Actor Darshan: ದರ್ಶನ್ ನಿರಪರಾಧಿ! ಕೃತ್ಯ ಎಸಗಿದ್ದೇ ಬೇರೆಯವರು ಎಂದ ವಕೀಲ ಜಗದೀಶ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಸೆಪ್ಟೆಂಬರ್ 30ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ ವಕೀಲ ಕೆ.ಎನ್. ಜಗದೀಶ್ ಕುಮಾರ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ರೀತಿಯದ್ದೇ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದೀಗ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವಕೀಲ ಜಗದೀಶ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದ ದರ್ಶನ್ ಅಲ್ಲ, ದರ್ಶನ್ ಒಂದೆರಡು ಏಟು ಹೊಡೆದಿರಬಹುದು. ಆದರೆ, ದರ್ಶನ್ ಹೊಡೆಯುವ ಮೊದಲನೇ ಬಹುತೇಕ ಜೀವ ಹೋಗುವಂತೆ ಹೊಡೆದಿರುವುದು ಎ13 ದೀಪಕ್ ಎನ್ನುವವನು. ಈ ದೀಪಕ್ ಶಾಸಕ ಮುನಿರತ್ನ ಅವರ ಅಕ್ಕನ ಮಗ, ಮುನಿರತ್ನ ಅವರ ಸೂಚನೆಯಂತೆ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಜಗದೀಶ್ ಮಾಡಿರುವ ಆರೋಪವಾಗಿದೆ.
ದರ್ಶನ್ ಪ್ರಕರಣ : ರೇಣುಕಾಸ್ವಾಮಿ ಕೊಲೆ ಮಾಡಿದ ನೈಜ ಆರೋಪಿ ದೀಪಕ್. ಅಸಲಿ ಸತ್ಯದ ಅನಾವರಣ. pic.twitter.com/bWT0Wcgual
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) September 17, 2024
ಪ್ರಚಾರ ಮಾಡಿದ್ದಕ್ಕೆ ಸಿಟ್ಟಾದ್ರ ಶಾಸಕ?
ಶಾಸಕ ಮುನಿರತ್ನ ಅವರಿಗೆ ದರ್ಶನ್‌ರನ್ನು ಮಟ್ಟ ಹಾಕಬೇಕಿತ್ತು. ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಮುನಿರತ್ನ ಕೋಪಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ದರ್ಶನ್‌ಗೆ ಈಗಲೂ ಹುಡುಗಾಟ, ಹುಚ್ಚ ಅವನು, ಈಗಲೂ ಮಧ್ಯದ ಬೆರಳು ತೋರಿಸಿಕೊಂಡು ಓಡಾಡುತ್ತಾನೆ. ಆತನಿಗೆ ಸ್ವಲ್ಪ ಬುದ್ದಿ ಹೇಳಿ ಎಂದು ಪತ್ನಿ ವಿಜಯಲಕ್ಷ್ಮಿ ಅವರಿಗೆ ಮನವಿ ಮಾಡಿದ್ದಾರೆ.

ಮಾಡದೇ ಇರುವ ಕೊಲೆಯನ್ನು ಮೈಮೇಲೆ ಎಳೆದುಕೊಂಡಿರೋದ್ಯಾಕೆ? ಯಾರಿಗೋಸ್ಕರ್ ಈ ತ್ಯಾಗ ಮಾಡ್ತಿದೀಯಾ ದರ್ಶನ್ ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ. ಇದನ್ನೆಲ್ಲಾ ಮಾಡಲು ಶಾಸಕ ಮುನಿರತ್ನ ಕೇಂದ್ರ ಸಚಿವರೊಬ್ಬರಿಂದ ಪೊಲೀಸರ ಮೇಲೆ ಒತ್ತಡ ಹಾಕಿಸಿದ್ದಾರೆ ಎಂದು ಜಗದೀಶ್ ಆರೋಪ ಮಾಡಿದ್ದಾರೆ.
ಯಾವುದು ನಿಜ? ಯಾವುದು ಸುಳ್ಳು?
ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಪೊಲೀಸರು ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪೊಲೀಸರ ಎದುರು ರೇಣುಕಾಸ್ವಾಮಿ ಮೇಲೆ ನಾನು ಹಲ್ಲೆ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈಗ ವಕೀಲ ಜಗದೀಶ್ ಮಾಡಿರುವ ಆರೋಪಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ದಲಿತ ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಮೇಲೆ ಶಾಸಕ ಮುನಿರತ್ನ ಅವರನ್ನು ಕೂಡ ಈಗ ಬಂಧಿಸಲಾಗಿದೆ. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೂಡ ಅವರ ಹೆಸರು ಕೇಳಿ ಬಂದಿದ್ದು, ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ನಡೆಸುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.












Click it and Unblock the Notifications