"ಸುದೀಪ್ ನನ್ನ ಆಫೀಸ್ ಕೆಳಗೆ ಚಾಪೆ ಹಾಸ್ಕೊಂಡು ಮಲಗಿದ್ದ, ಎರಡು ಕೊಂಬು ಏನಿಲ್ಲ"
ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಗ್ಗೆ ಸ್ಯಾಂಡಲ್‌ವುಡ್ ಹಿರಿಯ ನಿರ್ಮಾಪಕ ಪದೇ ಪದೇ ಆಕ್ರೋಶ ಹೊರಹಾಕುತ್ತಿದ್ದಾರೆ. 'ಈಗಿರೋ ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಅವರಿಗೆಲ್ಲ ಕಷ್ಟಪಟ್ಟು ಸಿನಿಮಾ ಮಾಡಿ ಗೆಲ್ಲಿಸಿದ್ವಿ. ಆಗೆಲ್ಲ ಎಷ್ಟು ಕಷ್ಟ ಇತ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ನಟರು ಅದನ್ನ ಮರೆತರೆ ಹೇಗೆ? ಆಗಿನ ಪ್ರತಿಭಾವಂತರಿಗೆ ಈಗ ಕೆಲಸ ಇಲ್ಲ. ಶಿವಣ್ಣನಿಗೆ ಶ್ರೀರಾಮ್ ಮಾಡಿದ ನಿರ್ದೇಶಕನಿಗೆ ಇವತ್ತು ಕೆಲಸ ಇಲ್ಲ. ಅವರಿಗೆ ನಟರು ಡೇಟ್ ಕೊಡ್ತಿಲ್ಲ. ಅವರ ಕಷ್ಟಗಳನ್ನು ಸಹ ಯಾರೂ ಯಾಕೆ ವಿಚಾರಿಸುತ್ತಿಲ್ಲ?' ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಖಾರವಾಗಿ ಪ್ರಶ್ನಿಸಿದ್ದಾರೆ.
'ನಾನು ಸಿನಿಮಾ ಇಂಡಸ್ಟ್ರಿಗೆ ಬಂದು 30 ವರ್ಷ ಆಯ್ತು, ಕೊರೋನಾ ಬಂದ ಮೇಲೆ ಇಂಡಸ್ಟ್ರಿಗೆ ಸಮಸ್ಯೆಯಾಗಿದೆ. ಓಟಿಟಿಯಲ್ಲಿ ಒಂದೆರಡು ಸಿನಿಮಾ ಚೆನ್ನಾಗಿ ಓಡಿತು. ಕನ್ನಡ ಸಿನಿಮಾಗಳನ್ನು ಓಟಿಟಿಯವರು ತೆಗೆದುಕೊಳ್ಳುವುದು ಶುರುವಾಯ್ತು. ಅದನ್ನೇ ನಂಬಿ ನಿರ್ಮಾಪಕರು ಹೆಚ್ಚು ಸಿನಿಮಾ ಮಾಡಿದ್ರು. ಆಗ ಎಲ್ಲವನ್ನೂ ಅವರು ತೆಗೆದುಕೊಳ್ಳಲಿಲ್ಲ. ಈಗ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ' ಎಂದು ಸಂದರ್ಶನವೊಂದರಲ್ಲಿ ಬೇಸರ ಹಂಚಿಕೊಂಡಿದ್ದಾರೆ ಎಂದಿದ್ದಾರೆ.

