Sanvi Sudeep: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸಿನಿಮಾಗೆ ಭರ್ಜರಿ ಎಂಟ್ರಿ .... ಮುಂದಿನ ವಾರವೇ ಸಿನಿಮಾ ತೆರೆಗೆ!
Sanvi Sudeep: ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಅವರು ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಹಾಡು ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಕನ್ನಡಿಗರಿಂದ ತುಸು ವಿಮರ್ಶೆಗೂ ಒಳಪಟ್ಟಿದ್ದ ಸಾನ್ವಿ ಅವರು ಇದೀಗ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ರಂಗಕ್ಕೆ ಪ್ರವೇಶ ಮಾಡುವುದಕ್ಕೆ ಫೂಲ್ ಎಂಟ್ರಿ ಕೊಟ್ಟಿದ್ದು. ಸಿನಿಮಾಗಾಗಿ ಹೈದರಾಬಾದ್ ಅನ್ನಪೂರ್ಣ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯನ್ನು ಸಹ ಕಲಿತುಕೊಂಡಿದ್ದಾರೆ. ಅವರು ನಟನೆಯ ಜೊತೆ ಜೊತೆ ಹಾಡುವುದನ್ನೂ ಕಲಿತುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದ ಹಿರಿಯ ನಟ - ನಟಿಯ ಮಕ್ಕಳು ಸಿನಿಮಾಗಳಲ್ಲಿ ನಟಿಸುವುದು ಹಾಗೂ ಹಾಡುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಭಾಗವಹಿಸಿ, ಹಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದ ಸಾನ್ವಿ ಅವರು ಇದೀಗ ಚಿತ್ರವೊಂದರ ಮೂಲಕ ಸಿನಿಮಾ ರಂಗಕ್ಕೂ ಪೂರ್ಣ ಪ್ರಮಾಣದಲ್ಲಿ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ವಿಷಯವು ಭಾರೀ ಚರ್ಚೆಯಾಗುತ್ತಿದೆ. ನಟ ಕಿಚ್ಚ ಸುದೀಪ್ ಅವರು ಸಿನಿಮಾರಂಗದಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಸುದೀಪ್ ಅವರು ಮಿಂಚಿದ್ದಾರೆ. ತೆಲುಗು ಸಿನಿಮಾ ಈಗಾದಲ್ಲಿನ ಅವರ ವಿಲನ್ ನಟನೆಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.

ಸಾನ್ವಿ ಅವರು ಸಿನಿಮಾಗೆ ಬರಬೇಕು ಅಂತ ಆಸೆಪಟ್ಟಿದ್ದರು. ಸಿಂಗಿಂಗ್‌ನಲ್ಲಿ ಫೇಮಸ್ ಆಗಿರುವ ಅವರು ಇದೀಗ ನಿಧಾನವಾಗಿ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಆದರೆ, ಸಿನಿಮಾ ಮಾಡುವ ಮುಂಚೆ ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡೇ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ನಟನೆ ಜೊತೆಗೆ ಗಾಯನದಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಆಕೆಯ ಗಾಯನಕ್ಕೆ ಅವರ ತಂದೆಯೇ ದೊಡ್ಡ ಅಭಿಮಾನಿ. ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಚಿತ್ರರಂಗಕ್ಕೆ ಬರಬೇಕು ಅಂತ ಅವರ ಅಭಿಮಾನಿಗಳು ಸಹ ಆಸೆಪಟ್ಟಿದ್ದರು.
ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ಸಾನ್ವಿ: ಇನ್ನು ಸಾನ್ವಿ ಅವರು ತೆಲುಗು ಚಿತ್ರರಂಗದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸಾನ್ವಿ ತೆಲುಗು ಚಿತ್ರವೊಂದರಲ್ಲಿ ಕೆಲಸ ಮಾಡಿದ್ದು, ಈ ಬಗ್ಗೆ ಟಾಲಿವುಡ್ ನಟ ನಾನಿ ಅವರೇ ಹೇಳಿಕೊಂಡಿದ್ದಾರೆ. ಸಾನ್ವಿಗೆ ಹೀರೊಯಿನ್ ಆಗಿ ನಟಿಸುವ ಆಸೆ ಇಲ್ಲ ಅಂತ ಹೇಳಿದ್ದಾರೆ. ಗಾಯನದ ವಿಚಾರಕ್ಕೆ ಬಂದರೆ, ಸಾನ್ವಿ ಅವರು ಕೆಲವು ಚಿತ್ರಗಳಿಗೆ ಹಾಡಲು ಆರಂಭಿಸಿದ್ದಾರೆ.

ನಾನಿ ಅವರು ನಟಿಸಿರುವ ಹಾಗೂ ಬಹು ನಿರೀಕ್ಷಿತ ಸಿನಿಮಾ ತೆಲುಗಿನ ಆಕ್ಷನ್ ಥ್ರಿಲ್ಲರ್ ಹಿಟ್- 3 ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಈಗಾಗಲೇ ಹಿಟ್ ಹಾಗೂ ಹಿಟ್ - 2 ವರ್ಶನ್‌ಗಳು ತೆಲುಗಿನಲ್ಲಿ ಬ್ಲಾಕ್ ಬಾಸ್ಟರ್ ಆಗಿ ಹೊರ ಹೊಮ್ಮಿವೆ. ಹಿಟ್ 2 ನಲ್ಲಿ ನಾನಿ ಅವರು ಗೆಸ್ಟ್ ರೋಲ್ ಮಾಡಿದ್ದರು. ಇದೀಗ ಸಾನ್ವಿ ಅವರು ಇದರಲ್ಲಿ ಕೆಲಸ ಮಾಡಿದ್ದಾರೆ. ಆದರೆ, ನಟಿಯಾಗಿ ಅಲ್ಲ. ಬದಲಿಗೆ ಹಿನ್ನೆಲೆ ಗಾಯಕಿಯಾಗಿ ಮಿಂಚಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯವನ್ನು ಸ್ವತಃ ನಟ ನಾನಿ ಅವರೇ ರಿವೀಲ್ ಮಾಡಿದ್ದಾರೆ. ಜೊತೆಗೆ ಸುದೀಪ್ ಫ್ಯಾಮಿಲಿ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
Actor Nani about his bonding with #KichhaSudeep Family.#BRBFirstBlood shoot going on in Hyderabad ▶️#HIT3 pic.twitter.com/3KPYzTOADV
— ಸಿನಿ_ಚಿಂತಕ (@CineChintaka) April 24, 2025
ರಾಜಮೌಳಿ ಚಿತ್ರದ "ಈಗಾ" ಚಿತ್ರದಲ್ಲಿ ಸುದೀಪ್ ಹಾಗೂ ನಾನಿ ಒಟ್ಟಿಗೆ ಅಭಿನಯಿಸಿದ್ದರು. ಅಂದಿನಿಂದಲೂ ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಸದ್ಯ "ಹಿಟ್- 3" ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ.
ಕನ್ನಡ ವಿಚಾರಕ್ಕೆ ಟ್ರೋಲ್!
ಇನ್ನು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಅವರು ಸರಿಯಾಗಿ ಕನ್ನಡ ಮಾತನಾಡಿರಲಿಲ್ಲ ಎನ್ನುವ ವಿಚಾರಕ್ಕೆ ಭಾರೀ ಟ್ರೋಲ್ ಆಗಿತ್ತು. ಕಿಚ್ಚ ಸುದೀಪ್ ಅವರು ಬೇರೆಯವರಿಗೆ ಕನ್ನಡದ ಪಾಠ ಕಲಿಸುತ್ತಾರೆ. ಕನ್ನಡದ ಬಗ್ಗೆ ಹೇಳುತ್ತಾರೆ, ಆದರೆ ಸಾನ್ವಿ ಅವರೇ ಕನ್ನಡ ಮಾತನಾಡುತ್ತಿಲ್ಲ ಎನ್ನುವ ವಿಚಾರವು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications