Lawyer Jagadish: ಡಿ.ಕೆ ಶಿವಕುಮಾರ್ ಬಗ್ಗೆ ಗಂಭೀರ ಆರೋಪ ಮಾಡಿದ ಲಾಯರ್ ಜಗದೀಶ್!
ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಸೆಲೆಬ್ರಿಟಿ ಲಾಯರ್ ಜಗದೀಶ್ ಅವರು ಮೂರು ತಿಂಗಳುಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದು ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಕನ್ನಡ ಬಿಗ್‌ಬಾಸ್‌ನ ಸೀಸನ್ 11ರಿಂದ ಹೊರ ಬಂದ ಮೇಲೆ ಲಾಯರ್ ಜಗದೀಶ್ ಅವರ ಹವಾ ಹೆಚ್ಚಾಗಿತ್ತು. ಆದರೆ, ಒಂದು ಹಂತದಲ್ಲಿ ಗನ್ ಬಳಸಿದ್ದು, ಲೋಕಲ್‌ನಲ್ಲಿ ಗಲಾಟೆಗಳು ನಡೆದ ಮೇಲೆ ಲಾಯರ್ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿ ಮೂರು ತಿಂಗಳು ಕಳೆದ ಮೇಲೆ ಲಾಯರ್ ಜಗದೀಶ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ನನ್ನ ಬಂಧನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆಪ್ತರೇ ಕಾರಣ ಅಂತ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ಹೌದು ಲಾಯರ್ ಜಗದೀಶ್ ಅವರು ಬರೋಬ್ಬರಿ 93 ದಿನಗಳ ಕಾಲ ಜೈಲಿನಲ್ಲಿ ಇದ್ದರು. ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಮೇಲೆ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಮೇಲೆ ಅವರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಕೂಡಿಗೇಹಳ್ಳಿ ಸಮೀಪದಲ್ಲಿ ಅಣ್ಣಾಮ್ಮ ದೇವಿ ಉತ್ಸವದ ಸಂದರ್ಭದಲ್ಲಿ ಲಾಯರ್ ಜಗದೀಶ್ ಅವರು, ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಸ್ಥಳೀಯರು ಮತ್ತು ಲಾಯರ್ ಜಗದೀಶ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ ಮುಂದುವರಿದು ಹೊಡೆದಾಟದವರೆಗೂ ಹೋಗಿ, ಕೊನೆಗೆ ಪೊಲೀಸ್ ಅವರು ಬಂದು ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಯಿತು.
ಈ ಸಂದರ್ಭದಲ್ಲಿ ಲಾಯರ್ ಜಗದೀಶ್ ಅವರ ಬಾಡಿ ಗಾರ್ಡ್ ಕಾನೂನು ಬಾಹಿರವಾಗಿ ಗುಂಡು ಹಾರಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಜಗದೀಶ್ ಅವರತ್ತಿರವಿದ್ದ ಗನ್ ಕೇವಲ ಉತ್ತರ ಪ್ರದೇಶದಲ್ಲಿ ಬಳಸುವುದಕ್ಕೆ ಮಾತ್ರ ಅವಕಾಶವಿತ್ತು. ಅದನ್ನು ಕರ್ನಾಟಕದಲ್ಲಿ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೂಡ ಇವರ ಮೇಲೆ ಕೇಳಿ ಬಂದಿತ್ತು. ಗಲಾಟೆ ನಡೆದ ಸಂದರ್ಭದಲ್ಲಿ ಲಾಯರ್ ಜಗದೀಶ್ ಅವರನ್ನು ಈ ಎಲ್ಲಾ ಕಾರಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಅವರು ಬರೋಬ್ಬರಿ ಮೂರು ತಿಂಗಳು ಜೈಲಿನಲ್ಲಿದ್ದರು. ಇದೀಗ ಹೊರಗೆ ಬರುತ್ತಿದ್ದಂತೆಯೇ ಗಂಭೀರ ಆರೋಪವನ್ನು ಮಾಡಿದ್ದಾರೆ.
ಸಾಮಾನ್ಯ ಜನರ ಮನೆಯ ಮಕ್ಕಳು ರಾಜಕೀಯಕ್ಕೆ ಬರಲೇಬಾರದು. ಒಳ್ಳೊಳ್ಳೆಯ ಸಿನಿಮಾ ಮಾಡಬಾರದು & ಫೇಮಸ್ ಆಗಬಾರದು ಎನ್ನುವ ಸೈಕೋ ಪೊಲಿಟಿಕಲ್ ರೋಗವಿದೆ ಎಂದು ಅಂದುಕೊಳ್ಳುತ್ತೇನೆ. ನನ್ನನ್ನು ಇಲ್ಲಿ ಯಾರೂ ಸಹ ಬೆಳೆಸಲಿಲ್ಲ. ನನ್ನ ತಂದೆ ಅವರು ಕುಮಾರಸ್ವಾಮಿ ಏನೂ ಅಲ್ಲ. ನಮ್ಮ ಅಪ್ಪ ಯಡಿಯೂರಪ್ಪನೂ ಅಲ್ಲ. ಇನ್ನು ನಮ್ಮ ಅಪ್ಪ ಸಿದ್ದರಾಮಯ್ಯ ಸಹ ಅಲ್ಲ. ಆದರೂ ಸಹ ನಾನು ಇಲ್ಲಿಯ ವರೆಗೆ ಬೆಳೆದುಕೊಂಡು ಬಂದಿದ್ದೇನೆ. ನನ್ನನ್ನು ದೇವರು ಬೆಳೆಸಿದ್ದಾರೆ. ಜನರು ನನ್ನನ್ನು ಇಷ್ಟಪಟ್ಟಿದ್ದಾರೆ ಅಂತ ಅವರು ಹೇಳಿದ್ದಾರೆ.
ನನ್ನ ಬೆಳವಣಿಗೆಯನ್ನು ನೋಡಿದರೆ ಕೆಲವು ಊಸರವಳ್ಳಿ ರಾಜಕಾರಣಿಗಳು & ಒಂದಷ್ಟು ಅಧಿಕಾರಿಗಳಿಗೆ ಭಯವಿದೆ. ನಾಳೆ ದಿನ ನಮಗೆ ಏನಾದರೂ ಆಗಬಹುದು ಅಂತ ಭಯ ಬೀಳುತ್ತಿದ್ದಾರೆ ಅಂತಲೂ ಅವರು ಹೇಳಿದ್ದಾರೆ.












Click it and Unblock the Notifications