Kichcha Sudeep: ಗೌರವ ಡಾಕ್ಟರೇಟ್ ನಿರಾಕರಿಸಿದ ಕಿಚ್ಚ ಸುದೀಪ್: ಕಾರಣವೇನು?
ಕನ್ನಡ ಅಭಿಮಾನಿಗಳ ನೆಚ್ಚಿನ ನಟ ಕಿಚ್ಚ ಸುದೀಪ್. ಹಲವಾರು ಕನ್ನಡ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಸುದೀಪ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಸ್ಯಾಂಡಲ್‌ವುಡ್‌ನ ಹಲವಾರು ನಟರು ಸಾಕಷ್ಟು ಅದ್ಬುತ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆ ಪೈಕಿ ಕಿಚ್ಚ ಸುದೀಪ್ ಕೂಡ ಒಬ್ಬರು. ಅವರ ಕಾರ್ಯಕ್ಕೆ ಮೆಚ್ಚಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ಸುದೀಪ್ ಅವರು ಇದನ್ನು ನಿರಾಕರಿಸಿದ್ದಾರೆ.
ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಗುರುತಿಸಿ ಸಂದ ಪ್ರಶಸ್ತಿಯನ್ನು ಸುದೀಪ್ ನಿರಾಕರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತುಮಕೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿರುವುದಾಗಿ ಗಮನಕ್ಕೆ ತಂದಿದೆ.

ಆಗ ಸುದೀಪ್ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಹೃದಯಪೂರ್ವಕವಾಗಿ ಧನ್ಯವಾದ ತಿಳಿಸಿ ವಿನಮ್ರವಾಗಿ ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಅನೇಕ ಹಿರಿಯರಿದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿ ಎಂದು ತಿಳಿಸಿದ್ದಾರೆ.
'ಕಿಚ್ಚ, ಅಭಿನಯ ಚಕ್ರವರ್ತಿ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಬಾಷಾ ನಟರಾಗಿದ್ದಾರೆ. ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕ್ರಿಕೆಟ್‌ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ ಸುದೀಪ್ ಅವರಿಗೆ ನಟನೆ ಅಂದ್ರೆ ಅಚ್ಚುಮೆಚ್ಚಾಗಿತ್ತು. ಹೀಗಾಗಿ ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಸೇರಿಕೊಂಡು ತರಬೇತಿ ಪಡೆದರು. ನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು.

'ಯಾಯವ್ವ' ಸಿನಿಮಾದ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟ ಸುದೀಪ್ ಈವರೆಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶಕರೂ ಆಗಿರುವ ಸುದೀಪ್ ಬಹುಭಾಷೆಗಳಲ್ಲಿ ನಟನೆ ಮಾಡಿದ್ದಾರೆ. ಬಾಹುಬಲಿ, ಪುಲಿ, ಈಗ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸುದೀಪ್ 2001ರಲ್ಲಿ ಕೇರಳ ಮೂಲದ ಪ್ರಿಯಾ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾ ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ್ದು, ಆರಂಭದಲ್ಲಿ ಏರ್‌ಲೈನ್ ಹಾಗೂ ಬ್ಯಾಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು 2000ರಲ್ಲಿ ಭೇಟಿಯಾಗಿದ್ದರು. ಭೇಟಿಯಾದ ಒಂದು ವರ್ಷದೊಳಗೆ ಈ ಜೋಡಿಯ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ 2001ರಲ್ಲಿ ಮದುವೆಯಾದರು. ಕ್ಲಾಸಿಕಲ್ ಡ್ಯಾನ್ಸ್, ಸಂಗೀತ ಕಲಿತಿರುವ ಪ್ರಿಯಾ ಅದ್ಭುತವಾಗಿ ಹಾಡುತ್ತಾರೆ.
ಜೊತೆಗೆ 2012ರಲ್ಲಿ ಬೆಂಗಳೂರಿನಲ್ಲಿ 360 ಸ್ಟೇಜ್ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದ್ದಾರೆ. ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಅಳಿಯ ಸಂಚಿತ್ ಸಂಜೀವ್ ಅವರ ಜಿಮ್ಮಿ ಚಿತ್ರ ನಿರ್ಮಿಸಿದ್ದಾರೆ. ಈ ಜೋಡಿಗೆ ಸಾನ್ವಿ ಎಂಬ ಓರ್ವ ಪುತ್ರಿಯಿದ್ದಾರೆ. ಸುದೀಪ್ ಸಿನಿ ಸಾಧನೆಯೊಂದಿಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.












Click it and Unblock the Notifications