Kiccha Sudeep: ಕಿಚ್ಚ ಸುದೀಪ್ ಅಬ್ಬರಕ್ಕೆ ಕಳೆದು ಹೋದ ಕನ್ನಡಿಗರು!
ಕಿಚ್ಚ ಸುದೀಪ ಅವರ ಅಭಿಮಾನಿಗಳು ನಿನ್ನೆ ರಾತ್ರಿ ಪೂರ್ತಿ ನಿದ್ದೆ ಮಾಡಿರಲಿಲ್ಲ... ಒಂದು ಕಡೆ ಥಿಯೇಟರ್ ಎದುರಿಗೆ ಹೋಗಿ ಹಾರ ಹಾಕಬೇಕು, ಕಟೌಟ್ ನಿಲ್ಲಿಸಿ ಹಾಲಿನ ಅಭಿಷೇಕ ಮಾಡಬೇಕು ಅನ್ನೋ ಕಾತುರ... ಇನ್ನೊಂದು ಕಡೆ ಬರೋಬ್ಬರಿ 2 ವರ್ಷಗಳ ನಂತರ ಬೆಳ್ಳಿ ತೆರೆ ಮೇಲೆ ಅಬ್ಬರಿಸುತ್ತಿರುವ ಕಿಚ್ಚ ಸುದೀಪ್ ಅವರನ್ನ ಥಿಯೇಟರ್ ಸ್ಕ್ರೀನ್ ಮೇಲೆ ನೋಡುವ ಆತುರ... ಈ ಎಲ್ಲಾ ಕಾತುರ & ಆತುರಕ್ಕೆ ಖಡಕ್ ಉತ್ತರ ಸಿಕ್ಕಿದ್ದು, ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ....
ಕಿಚ್ಚ ಸುದೀಪ್ ಮತ್ತೆ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ, 'ಮ್ಯಾಕ್ಸ್' ಸಿನಿಮಾ ಮೂಲಕ ಸುದೀಪ್ ಅವರ ಅಬ್ಬರ ಕಂಡು ಕೋಟಿ ಕೋಟಿ ಕನ್ನಡಿಗರು ಇದೀಗ ಚಪ್ಪಾಳೆ ತಟ್ಟಿದ್ದಾರೆ. ಕನ್ನಡ ಸಿನಿಮಾಗಳ ತಾಕತ್ ಏನು ಅನ್ನೋದು ಬಾಲಿವುಡ್ ಟು ಹಾಲಿವುಡ್ ಎಲ್ಲರಿಗೂ ಈ ಸಮಯದಲ್ಲಿ ಚನ್ನಾಗಿ ಗೊತ್ತಾಗಿದೆ. ಇದೀಗ ಮತ್ತೊಮ್ಮೆ ಕಿಚ್ಚ ಸುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಏನು ಅನ್ನೋದನ್ನ ಜಗತ್ತಿಗೇ ಮನವರಿಕೆ ಮಾಡಿಸಿದ್ದಾರೆ. ಕನ್ನಡಿಗರ ಮತ್ತೊಂದು ಸಿನಿಮಾ ಭರ್ಜರಿ ಓಪನಿಂಗ್ ಪಡೆದು ಗೆದ್ದು ಬೀಗುವ ಮುನ್ಸೂಚನೆ ನೀಡಿದೆ!

'ಸುದೀಪ್' ಸುನಾಮಿಗೆ ದಾಖಲೆಗಳು ಉಡೀಸ್!
ಅಂದಹಾಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು 'ಮ್ಯಾಕ್ಸ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೆಗೆ ರಾಜ್ಯದ ಹಲವೆಡೆ ಸಿನಿಮಾ ಪ್ರದರ್ಶನ ಶುರುವಾಗಿದ್ದು, ಈ ಸಿನಿಮಾ ಅಬ್ಬರ ಕಣ್ತುಂಬಿಕೊಂಡು ಸಂಭ್ರಮಿಸಲು ಕೋಟಿ ಕೋಟಿ ಅಭಿಮಾನಿಗಳು ತಮ್ಮ ತಮ್ಮ ಟಿಕೆಟ್ ಮುಂಚೆಯೇ ಬುಕ್ ಮಾಡಿದ್ದರು. ಹೀಗೆ ಕೋಟ್ಯಂತರ ಕನ್ನಡಿಗರು ಇಂದು ಸಾಗರದಂತೆ ಹರಿದು ಬಂದು 'ಮ್ಯಾಕ್ಸ್' ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.
