ಪಬ್ಲಿಕ್ ಟಿವಿ ರಂಗಣ್ಣಗೆ ಕ್ಷಮೆಯಾಚಿಸಿದ ಲಾಯರ್‌ ಜದೀಶ್

K.N.Jagadeesh Kumar: ಅವಾಚ್ಯ ಶಬ್ಧಗಳ ಬಳಕೆ ಹಿನ್ನೆಲೆ ಲಾಯರ್‌ ಜಗದೀಶ್‌ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿತ್ತು. ಮತ್ತೊಂದೆಡೆ, ಜಗದೀಶ್‌ಗೆ ತಳ್ಳಿದ್ದಾರೆ ಎಂಬ ಕಾರಣಕ್ಕೆ ರಂಜಿತ್‌ ಅವರನ್ನು ಹೊರಹಾಕಿದ್ದರು. ಬಳಿಕ ಜಗ್ಗು ಅವರು ದೊಡ್ಮನೆಯ ಸ್ಪರ್ಧಿಗಳು, ಸುದೀಪ್‌ ಅವರಿಗೆ ಕ್ಷಮೆಯಾಚನೆ ಮಾಡಿದ್ದು, ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ಪಬ್ಲಿಕ್‌ ಟಿವಿ ರಂಗಣ್ಣಗೆ ಕ್ಷಮೆಯಾಚಿಸಿರುವ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ.

ಪಬ್ಲಿಕ್‌ ಟಿವಿ ರಂಗಣ್ಣ ಅವರೇ ನಾನು ನಿಮ್ಮನೆ ಲೆಕ್ಕಾಚಾರ ಕೇಳಿದ್ರೆ ತಪ್ಪೇನು? ನೀವು ಸಂವಿಧಾನಕ್ಕಿಂತ ದೊಡ್ಡವರಾ? ಎಂದು ಪ್ರಶ್ನೆ ಮಾಡುತ್ತಾರೆ. ರಂಗಣ್ಣ ಅವರು ಬಡವರ ಮೇಲೆ ಕರುಣೆ ಇಲ್ಲ ರೀ ಈ ಅಧಿಕಾರಿಗಳಿಗೆ ಎಂದು ರಂಗಣ್ಣ ಪ್ರಶ್ನೆ ಕೇಳಿದಾಗ ಈ ಮಾತುಗಳು ಹೊರಬರುತ್ತವೆ. ಇದೀಗ ರಂಗಣ್ಣಗೆ ಗ್ರೇಟ್ ಫಾಲೋವರ್ಸ್‌ ಇದ್ದಾರೆ. ತಪ್ಪಾಯ್ತು ಕ್ಷಮಿಸಿ ರಂಗಣ್ಣ ಎಂದು ಕ್ಷಮೆಯಾಚನೆ ಮಾಡಿದ್ದಾರೆ.

Lawyer Jadeesh Apologizes to Public TV s H R Ranganath

ಸಾಮಾನ್ಯವಾಗಿ ಲಾಯರ್‌ ಜಗದೀಶ್‌ ಅವರು ಎಲ್ಲಾ ರಾಜಕಾರಣಿಗಳು, ಸಿನಿಮಾ ನಟರ ಕೆಲವೊಂದು ವಿಚಾರ ಇಟ್ಟುಕೊಂಡು ಏಕವಚನದಲ್ಲೇ ವಾಗ್ದಾಳಿ ನಡೆಸುತ್ತಿರುತ್ತಾರೆ. ಮೊದಲಿಗೆ ಅವರ ಬಾಯಲ್ಲಿ ಬರುವುದು ಲೇ.. ಏನೋ.. ಬಾರೋ ನನ್ನ ಮುಂದೆ.. ಅನ್ನೋ ಪದ. ಯಾರೇ ಆಗಿರಲಿ ಅವರಿಗೆ ಮೊದಲಿಗೆ ತರಾಟೆ ತೆಗೆದುಕೊಳ್ಳುವುವಾಗ ಅವರು ಬಳಸುವ ಪದ ಇದೇ ಆಗಿದೆ.

ಇನ್ನೂ ಬಿಗ್‌ ಬಾಸ್‌ ಮನೆಗೆ ಹೋಗಿ ಅಲ್ಲಿ ಘರ್ಜಿಸಿ ಕೆಲವೇ ದಿನಗಳಲ್ಲಿ ಕರ್ನಾಟಕ ಕ್ರಷ್‌ ಎಂದು ಪ್ರಖ್ಯಾತಿ ಪಡೆದರು. ಆಗಿನಿಂದ ಅವರನ್ನು ಬಿಗ್‌ ಬಾಸ್‌ ಮನೆ ಮಂದಿಯಲ್ಲ ಕೆಣಕಲು ಶುರು ಮಾಡಿದರು. ಆಗ ಅವರು ಕೆಟ್ಟ ಭಾಷೆಯಲ್ಲಿ ಎಲ್ಲರನ್ನು ಬಯ್ಯುತ್ತಾ.. ಬನ್ರೋ ಲೇ.. ಬನ್ರೋ.. ನಾನ್‌ ಸಿಂಗಲ್‌ ಆಗಿ ಬರ್ತೀನಿ ಎಂದು ಗಲಾಟೆಗೆ ಇಳಿದುಬಿಡುತ್ತಿರು.

