ಡಾ. ರಾಜ್‌ಕುಮಾರ್ ಬಗ್ಗೆ ಮಠ ಗುರುಪ್ರಸಾದ್ ಸ್ಫೋಟಕ ಹೇಳಿಕೆ?

ಮಠ ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಸಾರಥ್ಯದಲ್ಲಿ ಹೊಸ ಸಿನಿಮಾಗೆ ಈಗ ವೇದಿಕೆ ಸಿದ್ಧವಾಗಿದೆ. 'ರಂಗನಾಯಕ' ಸಿನಿಮಾ ಮೂಲಕ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಈ ಹಿಂದೆ 'ಮಠ' & 'ಎದ್ದೇಳು ಮಂಜುನಾಥಾ' ಸಿನಿಮಾಗಳಲ್ಲಿ ಜಗ್ಗೇಶ್ & ಗುರುಪ್ರಸಾದ್ ಜೋಡಿ ಒಂದಾಗಿ ಕೆಲಸ ಮಾಡಿದ್ದರು. ಇದೀಗ ರಂಗನಾಯಕ ಟ್ರೇಲರ್ ರಿಲೀಸ್ ಆಗಿದ್ದು, ಇದೇ ಕಾರ್ಯಕ್ರಮದಲ್ಲಿ ಡಾ. ರಾಜ್‌ಕುಮಾರ್ ಅವರ ಬಗ್ಗೆ ನಿರ್ದೇಶಕರಾದ ಗುರುಪ್ರಸಾದ್ ಆಡಿದ ಮಾತಗಳು ವಿವಾದದ ಬಿರುಗಾಳಿ ಎಬ್ಬಿಸಿವೆ.

ಅಷ್ಟಕ್ಕೂ ಆಗಿದ್ದು ಏನು ಅಂದ್ರೆ, ಇಂದು 'ರಂಗನಾಯಕ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿತ್ತು. ಹೀಗೆ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರ ಜೊತೆಗೆ ಗುರುಪ್ರಸಾದ್‌ರ ಮಾತುಕತೆ ನಡೆಯಿತು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಸಾಗಿದ ನಿರ್ದೇಶಕರಾದ ಗುರುಪ್ರಸಾದ್, ಸಿನಿಮಾ ಬಗ್ಗೆ ಬಿಟ್ಟು ಬೇರೆ ಬೇರೆ ವಿಚಾರಗಳನ್ನ ಮಧ್ಯದಲ್ಲಿ ಎಳೆದೆಳೆದು ತರುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.

Mata Guruprasad Said This About Kannada Legend Dr. Rajkumar In Ranganayaka Trailer Release Event

ಗುರುಪ್ರಸಾದ್ ಅವರು ಹೀಗೆ ಅನಗತ್ಯ ವಿಚಾರ ಮಾತನಾಡುತ್ತಿದ್ದಾರೆ ಅಂತಾ ಪತ್ರಕರ್ತರೂ ಗರಂ ಆದರು. ಜೊತೆಗೆ, ಮೊದಲೇ ಟ್ರೇಲರ್ ಒಳಗೂ ಹಲವು ಕನ್ನಡದ ನಟರಿಗೆ ಟಾಂಟ್ ಮಾಡಿದ್ದಾರೆ ಎಂಬ ಆರೋಪವನ್ನ ಅಲ್ಲಿದ್ದ ಸುದ್ದಿಗಾರರು ಮಾಡಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರು. ಆಗ ದಿಢೀರ್ ಡಾ. ರಾಜ್‌ಕುಮಾರ್ ಅವರ ವಿಚಾರವನ್ನು ಕೂಡ ಡೈರೆಕ್ಟರ್ ಗುರುಪ್ರಸಾದ್ ಪ್ರಸ್ತಾಪ ಮಾಡಿಬಿಟ್ಟರು!

ಗುರುಪ್ರಸಾದ್ ಡಾ.ರಾಜ್‌ಕುಮಾರ್ ವಿರೋಧಿನಾ?

ಹೌದು, ಮಠ ಗುರುಪ್ರಸಾದ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಹತ್ತಾರು ವರ್ಷ ಕಳೆದು ಹೋಗಿದೆ. ಹೀಗಿದ್ದರೂ ನಿರ್ದೇಶಕ ಗುರುಪ್ರಸಾದ್ ಮಾಡಿರುವುದು ಬೆರಳೆಣಿಕೆಯಷ್ಟು ಚಿತ್ರ ಅಂದ್ರೆ ಸಿನಿಮಾಗಳನ್ನ ಮಾತ್ರ. ಈ ಕುರಿತು ಪತ್ರಕರ್ತರು ಪ್ರಶ್ನೆಗಳನ್ನ ಕೇಳುತ್ತಿದ್ದರು. ಬಳಿಕ ಒಬ್ಬರು ಪತ್ರಕರ್ತರು ಇನ್ನೂ ಹೆಚ್ಚಿನ ಸಿನಿಮಾ ಮಾಡಬಹುದಿತ್ತು ಅಲ್ವಾ? ಅಂತಾ ಪ್ರಶ್ನೆ ಮುಂದಿಟ್ಟರು. ಆಗ ಇದ್ದಿಕ್ಕಿದ್ದಂತೆ ಡಾ. ರಾಜ್‌ಕುಮಾರ್ ಅವರ ವಿಚಾರವನ್ನು ಮಾತನಾಡಿ ನಿರ್ದೇಶಕ ಗುರುಪ್ರಸಾದ್ ಪೇಚಿಗೆ ಸಿಲುಕಿ ಒದ್ದಾಡಿಬಿಟ್ಟರು. ಹಾಗಾದ್ರೆ ಡಾ. ರಾಜ್‌ಕುಮಾರ್ ಬಗ್ಗೆ ನಿರ್ದೇಶಕ ಗುರುಪ್ರಸಾದ್ ಹೇಳಿದ್ದೇನು?

