಿ ಏನೇ ಆದರೂ ಕೂಡ ಮೇಘನಾ ರಾಜ್ ಅದೆಷ್ಟೋ ಜನರ ಫೇವರೇಟ್ ನಟಿ. ಹೀಗಾಗಿ ಇತ್ತೀಚಿಗೆ ಮೇಘನಾ ರಾಜ್ ಅವರು ಸಿನಿಮಾಗಳು ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ 'ತತ್ಸಮ ತದ್ಭವ' ಸಿನಿಮಾದಲ್ಲಿ ಮೇಘನಾ ರಾಜ್ ನಟಿಸಿ ಸಾಕಷ್ಟು ಸದ್ದು ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಸಾವಿನ ನಂತರ ಮೇಘನಾ ರಾಜ್ ಅವರಿಗೆ ಧೈರ್ಯ ತುಂಬಿದವರಲ್ಲಿ ಚಿರು ಸರ್ಜಾ ಅವರ ಗೆಳೆಯರು ಸೇರಿದ್ದಾರೆ. ವಿಶೇಷವಾಗಿ ಮೇಘನಾ ಬೆನ್ನಿಗೆ ನಿಂತವರು ಪ್ರಜ್ವಲ್ ದೇವರಾಜ್, ನಟಿ ರಾಗಿಣಿ, ನಟ ತೇಜ್ ಅವರು. ಇತ್ತೀಚಿಗೆ ನಟಿ ಮೇಘನಾ ರಾಜ್ ಅವರು ನಟ ತೇಜ್ ಅವರೊಂದಿಗೆ ಕಾಣಿಸಿಕೊಂಡಿದ್ದು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಫೋಟೋಗಳು ಇವರಿಬ್ಬರು ಒಟ್ಟಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಕುತೂಹಲವನ್ನು ಅಭಿಮಾನಿಗಳಿಗೆ ಉಂಟು ಮಾಡಿದೆ.
ಹೀಗಾಗಿ ಮೇಘನಾ ಮತ್ತೆ ದೊಡ್ಡ ಪರದೆಯ ಮೇಲೆ ಕಾಣಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಸಿನಿಮಾ ಯಾವುದು? ಯಾರು ನಾಯಕ ನಟ? ಸಿನಿಮಾದಲ್ಲಿ ಮೇಘನಾ ಅವರ ಪಾತ್ರವೇನು ಇದ್ಯಾವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಟ್ಟಿನಲ್ಲಿ ಮೇಘನಾ ರಾಜ್ ಮುಂದಿನ ದಿನಗಳಲ್ಲಿ ಹೊಸ ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಈ ಮೂಲಕ ಮತ್ತೆ ಮೇಘನಾ ತಮ್ಮ ಸಿನಿ ಜರ್ನಿಯನ್ನು ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications