ಸರಿಗಮಪ ಚಾನ್ಸ್ ಮಿಸ್ ಆದರೂ ದೊಡ್ಡ ಅವಕಾಶ ಗಿಟ್ಟಿಸಿಕೊಂಡ ಲಹರಿ, ಏನದು?
ಸಂಗೀತಪ್ರಿಯರ ನೆಚ್ಚಿನ ರಿಯಾಲಿಟಿ ಶೋ ಸರಿಗಮಪ ಈ ಸೀಸನ್‌ನಲ್ಲಿ ಲಹರಿ ಮಹೇಶ್ ಕೂಡ ಅಪಾರ ಅಭಿಮಾನಿಗಳನ್ನ ಹೊಂದಿದ್ದರು. ಆದರೆ ಲಹರಿ ಫಿನಾಲೆ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆಗ ಲಹರಿ ಬೆನ್ನಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ನಿಂತರು. ಲಹರಿ ಫಿನಾಲೆಯಲ್ಲಿ ಇರಬೇಕಿತ್ತು. ಆ ಪ್ರತಿಭೆ ಆಕೆಗಿದೆ ಎಂದು ಧ್ವನಿ ಎತ್ತಿದ್ದರು. ಆದರೆ ಅಂತಿಮವಾಗಿ ಸರಿಗಮಪ ಗೆದ್ದಿದ್ದು ಶಿವಾನಿ. ಇನ್ನು ಲಹರಿ ಪ್ರತಿಭೆಗೆ ಒಳ್ಳೆಯ ಅವಕಾಶ ಸಿಗಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಲಹರಿ ಸರಿಗಮಪ ವಿನ್ ಆಗದಿದ್ರೂ ತುಂಬಾ ದೊಡ್ಡಮಟ್ಟಕ್ಕೆ ಬೆಳೆಯುತ್ತೀರಿ ಎಂದು ಹಲವರು ಬೆನ್ನುತಟ್ಟಿದ್ದರು. ಈಗ ಆ ಮಾತು ನಿಜವಾಗಿದೆ.
ಹೌದು ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಿಂದ ಮೆಚ್ಚುಗೆ ಪಡೆದಿದ್ದ ಲಹರಿ ಫಿನಾಲೆಯ ಟಾಪ್ ಸ್ಪರ್ಧಿಗಳಲ್ಲೂ ಸ್ಥಾನ ಪಡೆಯಲಿಲ್ಲ. ಆಗ ಲಹರಿ ಮಹೇಶ್ ಅವರ ಪರ ಒಂದು ರೀತಿ ಅಭಿಯಾನವೇ ಶುರುವಾಗಿತ್ತು. ಲಹರಿ ಫಿನಾಲೆಯಲ್ಲಿ ಇರಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೂ ಎದೆಗುಂದದ ಲಹರಿ ಅವರು ಎಂದಿನಂತೆ ತಮ್ಮ ಸಾಮರ್ಥ್ಯ, ಪ್ರತಿಭೆಯನ್ನು ನಂಬಿದ್ದರು. ಈಗ ಅದೇ ಅವರಿಗೆ ದೊಡ್ಡ ವರದಾನವಾಗಿದೆ. ರಿಯಾಲಿಟಿ ಶೋನಲ್ಲಿ ಕಪ್ ಗೆದ್ದಿದ್ದು ಮಿಸ್ ಆದರೂ ದೊಡ್ಡ ಅವಕಾಶವೇ ಲಹರಿ ಹುಡುಕಿ ಬಂದಿದೆ.

ಲಹರಿ ಅವರ ಗಾನಕ್ಕೆ ಮನಸೋತಿದ್ದವರು ಜ್ಯೂನಿಯರ್ ಶ್ರೇಯಾ ಘೋಷಾಲ್ ಕರೆದಿದ್ದರು. ಆದರೆ ಇಂದು ಶ್ರೇಯಾ ಘೋಷಾಲ್ ಅವರಿಗೇ ಪೈಪೋಟಿ ನೀಡುವ ಸ್ಥಾನ ಲಹರಿಗೆ ಒಲಿದಿದೆ. ಶ್ರೇಯಾ ಘೋಷಾಲ್ ಹಾಡಬೇಕಿದ್ದ ಹಾಡನ್ನು ಈಗ ಲಹರಿ ಹಾಡಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ ನಟನೆಯ ʻಬ್ರ್ಯಾಟ್ʼ ಸಿನಿಮಾದ ನಾನೇ ನೀನಂತೆ ಹಾಡು ಇತ್ತೀಚೆಗೆ ರಿಲೀಸ್ ಆಗಿದ್ದು, ಈ ಹಾಡನ್ನು ಖ್ಯಾತ ಗಾಯಕ ಸಿದ್ ಶ್ರೀರಾಮ್ ಹಾಗೂ ಲಹರಿ ಮಹೇಶ್ ಧ್ವನಿಯಲ್ಲಿ ಮೂಡಿ ಬಂದಿದೆ. ವಿಶೇಷ ಅಂದ್ರೆ ಈ ಹಾಡನ್ನ ಮೊದಲಿಗೆ ಶ್ರೇಯಾ ಘೋಷಾಲ್ ಅವರೇ ಹಾಡಬೇಕಿತ್ತು. ಆದರೆ ಇದು ಲಹರಿ ಪಾಲಾಗಿದೆ.
ಆರಂಭದಲ್ಲಿ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಬೇಕಾಗಿತ್ತು. ಸಿದ್ ಶ್ರೀರಾಮ್ ಮತ್ತು ಶ್ರೇಯಾ ಘೋಷಾಲ್ ಇಬ್ಬರೂ ಗಾಯಕರಾಗಿ ಫಿಕ್ಸ್ ಆಗಿದ್ದರು. ಆದರೆ ಬಜೆಟ್ ಮತ್ತು ಧ್ವನಿಯಲ್ಲಿ ಸಮರ್ಪಕತೆಗಾಗಿ ಹೊಸ ಪ್ರತಿಭೆಯನ್ನು ಹುಡುಕಬೇಕಾಯಿತು. ಆದ್ದರಿಂದ ಲಹರಿ ಮಹೇಶ್ ಅವರಿಗೆ ಅವಕಾಶ ನೀಡಲಾಯಿತು ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ. ಬ್ರ್ಯಾಟ್ ಸಿನಿಮಾ ಮೂಲಕ ಲಹರಿ ಕನ್ನಡ ಸಿನಿಮಾ ಗಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಲಹರಿ ಕರೆತಂದಿದ್ದು ಅರ್ಜುನ್ ಜನ್ಯ
ಲಹರಿ ಭವಿಷ್ಯದ ಶ್ರೇಯಾ ಘೋಷಾಲ್ ಆಗಿ, ಅವರು ಹಾಡಬೇಕಿದ್ದ ಹಾಡಿಗೆ ಧ್ವನಿಯಾಗಿದ್ದಾರೆ. ಮೊದಲ ಹಾಡಿನಿಂದಲೇ ಪ್ರಶಂಸೆಗಳಿಗೆ ಪಾತ್ರವಾಗಿದ್ದಾರೆ. ಹಾಡಿಗೆ ಬಜೆಟ್ ಸಮಸ್ಯೆಯಾದಾಗ ಅರ್ಜುನ್ ಜನ್ಯ ಅವರೇ ನೀವು ಕೇಳಿದಂತಹ ವಾಯ್ಸ್ ನಾನು ಕನ್ನಡದಲ್ಲಿ ಹುಡುಕಿದ್ದೇನೆ. ಹೊಸ ಸಿಂಗರ್, ಆದ್ರೆ ಮುಂದಿನ ಕನ್ನಡದ ಶ್ರೇಯಾ ಘೋಷಾಲ್ ಅಂತ ಅರ್ಜುನ್ ಜನ್ಯ ಲಹರಿ ಬಗ್ಗೆ ಹೇಳಿದ್ದರು ಎಂದು ಶಶಾಂಕ್ ಹೇಳಿದ್ದಾರೆ. ಇದು ನನ್ನ ಮೊದಲ ಹಾಡು, ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋ ಕುತೂಹಲ ಇದೆ. ಮೊದಲ ಹಾಡನ್ನೇ ಸಿದ್ ಶ್ರೀರಾಮ್ ಸರ್ ಜೊತೆ ಹಾಡಿದ ಶಾಕ್‌ನಲ್ಲೇ ನಾನಿದ್ದೇನೆ ಎಂದು ಲಹರಿ ಸಂತಸ ಹಂಚಿಕೊಂಡಿದ್ದಾರೆ.












Click it and Unblock the Notifications