🥹🥹🥹❤️❤️❤️❤️
— ಶ್ರೀಕಂಠ ಆರಾಧ್ಯ | Srikanta Aradhya (@SrikantaAradhya) December 25, 2024
My new favorite @KicchaSudeep movie 🔥🔥
My next show starts at 10:30am in Narthaki. That is my review 🥂#MaxTheMovie #MaxFDFS pic.twitter.com/i2gEdt7dmo
ಒಂದೇ ರಾತ್ರಿಯಲ್ಲಿ ನಡೆಯುವ ಸಿನಿಮಾ 'ಮ್ಯಾಕ್ಸ್' ಆಗಿದ್ದು, ತನ್ನ ಶೂಟಿಂಗ್ ವೇಳೆಯೇ ಈ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹೀಗಾಗಿ ಕನ್ನಡಿಗರು ಕಾಯುತ್ತಿದ್ದು, ಜನರು ರಾತ್ರಿ ಪೂರ್ತಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವೆಯ್ಟಿಂಗ್ ಮಾಡುತ್ತಿದ್ದರು. ಹೀಗಿದ್ದಾಗಲೇ, ಇಂದು ಬೆಳಗ್ಗೆ 'ಮ್ಯಾಕ್ಸ್' ಅಬ್ಬರ ಶುರುವಾಗಿದೆ. ಹೀಗಾಗಿ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಇದೀಗ ಟ್ವಿಟ್ಟರ್ ಅಖಾಡದಲ್ಲಿ ಹವಾ ಎಬ್ಬಿಸಿ ಸುನಾಮಿ ಸೃಷ್ಟಿ ಮಾಡಿದ್ದಾರೆ!
Words are not enough to describe what this Success means to Us ❤️ As a Fan We waited for this performance from long time and finally the day came 💥
— Kiccha Sudeep Trends™ (@TheSudeepTrends) December 25, 2024
Let's Celebrate the Success of @Max_themovie by using Below Tag 🔥🔥
Tag - #MAXimumBlockbuster@KicchaSudeep #MaxTheMovie pic.twitter.com/m2lKw4bGBB
'ವಿಕ್ರಾಂತ್ ರೋಣ' ಬಳಿಕ 2 ವರ್ಷ....
ಥಿಯೇಟರ್‌ಗಳ ಎದುರು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ಮಾಡಿದ ಅಭಿಮಾನಿಗಳು, ಈ ಮೂಲಕ ತಮ್ಮ ಅಭಿಮಾನ ಏನೆಂದು ಜಗತ್ತಿಗೇ ಮನವರಿಕೆ ಮಾಡಿದರು. ಮತ್ತೊಂದು ಕಡೆ 'ಮ್ಯಾಕ್ಸ್' ಸಿನಿಮಾ ಸೂಪರ್ ಆಗಿದೆ ಅನ್ನೋ ಮಾತು ಕೇಳಿ ಬಂದಿದ್ದು, ಸಿಕ್ಕಾಪಟ್ಟೆ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ಹಾಗೇ ಸುದೀಪ್ ಅವರು 'ವಿಕ್ರಾಂತ್ ರೋಣ' ಬಳಿಕ 2 ವರ್ಷದ ಗ್ಯಾಪ್ ತೆಗೆದುಕೊಂಡು ಭರ್ಜರಿಯಾಗಿ ಸ್ಕ್ರೀನ್ ಮೇಲೆ ಎಂಟ್ರಿ ಕೊಟ್ಟಿದ್ದಾರೆ.












Click it and Unblock the Notifications