ತರುಣ್‌ ಸುಧೀರ್‌ ಮದುವೆ ಫಿಕ್ಸ್: ಸೊಸೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಮಾಲತಿ ಸುಧೀರ್‌

ಬೆಂಗಳೂರು, ಜುಲೈ 03: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ತರುಣ್‌ ಸುಧೀರ್‌ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸದ್ಯ ಕಿರುತೆರೆಯ ಮಹಾನಟಿ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ತರುಣ್‌ ಸುಧೀರ್‌, ಬನಾರಸ್‌ ಚಿತ್ರದ ನಾಯಕಿ, ನಟಿ ಸೊನಾಲ್‌ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ. ತೆರೆಮರೆಯಲ್ಲಿ ಮದುವೆ ಸಿದ್ಧತೆಗಳು ಕೂಡ ಶುರುವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ.

Malathi Sudhir Reveal Secrets About Sandalwood Director And Actor Tharun Sudhir Marriage

ಈ ಬಗ್ಗೆ ತರುಣ್‌ ಸುಧೀರ್‌ ಅವರ ತಾಯಿ ಮಾಲತಿ ಅವರು ಮಾತನಾಡಿದ್ದು, ಮದುವೆ ಬಗ್ಗೆ ಖಚಿತ ಪಡಿಸಿದ್ದಾರೆ. ಜೊತೆಗೆ ಭಾವಿ ಸೊಸೆ ಬಗ್ಗೆ ಕೂಡ ಮಾತನಾಡಿದ್ದಾರೆ. ತರುಣ್‌ ಸುಧೀರ್‌ ಹಾಗೂ ಸೊಲಾನ್‌ ಅವರ ಮದುವೆ ಆಗುತ್ತದೆ. ಆದರೆ ದಿನಾಂಕ ಎಲ್ಲಾ ನಿಗದಿಯಾಗಿಲ್ಲ. ಸೊಲಾನ್‌ ಬಗ್ಗೆ ತರುಣ್‌ ಏನೂ ಹೇಳಲ್ಲ. ಆದರೆ ಒಂದು ನಿರ್ಧಾರ ಆದ ಮೇಲೆ ತಾನೆ ಹೇಳಬೇಕು. ವಿಚಾರ ಗೊತ್ತಿದ್ದರನೂ ಯಾವಾಗ ಏನು ಎನ್ನುವುದೆಲ್ಲಾ ನಿಗದಿಯಾಗಿಲ್ಲ.

ಸೊಲಾನ್‌ ಅವರ ಸಂಬಂಧಿಕರೆಲ್ಲಾ ದುಬೈನಿಂದ ಬರಬೇಕು. ಅವರೆಲ್ಲಾ ಮಾತನಾಡಬೇಕು. ಅದೆಲ್ಲಾ ಆದ ಮೇಲೆ ತಾನೆ ಅಂತಿಮ ನಿರ್ಧಾರವಾಗುತ್ತದೆ. ನಮ್ಮ ಮನೆಗೆ ಸೊಸೆಯಾಗಿ ಯಾರು ಬಂದರೂ ನನಗೆ ಖುಷಿ. ನನ್ನ ಮಗನಿಗೆ ಹೆಂಡತಿಯಾಗಿ ಯಾರು ಬಂದರೂ ನನಗೆ ಸಂತೋಷ ಎಂದಿದ್ದಾರೆ.

ಮೊದಲಿನಂದನೂ ನನಗೊಂದು ಆಸೆ ಇತ್ತು. ನನ್ನ ಮಗನಿಗೆ ನಾನು ಇರುವಾಗಲೇ ಮದುವೆಯಾಗಲಿ ಎನ್ನುವುದೇ ಒಂದು ಆಸೆ ಇತ್ತು. ಈ ಆಗುತ್ತಾನೆ ಅಂದರೆ ತುಂಬಾ ಸಂತೋಷ. ಒಂದು ಅಥವಾ ಎರಡು ತಿಂಗಳೊಳಗೆ ತರುಣ್‌ ಸುಧೀರ್‌ ಹಾಗೂ ಸೊಲಾನ್‌ ಅವರ ಮದುವೆ ಆಗುತ್ತದೆ ಎಂದು ಮಾಲತಿ ಸುಧೀರ್‌ ಅವರು ಅಧೀಕೃತವಾಗಿ ತಿಳಿಸಿದ್ದಾರೆ.

ಮೊದಲೇ ಅಳುತ್ತಿದ್ದೇವೆ ನಾವು: ದರ್ಶನ್‌ ಬಗ್ಗೆ ಕೇಳುತ್ತಿದ್ದಂತೆ ಕೈ ಮುಗಿದ ಮಾಲತಿ ಸುಧೀರ್‌

ಬಳಿಕ ಕೊನೆಯಲ್ಲಿ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಲತಿ ಸುಧೀರ್‌, ಕ್ಷಮಿಸಿ, ದಯವಿಟ್ಟು ನನಗೆ ಈ ಬಗ್ಗೆ ಕೇಳಬೇಡಿ. ನನ್ನನ್ನೂ ಏನೂ ಕೇಳಬೇಡಿ. ನನಗೆ ತುಂಬಾ ಅಳು ಬಂದು ಬಿಡುತ್ತದೆ. ಮೊದಲೇ ಅಳುತ್ತಿದ್ದೇವೆ ನಾವು. ಸದ್ಯ ಆ ವಿಚಾರದ ಬಗ್ಗೆ ಮಾತು ಬೇಡ ಎಂದು ಕೈ ಮುಗಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+