BBK-12: ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ: ಕಿಚ್ಚ ಸುದೀಪ್‌ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

ಬಿಗ್‌ಬಾಸ್‌ ಕನ್ನಡ ಸೀಸನ್‌-12 ಮನೆಯಲ್ಲಿ ಕಿರಿಕ್‌ ಜೋರಾಗಿದೆ. ಇಂದು ಬಿಗ್‌ಬಾಸ್‌ ಮೊದಲ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಇಂದೇ ಕೆಲ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಲಿದ್ದು, ವೈಲ್ಡ್‌ಕಾರ್ಡ್‌ ಮೂಲಕ ಕೆಲವರು ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸ್ಪರ್ಧಿಗಳ ನಡುವೆ ಗಲಾಟೆ, ಜಗಳಗಳು ಅತಿರೇಕಕ್ಕೆ ಹೋಗಿರುವ ಹಿನ್ನೆಲೆ ಕಿಚ್ಚ ಸುದೀಪ್‌ ಗರಂ ಆಗಿ ವಾರ್ನಿಂಗ್‌ ಕೊಟ್ಟಿದ್ದಾರೆ. ಕಲರ್ಸ್‌ ಹಂಚಿಕೊಂಡಿರುವ ಪ್ರೋಮೋದಲ್ಲಿ ಕಿಚ್ಚ ಕೋಪದಿಂದ ಮಾತನಾಡಿದ್ದಾರೆ.

ಹೌದು, ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ದೊಡ್ಡ ಯುದ್ಧವೇ ನಡೆದಿದೆ. ಸಹಸ್ಪರ್ಧಿಗಳಾದ ಅಶ್ವಿನಿ ಗೌಡ, ಜಾನ್ವಿ ಇಬ್ಬರೂ ರಕ್ಷಿತಾ ಮೇಲಕೆ ಮುಗಿಬಿದ್ದಿದ್ದಾರೆ. ಇದೆಲ್ಲವೂ ಪ್ರತಿ ಸೀಸನ್‌ನಲ್ಲಿಯೂ ಸ್ಪರ್ಧಿಗಳ ನಡುವೆ ಕಾಮನ್‌ ಆಗಿ ನಡೆಯುವ ವಿಚಾರ. ಆದರೆ, ಈ ಬಾರಿ ಸ್ಪರ್ಧಿಗಳ ಬಾಯಲ್ಲಿ ಬಂದಿರುವ ಮಾತುಗಳಿಂದ ಸುದೀಪ್‌ ಸಿಟ್ಟಾಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಸುದೀಪ್‌ ನಾಲಿಗೆ ಹರಿಬಿಟ್ಟ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಳ್ಳುವುದಂತೂ ಪಕ್ಕಾ ಎನ್ನಲಾಗಿದೆ.

Kiccha Sudeep Warns Contestants In Bigg Boss Kannada 12 Ashwini Jhanvi Rakshitha

ಅಶ್ವಿನಿ ಗೌಡ ಹಾಗೂ ಜಾನ್ವಿ ಸೇರಿ ರಕ್ಷಿತಾ ಶೆಟ್ಟಿ ಮೇಲೆ ಗಲಾಟೆ ಮಾಡಿಕೊಂಡಿದ್ದಾರೆ. ನೀನು ಎಲ್ಲಿಂದ ಬಂದಿದ್ದೀಯ ಗೊತ್ತು ಎಂದು ಅಶ್ವಿನಿ ಗೌಡ ರಕ್ಷಿತಾಗೆ ಹೀಯಾಳಿಸಿದಂತೆ ಮಾತನಾಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಪ್ರೆಸ್‌ಮೀಟ್‌ ವೇಳೆ ನೀನು ಈ ಮನೆಯಲ್ಲಿ ಉಳಿಯಲು ಏನೆಲ್ಲ ಅರ್ಹತೆ ಇದೆ ಎಂದು ಅಶ್ವಿನಿ ರಕ್ಷಿತಾಗೆ ಕೇಳಿದ್ದಾರೆ. ಈ ವಿಚಾರವಾಗಿ ಕಿಚ್ಚ ಸುದೀಪ್‌ ಕೆಂಡವಾಗಿದ್ದಾರೆ. ಅಶ್ವಿನಿ ಹಾಗೂ ಜಾನ್ವಿಗೆ ಈ ವೀಕೆಂಡ್‌ನಲ್ಲಿ ಕಿಚ್ಚ ಕ್ಲಾಸ್‌ ಪಕ್ಕಾ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಕೂಡ ಚರ್ಚೆಯಾಗಿತ್ತು. ಅದರಂತೆ ಪ್ರೋಮೋದಲ್ಲಿ ಸುದೀಪ್‌ ಇದರ ಝಲಕ್‌ ಕೊಟ್ಟಿದ್ದಾರೆ.

ತಲೆ ಮೇಲೆ ತಟ್ಟಿ ಬುದ್ಧಿನೂ ಹೇಳ್ತೀವಿ

ಪ್ರೋಮೋದಲ್ಲಿ ಸುದೀಪ್‌, "ನಾವು ಕೊಟ್ಟಿರೋ ಮಾತನ್ನ ತಪ್ಪಲ್ಲ. ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ" ಎಂದು ಕಿಚ್ಚ ಖಾರವಾಗಿ ವಾರ್ನಿಂಗ್‌ ಕೊಟ್ಟಿದ್ದಾರೆ. "ಒಳ್ಳೆಯ ಕೆಲಸಗಳನ್ನ ಮಾಡಿದಾಗ ನಾವು ಕೈತಟ್ಟಿ ಚಪ್ಪಾಳೆನೂ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನ ಮರೆತು ಬಾಯಿಗೆ ಬಂದಂಗೆ ಮಾತನಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ, ಬುದ್ಧಿನೂ ಹೇಳಬೇಕಾಗುತ್ತೆ" ಎಂದಿದ್ದಾರೆ. ಹೀಗಾಗಿ ಸುದೀಪ್‌ ಗರಂ ಆಗಿದ್ದು ಯಾಕೆ? ಯಾರಿಗೆಲ್ಲ ಫುಲ್‌ ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ರಕ್ಷಿತಾ ಬಗ್ಗೆ ಜಾನ್ವಿ ಹಾಗೂ ಅಶ್ವಿನಿಗೌಡ ಆಡಿದ್ದ ಮಾತುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಖಂಡಿಸಲಾಗುತ್ತಿದೆ. ರಕ್ಷಿತಾರನ್ನ ಅಶ್ವಿನಿ ಕಾರ್ಟೂನ್‌ ಎಂದು ಕರೆದಿದ್ದರು. ಆರಂಭದಿಂದಲೂ ಜಾನ್ವಿ ಕೂಡ ರಕ್ಷಿತಾ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಇಬ್ಬರೂ ರಕ್ಷಿತಾ ಬಗ್ಗೆ ಕೇವಲವಾಗಿ ಮಾತನಾಡಿರುವ ವಿಚಾರವಾಗಿಯೇ ಸುದೀಪ್‌ ಗರಂ ಆಗಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಅಸಲಿ ವಿಚಾರ ಇಂದಿನ ಸಂಚಿಕೆಯಲ್ಲಿ ರಿವೀಲ್‌ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+