Bigg Boss: ಕಿಚ್ಚ ಸುದೀಪ್ ನಂತರ ಲಾಯರ್ ಜಗದೀಶ್ ಬಿಗ್‌ಬಾಸ್ ನಿರೂಪಕ!
ಮುಂದಿನ ಬಿಗ್‌ಬಾಸ್ ನಿರೂಪಕ ವೃತ್ತಿಗೆ ನಾನು ವಿದಾಯ ಹೇಳುತ್ತಿದ್ದೇನೆ ಎಂದು ಕಿಚ್ಚ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ. ಹಾಗಾದರೆ ಮುಂದಿನ ಬಿಗ್‌ಬಾಸ್ ನಿರೂಪಕ ಯಾರು ಎಂಬ ಪ್ರಶ್ನೆಗಳಿಗೆ ಉತ್ತರಗಳೇ ಸಿಗುತ್ತಿಲ್ಲ. ಕೆಲವರು ಮುಂದಿನ ಬಿಗ್‌ಬಾಸ್ ನಿರೂಪಕ ನಟ ಯಶ್ ಎಂದರೆ ಇನ್ನೂ ಕೆಲವರು ದರ್ಶನ್ ತೂಗುದೀಪ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಬಿಗ್‌ಬಾಸ್ ಮನೆಯಿಂದ ಹೊರಬಂದ ಲಾಯರ್ ಜಗದೀಶ್ ಕೂಡ ಬಿಗ್‌ಬಾಸ್ ನಿರೂಪಕರ ರೇಸ್‌ನಲ್ಲಿ ಇದ್ದಾರೆ.
ಹೌದು... ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನವೊಂದರಲ್ಲಿ ಬಿಗ್‌ಬಾಸ್ ನಿರೂಪಣೆ ನಾನು ಮಾಡುತ್ತೇನೆ ಎಂದು ಲಾಯರ್ ಜಗದೀಶ್ ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನವೊಂದರಲ್ಲಿ ಲಾಯರ್ ಜಗದೀಶ್, ' ಬಿಗ್‌ಬಾಸ್ ಮನೆಗೆ ಹೋಗಲು ನಾನು ಅದೃಷ್ಟ ಮಾಡಿದ್ದೇನೆ. ಕೋಟ್ಯಾಂತರ ಜನರಲ್ಲಿ ನಮ್ಮನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ ಅಂದರೆ ನಾನು ನಿಜಕ್ಕೂ ಅದೃಷ್ಟವಂತ. ಮುಂದಿನ ದಿನಗಳಲ್ಲಿ ಬಿಗ್‌ಬಾಸ್ ನಿರೂಪಕರಾಗಿ ಸುದೀಪ್ ಸರ್ ಇರುವುದಿಲ್ಲ ಅಂತ ಕೇಳಿ ಬೇಸರವಾಯ್ತು. ಅವಕಾಶ ಕೊಟ್ಟರೆ ನಾನೂ ಕೂಡ ನಿರೂಪಕನಾಗುತ್ತೇನೆ' ಎಂದು ಹೇಳಿದ್ದಾರೆ. ಹಾಗಾದರೆ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಜರ್ನಿ ಬಗ್ಗೆ ಜಗದೀಶ್ ಹೇಳಿದ್ದೇನು?

ಬಿಗ್‌ಬಾಸ್ ಮನೆಯ ಜರ್ನಿ ಬಗ್ಗೆ ಲಾಯರ್ ಜಗದಿಶ್ ಸಂದರ್ಶನವೊಂದರಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಮತ್ತೆ ಬಿಗ್‌ಬಾಸ್ ಮನೆಗೆ ಹೋಗ್ತಾರಾ ಲಾಯರ್ ಜಗದೀಶ್? ಇದಕ್ಕೆ ಉತ್ತರಿಸಿದ ಜಗದೀಶ್ ಅವರು, 'ನನಗೆ ಮತ್ತೆ ಬಿಗ್‌ಬಾಸ್ ಮನೆಗೆ ಹೋಗಬೇಕು ಎನ್ನುವ ಒತ್ತಾಯ ಇದೆ. ಜನ ನನ್ನನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಲು ಇಷ್ಟಪಡುತ್ತಾರೆ. ಜನರಿಗೆ ನಾನು ಬಿಗ್‌ಬಾಸ್ ಮನೆಯಲ್ಲಿ ಇರಲೇಬೇಕು. ಅದನ್ನು ಅವರು ಕಲ್ಪನೆ ಮಾಡಿಕೊಂಡುಬಿಟ್ಟಿದ್ದಾರೆ. ನಾನು ಇಲ್ದೆ ಇರೋದು ಕೂಡ ಬಿಗ್‌ಬಾಸ್ ಮನೆ ಖಾಲಿ ಖಾಲಿಯಂತೆ ಕಾಣಿಸುತ್ತದೆ. ಹೆಣ್ಮಕ್ಕಳ ಜೊತೆ ರೋಮ್ಯಾಂಟಿಕ್ ಮಾತು, ಬೆಳಗ್ಗೆ ಎದ್ದು ಡ್ಯಾನ್ಸ್ ಮಾಡೋದು. ಇದೆಲ್ಲಾ ಜನರಿಗೆ ಇಷ್ಟ ಆಗಿದೆ. ಒಂದು ವೇಳೆ ಜನ ಒತ್ತಾಯಿಸಿ ಬಿಗ್‌ಬಾಸ್ ತಂಡ ಮತ್ತೆ ನನ್ನನ್ನು ಕರೆದರೆ ಖಂಡಿತ ನಾನು ಹೋಗುತ್ತೇನೆ' ಎಂದಿದ್ದಾರೆ.
ಯಾರಿಗೂ ಹೆದರದ ಜಗದೀಶ್ ಬಿಗ್‌ಬಾಸ್ ಮನೆಯಲ್ಲಿ ಹೆದರಿಕೊಂಡಿದ್ದು ಯಾರಿಗೆ? ಇದಕ್ಕೆ ಉತ್ತರಿಸಿದ ಜಗದೀಶ್ ಅವರು, 'ಬಿಗ್‌ಬಾಸ್ ಅನ್ನೋದು ಹೆಡ್‌ಮಾಸ್ಟರ್ ಇದ್ದಂತೆ. ಬಿಗ್‌ಬಾಸ್ ಮನೆಯಲ್ಲಿ ಕೇಳುವ ಧ್ವನಿಗೆ ಒಂದು ಶಕ್ತಿ ಇದೆ. ಅದಕ್ಕೆ ನಾನು ಹೆದರಿಕೊಂಡೆ (ಇದು ಬಿಗ್‌ಬಾಸ್). ನಮಗೆ ಎರಡು ಮೂರು ದಿನ ಆದ ಬಳಿಕ ನನಗೆ ಬಿಗ್‌ಬಾಸ್ ಧ್ವನಿ ಕೇಳಿದ ತಕ್ಷಣ ಭಯ ಆಗಲು ಶುರುವಾಯ್ತು. ಹಾಗಿದ್ದರೂ ನಾನು ಬಿಗ್‌ಬಾಸ್ ಜೊತೆಗೆ ಫ್ರೆಂಡ್ಲಿ ಆಗಿ ಇರುತ್ತಿದ್ದೆ. ಬಿಗ್‌ಬಾಸ್‌ಗೆ ನಾನು ತಿಂಡಿ ಮಾಡಿಸುತ್ತಿದ್ದೆ. ಇದು ಯಾವ ಶೋನಲ್ಲೂ ಆಗಿಲ್ಲ. ಇದು ಹೆಚ್ಚು ಪ್ರಚಾರ ಪಡೆದಿದೆ ಅನ್ನೋದು ನನಗೆ ಮನೆಯಿಂದ ಹೊರಬಂದ ಬಳಿಕ ಗೊತ್ತಾಯಿತು. ನಾನು ಹೀಗೆ ಜೋಕ್ ಮಾಡೋದನ್ನು ಬಿಗ್‌ಬಾಸ್ ಹೆಲ್ದಿಯಾಗಿ ತೆಗೆದುಕೊಂಡರು' ಎಂದಿದ್ದಾರೆ.
