Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗೆ ಕಿಚ್ಚ ಸುದೀಪ್ ಕ್ಲಾಸ್ ವಿಡಿಯೋ....
ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿ ವಿರುದ್ಧ ಕಿಚ್ಚ ಸುದೀಪ್ ಗುಡುಗಿದ್ದಾರೆ. ಕಿಚ್ಚ ಸುದೀಪ್ ಹೀಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಮೂಲಕ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ತಮ್ಮ ಗತ್ತು ತೋರಿಸಿದ್ದಾರೆ ಅಂತಾ ಕಿಚ್ಚ ಸುದೀಪ್ ಅಭಿಮಾನಿಗಳು ಈಗ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೂ ರಿಯಾಕ್ಷನ್ ಕೊಡುತ್ತಿದ್ದಾರೆ. ಹಾಗಾದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗೆ ಕಿಚ್ಚ ಸುದೀಪ್ ಕ್ಲಾಸ್ ವಿಡಿಯೋ....
ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತು ಕಿಚ್ಚ ಸುದೀಪ್ ಒಳ್ಳೆ ಅಣ್ಣ & ತಮ್ಮನ ರೀತಿಯೇ ಇದ್ದರು. ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತು ಕಿಚ್ಚ ಸುದೀಪ್ ಎಲ್ಲೇ ಹೋದರೂ ಒಟ್ಟಿಗೆ ಹೋಗಿ ಬರುತ್ತಿದ್ದರು. ಇಬ್ಬರೂ ಸೇರಿ ಹಿಂದಿಯ ಬ್ಲಾಕ್ ಬಸ್ಟರ್ 'ಶೋಲೆ' ಸಿನಿಮಾ ಕನ್ನಡಕ್ಕೆ ರೀಮೇಕ್ ಮಾಡ್ತಾರೆ ಅಂತಾ ದೊಡ್ಡ ಸುದ್ದಿ ಹಬ್ಬಿತ್ತು.

ಡಿ-ಬಾಸ್ ಅಭಿಮಾನಿಗೆ ಕಿಚ್ಚ ಸುದೀಪ್ ಕ್ಲಾಸ್....
ಆದರೆ ಹೀಗೆ ಖುಷಿ ಖುಷಿಯಾಗಿದ್ದ ಈ ಇಬ್ಬರ ನಡುವೆ ಯಾರೋ ಹುಳಿ ಹಿಂಡಿ ಸ್ನೇಹ & ಪ್ರೀತಿ ಹಾಳು ಮಾಡಿದರು. ಕಿಚ್ಚ & ದಚ್ಚು ನೋಡ ನೋಡುತ್ತಲೇ ದೂರವಾದರು. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ ಅಂತಾ ವಿಡಿಯೋ ಒಂದನ್ನ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಮಾಡುತ್ತಿದ್ದಾರೆ ಕೆಲವರು!
ಅಂದಹಾಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬುಜ್ಜಿ ಇದೀಗ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ಆದರೆ ಮನೆಯಲ್ಲಿ ಪದೇ ಪದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬುಜ್ಜಿ ನನ್ನಿಂದಲೇ ಟಿಆರ್‌ಪಿ.... ಟಿಆರ್‌ಪಿ... ಅಂತಾ ಪದೇ ಪದೇ ಹೇಳುತ್ತಿದ್ದರು. ಹೀಗಿದ್ದಾಗ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ವೇಳೆ ಮಾತನಾಡಿರುವ ಕಿಚ್ಚ ಸುದೀಪ್ ಅವರು...
ಟಿಆರ್‌ಪಿ ಬಂದಿರೋದಕ್ಕೆ ಏಕೈಕ ವ್ಯಕ್ತಿ....
ಹೌದು, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಪ್ರಮುಖ ಭಾಗ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ವೇಳೆ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಟಿಆರ್‌ಪಿ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿದರು ಕಿಚ್ಚ ಸುದೀಪ್ ಅವರು. '12.5 ಟಿಆರ್‌ಪಿ ಬಂದಿರೋದಕ್ಕೆ ಏಕೈಕ ವ್ಯಕ್ತಿ ಇಲ್ಲಿ ನಿಂತಿದ್ದೀನಿ ನಾನು...' ಅಂತಾ ಕಿಚ್ಚ ಸುದೀಪ್ ಅವರು ತಮ್ಮದೇ ಸ್ಟೈಲ್‌ನಲ್ಲಿ ಹೇಳಿದರು!
ಈಗ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಿಚ್ಚ ಸುದೀಪ್ ಅವರು ಈ ಮಾತನ್ನು ಹೇಳಿದ್ದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬುಜ್ಜಿಗೆ ಅಂತಾ ಸೋಷಿಯಲ್ ಮೀಡಿಯಾ ಮಂದಿ ಮಾತನಾಡುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಇದಕ್ಕೆ ತಲೆ & ಬುಡ ಏನೂ ಇಲ್ಲ, ಕಿಚ್ಚ ಸುದೀಪ್ ಅವರು ಆ ರೀತಿ ಏನೂ ಹೇಳಿಲ್ಲ ಹೀಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂತಾ ವೈರಲ್ ವಿಡಿಯೋ ಬಗ್ಗೆ ವಾದ ಮಾಡುತ್ತಿದ್ದಾರೆ.












Click it and Unblock the Notifications