Sudeep vs Darshan Fans War: ಮ್ಯಾಕ್ಸ್ ಅಬ್ಬರದ ನಡುವೆ ಸುದೀಪ್ vs ದರ್ಶನ್ ಫ್ಯಾನ್ಸ್ ಕಿರಿಕ್
ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ಫ್ಯಾನ್ಸ್ ವಾರ ಕರ್ನಾಟಕದಲ್ಲಿ ಮತ್ತೆ ಶುರುವಾಗಿದೆ. ಕರ್ನಾಟಕದಲ್ಲಿ ಇದೀಗ ಕಿಚ್ಚ, ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ಫ್ಯಾನ್ಸ್ ನಡುವೆ ವಿನಾಕಾರಣ ಫ್ಯಾನ್ಸ್ ವಾರ್ ಶುರುವಾಗಿದೆ. ಸುದೀಪ್ ಹಾಗೂ ದರ್ಶನ್‌ನ ಇಬ್ಬರೂ ಫ್ಯಾನ್ಸ್ ಒಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲಿಗೆ ಹೋದಾಗ ಸುದೀಪ್ ಅವರು ಸಂದರ್ಶನವೊಂದರಲ್ಲಿ ಈ ಘಟನೆಯ ಬಗ್ಗೆ ನೋವಾಗುತ್ತೆ. ಎಷ್ಟೇ ಆದರೂ ಗೆಳಯರಾಗಿದ್ದವರು ಎಂದಿದ್ದರು. ಇದು ದರ್ಶನ್ ಫ್ಯಾನ್ಸ್‌ಗಳ ಸಂತೋಷಕ್ಕೆ ಕಾರಣವಾಗಿತ್ತು. ಬೇರೆ ಅವರ ರೀತಿ ಡಿ ಬಾಸ್ ಬಗ್ಗೆ ಸುದೀಪ್ ಹೇಳಿಲ್ಲ ಎಂದಿದ್ದರು.ಆದರೆ, ಸುದೀಪ್ ಅವರ ಬಹು ನಿರೀಕ್ಷೆಯ ಮ್ಯಾಕ್ಸ್ ಸಿನಿಮಾ ಬಿಡುಗಡೆ ಬೆನ್ನಲ್ಲೇ ಕೆಲವು ವಿವಾದಗಳು ಸೃಷ್ಟಿಯಾಗಿವೆ. ಮೊದಲನೆಯದಾಗಿ ಸುದೀಪ್ ಫ್ಯಾನ್ಸ್ ಎಂದು ಹೇಳಲಾಗಿರುವ ಕೆಲವರು ಮಾಡಿರುವ ಬ್ಯಾನರ್ ಹಾಗೂ ಮ್ಯಾಕ್ಸ್ ಸಂಭ್ರಮಾಚರಣೆಯಲ್ಲಿ ಕಟ್ ಮಾಡಲಾಗಿದ್ದ ಕೇಕ್.
ಸುದೀಪ್ ಅವರು ನಟಿಸಿರುವ ಹಾಗೂ ಬಹು ನಿರೀಕ್ಷೆಯ ಮ್ಯಾಕ್ಸ್ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಬ್ಯಾನರ್ ಹಾಗೂ ಕೇಕ್ ಭಾರೀ ವಿವಾದ ಸೃಷ್ಟಿಯಾಗಿದೆ. ಇದರಿಂದ ಮತ್ತೆ ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್‌ಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿದೆ. ಕಿಚ್ಚ ಸುದೀಪ್ ಅವರ ಮನೆಯಲ್ಲಿ ಈಚೆಗೆ ಮ್ಯಾಕ್ಸ್ ಚಿತ್ರತಂಡವು ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಿತ್ತು. ಆ ಸೆಲಬ್ರೇಷನ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಕ್ ಮೇಲೆ ಬಾಸಿಸಂ ಕಾಲ ಮುಗೀತು... ಮ್ಯಾಕ್ಸ್ ಮ್ಯಾಕ್ಸಿಸಂ ಎಂದು ಬರೆಯಲಾಗಿತ್ತು. ಕೇಕ್ ಕಟ್ ಮಾಡಿದ ಹಾಗೂ ಸಂಭ್ರಮಾಚರಣೆಯ ಫೋಟೋಗಳನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಬಾಸ್ ಎನ್ನುವ ಸಾಲುಗಳನ್ನು ದರ್ಶನ್ ಅವರನ್ನು ಗುರಿಯಾಗಿಸಿಕೊಂಡೇ ಮಾಡಲಾಗಿದೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಬಾಸ್ ಯಾವೊತ್ತಿದ್ದರೂ ಬಾಸ್, ಡಿ ಬಾಸ್ ಎಂದೆಂದಿಗೂ ಬಾಸ್ ಅಂತಿದ್ದಾರೆ.
ಬ್ಯಾನರ್ ತಂದ ಫಜೀತಿ
ಮ್ಯಾಕ್ಸ್ ಸಿನಿಮಾಗೆ ಶುಭಕೋರುವಾಗ ಸುದೀಪ್ ಅವರ ಸ್ಟೂಡೆಂಟ್ ಫ್ಯಾನ್ಸ್ ಎಂದು ಹೇಳಲಾಗಿರುವ ಫ್ಯಾನ್ಸ್ ತಂಡ ಹಾಕಿರುವ ಬ್ಯಾನರ್ ವಿವಾದವಾಗಿದೆ. ಮ್ಯಾಕ್ಸ್ ಸಿನಿಮಾಕ್ಕೆ ಶುಭಕೋರುವ ಬ್ಯಾನರ್‌ನಲ್ಲಿ ಜೈಲಿನಲ್ಲಿ ಮುದ್ದೆ ಮುರಿಯೋರು ಅಲ್ಲ, ಅಭಿಮಾನಿಗಳ ಎದೆ ಸಿಳೋರು ನಾವು ಅಂತ ಬರೆಸಲಾಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ನಟ ದರ್ಶನ್ ಫ್ಯಾನ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಿತ್ತು ಹಾಕುವುದಕ್ಕೆ ಮುಂದಾದಾಗ ಈ ಸಾಲುಗಳನ್ನು ಮುಚ್ಚಲಾಗಿದೆ ಎನ್ನಲಾಗಿದೆ. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಎಲ್ಲಾ ನಿಂತು ಎಲ್ಲರೂ ಒಗ್ಗಟ್ಟಾಗಿ ಮುಂದಕ್ಕೆ ಹೋಗುತ್ತಿದ್ದಾರೆ ಎನ್ನುವಾಗಲೇ ಅನವಶ್ಯಕವಾದ ವಿವಾದಗಳು ಸೃಷ್ಟಿಯಾಗುತ್ತಿವೆ.

ಈ ನಡುವೆ ರಾಕಿಂಗ್ ಸ್ಟಾರ್ ಅವರು ಹಾಗೂ ಸುದೀಪ್ ಅವರ ಜೊತೆಗಿನ ಫೋಟೋಗಳು ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದ ಎಲ್ಲಾ ನಟರು ಈ ರೀತಿ ಒಂದಾಗಬೇಕು. ಕನ್ನಡದಲ್ಲಿ ಫ್ಯಾನ್ಸ ವಾರ್ ನಿಲ್ಲಬೇಕು ಅಂತ ಕನ್ನಡ ಸಿನಿ ಪ್ರೇಕ್ಷಕರು ಆಸೆಪಡುತ್ತಿದ್ದಾರೆ.












Click it and Unblock the Notifications