ಇದೇ ವಿಚಾರವನ್ನು ಇಟ್ಟುಕೊಂಡು ಎಲ್ಲರೂ ಲಾಯರ್‌ ಜಗದೀಶ್‌ ಮೇಲೆ ಗುಂಪಾಗಿ ಗಲಾಟೆಗೆ ಇಳಿದಿದ್ದರು. ಬಳಿಕ ಬಿಗ್‌ ಬಾಸ್‌ ಲಾಯರ್‌ ಜಗದೀಶ್‌ ಅವರನ್ನು ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ ಎಂದು ಹೊರಗಡೆ ಹಾಕಿದರು. ಮತ್ತೆ ಅವರು ಬಿಗ್‌ ಬಾಸ್‌ ಮನೆಗೆ ವಾಪಾಸ್‌ ಆಗಿದ್ದಾರೆ ಎನ್ನವ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಬ್ಲಿಕ್‌ ಟಿ.ವಿ.ರಂಗಣ್ಣಗೆ ಕ್ಷಣೆ ಕೇಳಿರುವ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ರಂಗಣ್ಣಗೆ ಬೈದಿದ್ದ ಲಾಯರ್‌ ಜಗದೀಶ್‌: ರಂಗಣ್ಣ.. ರಂಗಣ್ಣ..ಡಿಫಾಮೇಶನ್‌ ಅನ್ನು ಚಾನೆಲ್‌ ಅಲ್ಲಿ ಹಾಕೋಬೇಡಿ. ಡೈರೆಕ್ಟ್‌ ಆಗಿ ಕೋರ್ಟ್‌ಗೆ ಹೋಗೋಣ. ಡಿಫಾಮೇಶನ್‌ ಸೂಟ್‌ ಹಾಕೋಣ. ನೀನು ಹಾಕಿದ್ರೇನೆ ನಾನು ಡಾಕ್ಯೂಮೆಂಟ್‌ ಪ್ರೊಡ್ಯೂಸ್‌ ಮಾಡೋದು. ಕಮಾನ್‌ ರಂಗಣ್ಣ.. ಕಮಾನ್‌.. ನನ್ನೇನು ಹೇದರಿಸೋಕೆ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅಲ್ಲ ಬಾ.. ಬಾ.. ಡಿಫಾಮೇಷನ್‌ ಫೈಲ್‌ ಮಾಡಿ ನನಗೆ ನೋಟಿಸ್ ಕಳ್ಸು.. ಆಗ ನಿಜವಾದ ರೂಪವನ್ನು ಇಡೀ ಕರ್ನಾಟಕಕ್ಕೆ ತೋರಿಸಲಿಲ್ಲ ಅಂದ್ರೆ ಎಂದು ಸವಾಲು ಹಾಕಿದ್ದರು.

ಅಷ್ಟೇ ಅಲ್ಲದೆ, ಅವಾಯ್‌ ಚಪ್ಪಲಿ ರಂಗಣ್ಣ, ಬೆಂಜು, ಬಂಗಾರದ ಮಣ್ಣು ರೆಕಾರ್ಡ್‌ ಮಾಡ್ಕೋ ಆನ್‌ ರೆಕಾರ್ಡ್‌ ಹಾಕುತ್ತಿದ್ದೇನೆ. ನಾನು ತೋರಿಸಿಲ್ಲ ಅಂದ್ರೆ, ಕೆಂಪೇಗೌಡನ ವಂಶದ ಜಗದೀಶನೇ ಅಲ್ಲ. ಚಾನಲ್‌ ಅಲ್ಲಿ ಹಾಕೋಬಾರ್ದ್‌ ಡಿಫಾಮೇಷನ್‌ ಕೇಸ್‌ ಬಗ್ಗೆ. ಲಾಯರ್ ಬೇಕಾದ್ರೆ ಹೇಳಿ ನಾನು ಕೊಡಿಸುತ್ತೇನೆ. ಎಲ್ಲದಕ್ಕೂ ತೀರ್ಮಾನ ಮಾಡಿಯೇ ಈ ಪೀಲ್ಡಿಗೆ ಬಂದಿರೋದು. ನಿನ್ನ ಜಾತಕವನ್ನು ಇಡೀ ಇಂಡಿಯಾಗೆ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದರು. ಇಷ್ಟೆಲ್ಲ ಮಾತನಾಡಿದ್ದ ಲಾಯರ್‌ ಜಗದೀಶ್‌ ಅವರು ಇದೀಗ ಪಬ್ಲಿಕ್‌ ಟಿವಿ ರಂಗಣ್ಣ ಅವರಿಗೆ ಕ್ಷಣೆ ಕೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+