Guruprasad updates: ಇದೇ ತಿಂಗಳು ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿತ್ತು..
ಬೆಂಗಳೂರು, ನವೆಂಬರ್ 04: ತಾವು ವಾಸವಿದ್ದ ಅಪಾರ್ಟ್ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕನ್ನಡ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ಪತ್ತೆ ಆಗಿತ್ತು. ಅವರು ಜೀವನದಲ್ಲಿ ಮಾಡಿದ ತಪ್ಪುಗಳು, ಅತೀವ ಸಾಲಬಾಧೆಯಿಂದ ಅವರು ಬಳಲುತ್ತಿದ್ದರು. ಹೀಗಾಗಿಯೇ ಅವರು ದುಡುಕಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕೋಟಿಗಟ್ಟಲೇ ಸಾಲ ಮಾಡಿಕೊಂಡಿದ್ದ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ವಿಚಾರಣ ಇದೇ ತಿಂಗಳು ನಿಗದಿಯಾಗಿತ್ತು.
ಹೌದು, ನಮ್ಮೊಂದಿಗೆ ಈಗ ನಟ, ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರು ಬುದುಕಿದ್ದರೆ, ಇದೇ ನವೆಂಬರ್ 19ರಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ನಡೆಯಬೇಕಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ನಮ್ಮೊಂದಿಲ್ಲ. ಈ ಕುರಿತು ಚಿತ್ರರಂಗದ ಗಣ್ಯರು, ಅವರ ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ.

ಶ್ರೀನಿವಾಸ್ ಎಂಬುವವರಿಗೆ ಗುರುಪ್ರಸಾದ್ ಅವರು ಹಣ ನೀಡಬೇಕಿತ್ತು. ಪಡೆದ ಸಾಲಕ್ಕೆ ಅವರು ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಒಟ್ಟು ಎರಡು ಚೆಕ್‌ಗಳು ಬೌನ್ಸ್ ಆಗಿದ್ದ ಕಾರಣ, ಸಾಲ ಕೊಟ್ಟಿದ್ದ ಶ್ರೀನಿವಾಸ್ ಅವರು ಕೋರ್ಟ್ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ.
ಇದೇ ಪ್ರಕರಣದ ವಿಚಾರವಾಗಿ ಈ ಹಿಂದೆ ಒಂದೆರಡು ಬಾರಿ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಆಗ ಗುರುಪ್ರಸಾದ್ ಆರೋಗ್ಯದ ನೆಪವೊಡ್ಡಿ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ.