'ಸಿನಿಮಾ ಮಾಡಬೇಕಾದ್ರೆ ಇದೇ ಹೀರೋಗಳು ನಮ್ಮ ಮನೆ ಹತ್ರ ಮಲಗುತ್ತಿದ್ರು. ಇದೇ ಸುದೀಪ್ ನಮ್ಮ ಆಫೀಸ್ ಕೆಳಗೆ ಚಾಪೆ ಹಾಸಿಕೊಂಡು ಮಲಗಿದ್ರು. ನಾಳೆ ಬೇಕು ಅಂದ್ರೆ ಕೇಳಿ, ನನ್ನ ಹತ್ರ ಅದರ ಫೋಟೋಗಳೂ ಇವೆ. ನಮ್ಮ ಕನಕಪುರದಲ್ಲೇ ಧಮ್ ಅನ್ನೋ ಸಿನಿಮಾ ಮಾಡಿದ್ದು. ಆಗೆಲ್ಲ ಚಾಪೆ ಹಾಕ್ಕೊಂಡು ಮಲಗಿದ್ದ. ಚಕ್ರವರ್ತಿ ಸುದೀಪ್ ಅದನ್ನೆಲ್ಲ ಮರೆತರೆ ಹೇಗೆ? ಇವಾಗ ಸುದೀಪ್ ಬೆಳೆದಿರಬಹುದು, ನಾವು ಸೋತಿರಬಹುದು ಎಂದಿದ್ದಾರೆ. ಮನುಷ್ಯ ಹಿಂದೆ ಹೇಗಿದ್ದ ಅನ್ನೋದನ್ನ ಯೋಚನೆ ಮಾಡಬೇಕು. ಆಗ ಚಾಪೆ ಹಾಕಿ ಮಲಗಿದ್ದನ್ನ ಮರೆಯಬಾರದು' ಎಂದು ಕಿವಿಮಾತು ಹೇಳಿದ್ದಾರೆ.
ಅವರಿಗೆಲ್ಲ ಎರಡು ಕೊಂಬಿಲ್ಲ!
'ನಿಮಗೆಲ್ಲ ನಿಜವಾಗಿಯೂ ಧಮ್ ಅನ್ನೋದು ಇದ್ರೆ, ಇದಕ್ಕೆ ಉತ್ತರ ಕೊಡಿ, ಫಿಲ್ಮ್ ಚೇಂಬರ್‌ಗೆ ಬನ್ನಿ ಎಂದು ನಟರಿಗೆ ಸವಾಲ್ ಕೂಡ ಹಾಕಿದ್ದಾರೆ. ನಿಮಗೆ ಆ ಹೃದಯ, ಕಿಚ್ಚು ಅನ್ನೋದಿದ್ರೆ ಬನ್ನಿ ಚೇಂಬರ್‌ಗೆ ನಾನು ಉತ್ತರ ಕೊಡ್ತೀನಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನೋದು ಇದೆಯಲ್ಲ? ಬಂದು ಬೇಕಾದ್ರೆ ನನ್ನ ಮೇಲೆ ದೂರು ಕೊಡಿ. ಅವರಿಗೆಲ್ಲ ತಲೆ ಮೇಲೆ ಎರಡು ಕೊಂಬಿಲ್ಲ. ಆಗೆಲ್ಲ ಅವರಿಗೆ ಲಕ್ಷ ಲಕ್ಷ ಕೊಟ್ಟಿದ್ದವರು ನಾವು. ಅದಕ್ಕೇ ನಾನು ಹೀಗೆ ಮಾತನಾಡುತ್ತಿದ್ದೀನಿ' ಎಂದು ಕನಕಪುರ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ.

'ಈಗಿನ ನಟರೆಲ್ಲ ದುಡ್ಡಿನ ಮಜಾ ನೋಡಿದ್ದಾರೆ. ಆಗಿನ ಕಾಲವೇ ಬೇರೆ ಇತ್ತು. ಈಗಿನ ಕಾಲವೇ ಬೇರೆ, ಈಗೆಲ್ಲ ಊ ಅಂದ್ರೂ, ಉಹೂ ಅಂದ್ರೂ ಕಾಸು ಕೊಡ್ತಾರೆ. ಈಗ ಚಿನ್ನ ಮಾರ್ತಾರೆ ಅಂದ್ರೂ ದುಡ್ಡು ಕೊಡ್ತಾರೆ, ಎಲ್ಲದಕ್ಕೂ ದುಡ್ಡು ಕೊಡ್ತಾರೆ. ಆವತ್ತು ನಾವು ಇವರನ್ನ ಬೆಳೆಸಿದ್ದಕ್ಕೇ ಹೀಗಿದ್ದಾರೆ. ಈಗ ಅವರಿಗೆ ಸಿನಿಮಾ ಇಲ್ಲದಿದ್ರೂ ಕಣಜ ತುಂಬಿ ಹೋಗಿದೆ. ಸುದೀಪ್ ಏನ್ ಲಂಡನ್‌ನಲ್ಲಿ ಹುಟ್ಟಿಲ್ಲ, ಇಲ್ಲೇ ಶಿವಮೊಗ್ಗದಲ್ಲಿ ಹುಟ್ಟಿರೋದು. ಈಗ ಫೋನ್ ಮಾಡಿದ್ರೆ ಫೋನ್ ತೆಗಿಯಲ್ಲ, ಸ್ವಿಚ್ ಆಫ್ ಮಾಡ್ತಾರೆ, ಮನೆ ಹತ್ರ ಹೋದ್ರೂ ಸಿಗಲ್ಲ. ಆವತ್ತು ನಮ್ಮ ಮನೆ ಹತ್ರ ಬಂದು ಇರ್ತಿದ್ರು ಅನ್ನೋದನ್ನ ಕಲಾವಿದ ಮರೆಯಬಾರದು' ಎಂದಿದ್ದಾರೆ.












Click it and Unblock the Notifications