ಮಂಜು ಲಾಯರ್ ಜಗದೀಶ್ ಅವರನ್ನು ಹೀರೋ ಮಾಡಿದ್ರಾ? ಇದಕ್ಕೆ ಉತ್ತರಿಸಿದ ಜಗದೀಶ್ ಅವರು, 'ಹೌದು.... ಒಂದು ಸಿನಿಮಾದಲ್ಲಿ ಹೀರೋ, ವಿಲನ್ ಎಷ್ಟು ಮುಖ್ಯನೋ.. ಹಾಗೆ ಮಂಜು ಬಿಗ್‌ಬಾಸ್ ಮನೆಯಲ್ಲಿ ನನ್ನನ್ನು ಹಿರೋ ಮಾಡಿದವರು. ಇದಕ್ಕಾಗಿ ನಾನು ಮಂಜುಗೆ.. ಐ ಲವ್ ಯು ಹೇಳ್ತೇನೆ. ಅವರು ರೇಗಿಸೋರು. ನನ್ನನ್ನ ಒಬ್ಬ ಹೀರೋ ಮಾಡ್ಲಿಕ್ಕೆ ಏನೇನು ಬೇಕೋ ಅದನ್ನೆಲ್ಲಾ ಮಾಡೋರು' ಎಂದಿದ್ದಾರೆ.
ಹಂಸ ಅವರಿಗೆ ತುಂಬಾ ಬೇಜಾರಾಗಿದ್ದು ಯಾಕೆ? ಇದಕ್ಕೆ ಉತ್ತರಿಸಿದ ಜಗದೀಶ್ ಅವರು, 'ನಾನು ಒಂದು ಪದ ಬಳಸಬಾರದಿತ್ತು ಬಳಸಿದೆ. ಅದರಿಂದ ಅವರ ಗಂಡನಿಗೂ ಬೇಜಾರಾಗಿದೆ. ನನ್ನಿಂದ ತಪ್ಪಾಗಿದೆ.. ಅವರಿಗೆ ಹಾಗೂ ಇಡೀ ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ಆ ಪದ ಬಳಸಬಾರದಿತ್ತು. ತಪ್ಪಾಗಿದೆ.. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ' ಎಂದಿದ್ದಾರೆ.
ಮುಂದಿನ ಬಿಗ್‌ಬಾಸ್ ನಿರೂಪಕರಾಗಿ ಸುದೀಪ್ ಇರುವುದಿಲ್ಲ ಈ ಬಗ್ಗೆ ಏನು ಹೇಳ್ತೀರಾ? ಇದಕ್ಕೆ ಉತ್ತರಿಸಿದ ಜಗದೀಶ್ ಅವರು. ' ಮುಂದಿನ ಬಿಗ್‌ಬಾಸ್ ನಿರೂಪಕರಾಗಿ ಸುದೀಪ್ ಇರುವುದಿಲ್ಲ ಅಂತ ಕೇಳಿ ಬೇಸರವಾಯ್ತು. ನನಗೆ ಅವಕಾಶ ಸಿಕ್ಕರೆ ನಾನು ನಿರೂಪಣೆ ಮಾಡುತ್ತೇನೆ. ನಾನು ಒಂದಲ್ಲಾ ಒಂದು ದಿನ ಸಿಎಂ ಆಗುತ್ತೇನೆ. ಇದನ್ನು ನಾನು ಹೇಳುತ್ತಾ ಬಂದಿದ್ದೇನೆ. ಮುಮದೊಂದು ದಿನ ನಾನು ಸಿಎಂ ಆಗೇ ಆಗುತ್ತೇನೆ' ಎಂದಿದ್ದಾರೆ.












Click it and Unblock the Notifications