ಗುರು ವಿರುದ್ಧ ಬಂಧನ್ ವಾರೆಂಟ್ ಜಾರಿ ಸಾಧ್ಯತೆ ಇತ್ತು
ಕಳೆದ ಅಕ್ಟೋಬರ್ ನಾಲ್ಕನೇ ವಾರ ಗುರುಪ್ರಸಾದ್ ಅವರ ಚೆಕ್ ಬೌನ್ಸ್ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಅಂದು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ವಿಚಾರಣೆ ಮುಂದೂಡಿದ್ದ ಕೋರ್ಟ್ ನವೆಂಬರ್ 19ಕ್ಕೆ ವಿಚಾರಣೆ ನಿಗದಿ ಮಾಡಿತ್ತು. ಅಷ್ಟರಲ್ಲಾಗಲೇ ಗುರುಪ್ರಸಾದ್ ಈ ಲೋಕ ಬಿಟ್ಟು ಹೋಗಿದ್ದಾರೆ. ಈ ಬಾರಿಯು ಅವರು ವಿಚಾರಣೆಗೆ ಹಾಜರಾಗಿರದಿದ್ದರೆ, ಅವರು ವಿರುದ್ಧ ಬಂಧನದ ವಾರೆಂಟ್ ಜಾರಿಯಾಗುವ ಎಲ್ಲ ಲಕ್ಷಣಗಳು ಇದ್ದವು ಎಂಬ ಸತ್ಯ ಹೊರ ಬಿದ್ದಿದೆ.
ಇದೊಂದು ಪ್ರಕರಣ ಮಾತ್ರವಲ್ಲದೇ ಜೀವನದಲ್ಲಿ ಆದ ತಪ್ಪುಗಳನ್ನು ಅವರು ತಿದ್ದಿಕೊಳ್ಳಬೇಕಿತ್ತು. ಅವರ ಬರವಣಿಗೆ ಅವರ ಕೈ ಹಿಡಿಯಲಿತ್ತು. ದುಡುಕಿ ಸಾವಿನ ನಿರ್ಧಾರ ಮಾಡಿದ್ದು ತಪ್ಪು. ಕೇವಲ ಚೆಕ್ ಬೌನ್ಸ್ ಮಾತ್ರವಲ್ಲದೇ, ವಿವಿಧೆಡೆ ಒಂದಷ್ಟು ಸಾಲ ಮಾಡಿಕೊಂಡಿದ್ದರು. ಸಿನಿಮಾದದಲ್ಲಿ ಸಾಲು ಸಾಲು ಸೋಲು ಕಂಡಿದ್ದರು. ಒಟ್ಟು 03 ಕೋಟಿ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ಇದೆ.
ಹಲವು ತೊಂದರೆಗಳನ್ನು ಗುರು ಪ್ರಸಾದ್ ಎದುರಿಸಿದ್ದರು. ಬುದಕಿನಲ್ಲಿ ಆದ ಕೆಲವು ತಪ್ಪುಗಳಿಂದ ತಿದ್ದುಕೊಂಡು ಬದುಕಿದ್ದರೆ, ಇಂದು ಅವರು ನಮ್ಮೊಂದಿಗೆ ಇರುತ್ತಿದ್ದರು ಎಂದು ಅವರ ಆಪ್ತರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ಸಾಲ ಬಾಧೆಯಿಂದಲೇ ದುಡುಕಿನ ನಿರ್ಧಾರ
ಸಾಲಭಾದೆಯಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಾನಸಿಕವಾಗಿ ಒತ್ತಡದಲ್ಲಿದ್ದರು. ನನ್ನವರು ಆರು ತಿಂಗಳ ಹಿಂದೆ ತವರು ಮನೆಗೆ ಕಳುಹಿಸಿದ್ದರು. ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಪತ್ನಿ ಪೊಲೀಸರ ಮುಂದೆ ತಿಳಿಸಿದ್ದಾರೆ.
ಈ ನಡುವೆ ನಟ ಜಗ್ಗೇಶ್ ಅವರು ಗುರುಪ್ರಸಾದ್ ಅವರ ಒಡನಾಡಿಯಾಗಿದ್ದರು. ನಿರ್ದೇಶಕರ ಸಾವಿನ ಬಳಿಕ ನಟ ಜಗ್ಗೇಶ್, ಗುರುಪ್ರಸಾದ್ ಒಂದಷ್ಟು ಸಾಲ ಮಾಡಿಕೊಂಡಿದ್ದು. ಒಂದಷ್ಟು ತಪ್ಪುಗಳನ್ನು ಮಾಡಿಕೊಂಡು ತಾಳ್ಮೆಯಿಂದ ಇದ್ದಿದ್ದರೆ ಯಶಸ್ಸು ಸಿಗುತ್ತಿತ್ತು.
ಆತನಿಗೆ ಕಾಯಿಲೆ ಇತ್ತು. ನನ್ನ ಮರಿಯಾದೆ ಕಳೆಯುವುದಾಗಿ ಹೇಳಿದ್ದರು. ಆನ್‌ಲೈನ್ ಗೇಮಿನಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಎಂದೆಲ್ಲ ಹೇಳಿದ್ದರು. ಇದರಿಂದಲೇ ಅವರು ಸಾವಿನ ನಿರ್ಧಾರ ಕೈಗೊಂಡಿರಬಹುದು ಎಂದು ಅಭಿಪ್ರಾಯ ಹೊರ ಹಾಕಿದ್ದರು.












Click it and Unblock the Notifications