Mata Guruprasad Said This About Kannada Legend Dr. Rajkumar In Ranganayaka Trailer Release Event

'ನಮ್ಮ ತಂದೆಯ ಹೆಸರು...'

ನಿರ್ದೇಶಕ ಗುರುಪ್ರಸಾದ್ ಅವರ ಕ್ರಿಯೇಟಿವಿಟಿ ಬಗ್ಗೆ ಮಾತನಾಡುತ್ತಾ ಪ್ರತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು. ಇನ್ನಷ್ಟು ಸಿನಿಮಾಗಳನ್ನ ಮಾಡಬಹುದಿತ್ತು ಎನ್ನುವ ಅರ್ಥದಲ್ಲಿ ಪ್ರಶ್ನೆ ಕೇಳಲಾಗಿತ್ತು. ಆದ್ರೆ ಆ ಪ್ರಶ್ನೆಗೆ ಉತ್ತರ ನೀಡಿದ ಗುರುಪ್ರಸಾದ್, ಒಳ್ಳೇ ಪ್ರಶ್ನೆ, ಒಳ್ಳೇ ಪ್ರಶ್ನೆ ಎನ್ನುತ್ತಾ 'ನಮ್ಮ ತಂದೆಯ ಹೆಸರು ರಾಮಚಂದ್ರ, ರಾಜ್‌ಕುಮಾರ್ ಅಲ್ಲ' ಅಂತಾ ಉತ್ತರ ನೀಡಿದರು ಡೈರೆಕ್ಟರ್ ಗುರುಪ್ರಸಾದ್. ಈ ವೇಳೆ ಪತ್ರಕರ್ತರು ಹಾಗೂ ಗುರುಪ್ರಸಾದ್ ಅವರ ನಡುವೆ ದೊಡ್ಡ ಕಿರಿಕ್ ಶುರುವಾಗಿತ್ತು.

ಆಗ ಪತ್ರಕರ್ತರ ಕೋಪ ತಣಿಸಲು ಮುಂದಾದ ನಿರ್ದೇಶಕ ಗುರುಪ್ರಸಾದ್, 'ನಾನು ಡಾ. ರಾಜ್‌ಕುಮಾರ್ ಅವರನ್ನು ಹೆಚ್ಚು ಪ್ರೀತಿಸಿ, ಗೌರವಿಸುವವನು. ಯಾಕಂದ್ರೆ ನಾನು ಅಪ್ಪು ಅವರಿಗೆ ಕನ್ನಡ ಪಾಠ ಹೇಳಿದ್ದೀನಿ, ಅವರು ಗುರುಗಳೇ ಅಂತಾ ಕರೆಯುತ್ತಿದ್ದರು.' ಎಂದು ತಮ್ಮ ಮಾತಿಗೆ ಸ್ಪಷ್ಟನೆ ನೀಡಲು ಮುಂದಾದರು. ಆಗ ಪತ್ರಕರ್ತರು ಕೂಡ ನೇರವಾಗಿ ಈ ಸಿನಿಮಾ ಬಗ್ಗೆ ಮಾತನಾಡಿ ಎಂದು ಗುರುಪ್ರಸಾದ್ ಅವರಿಗೆ ಹೇಳಿದರು. ಈಗ ವಿಡಿಯೋ, ಫುಲ್ ವೈರಲ್ ಆಗುತ್ತಿದೆ.

ಕನ್ನಡ ಸಿನಿಮಾಗಳ ಕಿಂಗ್ ಡಾ. ರಾಜ್!

ಇದೆಲ್ಲ ಏನೇ ಇರಲಿ, ಕನ್ನಡ ಸಿನಿಮಾ ರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರು ಅನ್ನೋದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾ ರಂಗಕ್ಕೆ ಅತ್ಯಂತ ಭದ್ರವಾದ ಅಡಿಪಾಯ ಹಾಕಿಕೊಟ್ಟಿದ್ದರು ಡಾ. ರಾಜ್‌ಕುಮಾರ್ ಅವರು. ಡಾ. ರಾಜ್ ಅವರ ಬದುಕಿನಲ್ಲಿ, ಭಾರಿ ದೊಡ್ಡ ಗೆಲುವು ಪಡೆದ ಸಿನಿಮಾಗಳೇ ಇದ್ದವು ಹೊರತು, ಸೋತ ಸಿನಿಮಾ ಕಣ್ಣಿಗೆ ಕೂಡ ಕಂಡಿಲ್ಲ. ಇನ್ನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳನ್ನ ನೋಡಿ ಕೋಟ್ಯಂತರ ಜನ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎಂಬುದು ಕೂಡ ಅಷ್ಟೇ ಸತ್ಯ. ಹೀಗಾಗಿ ಇಡೀ ಕರ್ನಾಟಕ ಡಾ. ರಾಜ್‌ಕುಮಾರ್ ಅವರನ್ನು ವರನಟ ಎಂದು ಕರೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+