Bigg Boss: ಧನರಾಜ್‌ರನ್ನು ಕುರಿ ಮಾಡಿದ್ದ ಮಂಜು, ಗೌತಮಿಗೆ ಸೋಲು! ಫಿನಾಲೆ ಟಿಕೆಟ್‌ಗೆ ಈ ನಾಲ್ವರ ನಡುವೆ ಸ್ಪರ್ಧೆ
ಬಿಗ್ ಬಾಸ್ ಕನ್ನಡ 11 ನೇ ಸೀಸನ್ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಇನ್ನು ಮೂರು ವಾರಗಳಲ್ಲಿ ಫಿನಾಲೆ ನಡೆಯಲಿದ್ದು ಸ್ಪರ್ಧಿಗಳ ನಡುವೆ ಬಿರುಸಿನ ಪೈಪೋಟಿ ಶುರುವಾಗಿದೆ. ಇಷ್ಟು ದಿನ ಸ್ನೇಹ, ವಿಶ್ವಾಸ ಅನ್ನುತ್ತಿದ್ದವರು ಎಲ್ಲ ಮರೆತು ಗೆಲುವಿನ ಕಡೆ ಗಮನ ಹರಿಸಿದ್ದಾರೆ. ಒಬ್ಬ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗಲಿದ್ದು ಅದಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಟಿಕೆಟ್ ಟು ಫಿನಾಲೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲು ಬಿಗ್ ಬಾಸ್ ಈ ವಾರ ಹಲವು ಟಾಸ್ಕ್‌ಗಳನ್ನು ಆಯೋಜಿಸಲಾಗಿತ್ತು, ಮೊದಲು ಗುಂಪು ಹಂತದ ಆಟಗಳನ್ನು ಆಡಿದ ಬಳಿಕ ವೈಯಕ್ತಿಕ ಆಟಗಳನ್ನು ಆಡಿಸಲಾಗಿದೆ.

ಕೊನೆಯ ಟಾಸ್ಕ್‌ನಲ್ಲಿ ಸೋತ ಗೌತಮಿ - ಮಂಜು
ಗೌತಮಿ, ಮಂಜು ಮತ್ತು ಧನರಾಜ್ ಒಂದು ತಂಡವಾಗಿ ಆಡುವಾಗ ಬುದ್ದಿವಂತಿಕೆಯಿಂದ ಧನರಾಜ್‌ರನ್ನು ಟಿಕೆಟ್ ಟು ಫಿನಾಲೆ ಟಾಸ್ಕ್‌ನಿಂದ ಹೊರ ಹೋಗುವಂತೆ ಮಾಡಿದರು. ಧನರಾಜ್ ಸವಾಲೊಡ್ಡುವ ಸ್ಪರ್ಧಿಯಲ್ಲ ಎಂದು ಗೌತಮಿ ಮತ್ತು ಮಂಜು ಕಾರಣ ನೀಡಿದ್ದರು. ಇದನ್ನು ನೋಡಿದ ಉಳಿದ ಸ್ಪರ್ಧಿಗಳು ಧನರಾಜ್‌ರನ್ನು ಹರಕೆಯ ಕುರಿಯಾದೆ ಎಂದು ರೇಗಿಸಿದ್ದರು. ಧನರಾಜ್ ಇದರಿಂದ ಬೇಸರಗೊಂಡರು ಅನಿವಾರ್ಯವಾಗಿ ಟಾಸ್ಕ್‌ನಿಂದ ಹೊರಗುಳಿಯಬೇಕಾಯಿತು.
ರಜತ್, ತ್ರಿವಿಕ್ರಮ್ ಮತ್ತು ಹನುಮಂತು ಟಿಕೆಟ್ ಟು ಫಿನಾಲೆ ಆಟ ಆಡಲು ಅರ್ಹತೆ ಪಡೆದುಕೊಂಡಿದ್ದರು. ಇನ್ನೊಂದು ಸ್ಥಾನಕ್ಕೆ ಗೌತಮಿ, ಮಂಜು, ಭವ್ಯ ಮತ್ತು ಮೋಕ್ಷಿತಾ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಗೌತಮಿ, ಮಂಜು ಮತ್ತು ಭವ್ಯ, ಮೋಕ್ಷಿತಾ ಎರಡು ತಂಡಗಳಾಗಿ ನೀರು ತುಂಬಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಟಾಸ್ಕ್‌ನಲ್ಲಿ ಭವ್ಯ ಮತ್ತು ಮೋಕ್ಷಿತಾ ಗೆಲುವು ಸಾಧಿಸಿದರು. ಕೊನೆಯಲ್ಲಿ ಭವ್ಯ ಮತ್ತು ಮೋಕ್ಷಿತಾ ನಡುವೆ ಆಟ ಆಡಿಸಲಾಯಿತು, ಇದರಲ್ಲಿ ಗೆಲುವು ಸಾಧಿಸಿದ ಭವ್ಯ ಟಿಕೆಟ್ ಟು ಫಿನಾಲೆ ಸ್ಪರ್ಧೆಯಲ್ಲಿ ಆಡಲು ಅರ್ಹತೆ ಪಡೆದುಕೊಂಡರು.
ಕರ್ಮ ರಿಟರ್ನ್ಸ್ ಎಂದು ಗೌತಮಿ ಕಣ್ಣೀರು
ನೀರು ತುಂಬಿಸುವ ಆಟದಲ್ಲಿ ಗೌತಮಿ ಮಾತು ಕೇಳದ ಕಾರಣ ಸೋಲಬೇಕಾಯಿತು. ಟಾಸ್ಕ್‌ನಲ್ಲಿ ಸೋತ ಬಳಿಕ ಗೌತಮಿ ಇದೇ ವಿಚಾರವನ್ನು ಮಂಜು ಬಳಿ ತಿಳಿಸಿ ಕಣ್ಣೀರು ಹಾಕಿದರು. ಇವರಿಬ್ಬರನ್ನು ಸೋತಿದ್ದ ನೋಡಿದ ಜನ ಕೂಡ ಕರ್ಮ ರಿಟರ್ನ್ಸ್ ಎಂದು ಹೇಳಿದ್ದಾರೆ.
ಮಂಜು ಗೌತಮಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ, ಗೌತಮಿ ಬೇಜಾರಿನಿಂದ ಹೊರ ಬರಲಿಲ್ಲ. ಸದ್ಯ ನಾಲ್ವರು ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದು ನಾಳೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications