Kichcha Sudeepa: ಮ್ಯಾಕ್ಸ್‌ ಟೈಟಲ್‌ ಕಾರ್ಡ್‌ನಲ್ಲಿ 'ಚತ್ರವರ್ತಿ' ಎಡವಟ್ಟಿನ ಬಗ್ಗೆ ಕಿಚ್ಚ ಸುದೀಪ್‌ ಕ್ಲಾರಿಟಿ

ನಟ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಸಿನಿಮಾ ಸಖತ್‌ ಸೌಂಡ್‌ ಮಾಡ್ತಿದೆ. ಇನ್ನು ಸುದೀಪ್‌ ಅವರು ಎಲ್ಲೆ ಹೋದರೂ ಕನ್ನಡದ ವಿಚಾರ ಬಂದಾಗ ಸಿಡಿಯುತ್ತಿದ್ದವರು. ಕನ್ನಡ ತಪ್ಪಾದಾಗ ತಿದ್ದುತ್ತಿದ್ದವರು. ಆದರೆ, ಮ್ಯಾಕ್ಸ್‌ ಸಿನಿಮಾದಲ್ಲಿ ತಪ್ಪು ಕನ್ನಡ ಬಳಕೆಯಾಗಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ ಅಭಿನಯ ಚಕ್ರವರ್ತಿ ಬದಲಿಗೆ, ಅಭಿನಯ ಚತ್ರವರ್ತಿ ಎಂದು ತಪ್ಪಾದ ಕನ್ನಡ ಬಂದಿತ್ತು. ಪರದೆ ಮೇಲೆ ಇದೇ ರೀತಿ ಚತ್ರವರ್ತಿ ಎಂದೇ ಸಿನಿಮಾ ಬಿಡುಗಡೆಯಾಗಿತ್ತು. ಇದನ್ನು ಹಲವರು ಫೋಟೊ ಕ್ಲಿಕ್‌ ಮಾಡಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಕನ್ನಡಪ್ರೇಮಿ ಸುದೀಪ್‌ ಅವರ ಸಿನಿಮಾದಲ್ಲೇ ಕನ್ನಡ ತಪ್ಪಾಗಿದೆಯಲ್ಲ? ಎಂದು ಹಲವರು ಟೀಕಿಸಿದ್ದರು.

Kiccha Sudeep Responds To Incorrect Kannada Usage In Max Kannada Movie Title

ಈ ಬಗ್ಗೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಕಿಚ್ಚ ಹಾಗೂ ಸಿನಿಮಾ ತಂಡದ ಮುಂದೆ ಪ್ರಸ್ತಾಪಿಸಲಾಯಿತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಮ್ಯಾಕ್ಸ್‌ ಸಿನಿಮಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ಸುದೀಪ್‌ ಕ್ಲಾರಿಟಿ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಚಿತ್ರದ ನಿರ್ದೇಶಕರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಸಿನಿಮಾ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ ಅವರು ಕ್ಷಮೆ ಕೇಳಿದ್ರು.

ಬಳಿಕ ಸುದೀಪ್‌ ಅವರೂ ಮಧ್ಯಪ್ರವೇಶಿಸಿ ಇದಕ್ಕೆ ಉತ್ತರ ಕೊಟ್ಟರು. ಮೊದಲಿಗೆ ನಿರ್ದೇಶಕರು ಕನ್ನಡದವರಲ್ಲ. ಇದರಲ್ಲಿ ಅವರ ತಪ್ಪಿಲ್ಲ ಎಂದು ಹೇಳಿದ್ರು. ತುಂಬಾ ಕೊರತೆ ಇರೋ ನನ್ನನ್ನು ನನ್ನ ತಾಯಿಯೇ ಕ್ಷಮಿಸಿ ಬೆಳೆಸಿದ್ದಾರೆ. ಕ್ಷಮೆ ಅನ್ನೋದು ತಾಯಿಯ ಗುಣ ಎಂದು ಸುದೀಪ್‌ ಕ್ಷಮೆ ಕೇಳಿದ್ದಾರೆ. ನೀವೆಲ್ಲ ಟೈಟಲ್ ಕಾರ್ಡ್​ನಲ್ಲಿದ್ದ ತಪ್ಪನ್ನು ಮೊದಲಿಗೆ ನೋಡಿದ್ರಿ. ಬಳಿಕ ಸಿನಿಮಾ ನೋಡಿದ್ರಿ. ಸಿನಿಮಾ ಮುಂದೆ ಈ ತಪ್ಪು ಚಿಕ್ಕದು ಎಂದು ಸುದೀಪ್‌ ಹೇಳಿದ್ದಾರೆ.

Kiccha Sudeep Responds To Incorrect Kannada Usage In Max Kannada Movie Title

ಹೆಸರಲ್ಲೇನಿದೆ ಸರ್.‌ ನನ್ನನ್ನ ಹುಚ್ಚ ಎಂದೂ ಕರೆಯುತ್ತಾರೆ. ಮ್ಯಾಕ್ಸ್‌ ಸಿನಿಮಾದ ನಿರ್ದೇಶಕರು ಕನ್ನಡದವರಲ್ಲ, ಹಾಗಾಗಿ ಅವರಿಗೆ ಇದು ಗೊತ್ತಾಗಲಿಲ್ಲ. ಕನ್ನಡ ಓದುವುದಕ್ಕೂ ಅವರಿಗೆ ಬರುವುದಿಲ್ಲ. ಇದು ಟೈಪ್‌ ಮಾಡಿದವರ ತಪ್ಪು. ಟೈಪ್‌ ಮಾಡಿದವರು ನಮ್ಮ ಕನ್ನಡದವರೇ. ಇದು ಅಪ್ಪಟ ಕನ್ನಡದವರೇ ಮಾಡಿರೋ ತಪ್ಪು ಎಂದೂ ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ.

Kiccha Sudeep Responds To Incorrect Kannada Usage In Max Kannada Movie Title

ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ ಇದ್ದಾಗ ಟ್ರೈಲರ್‌ ರಿಲೀಸ್‌ ಆಯಿತು. ಕೊನೆ ಕ್ಷಣದಲ್ಲಿ ನಾವೆಲ್ಲ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದೆವು. ಹಾಗಾಗಿ ಈ ಸಿನಿಮಾದ ಟೈಟಲ್‌ ಕಾರ್ಡ್‌ ಕಡೆಗೆ ನಾವು ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ. ಸಿನಿಮಾ ರಿಲೀಸ್‌ ಆದ ಬಳಿಕವೇ ಈ ತಪ್ಪಿನ ಬಗ್ಗೆ ನಮಗೆ ಹಲವರು ಫೋಟೋಗಳನ್ನು ಶೇರ್‌ ಮಾಡಿಕೊಂಡರು. ಚಕ್ರವರ್ತಿ, ಚತ್ರವರ್ತಿಯಾಗಿರುವುದು ನನಗೆ ಬೇಸರವೇನಿಲ್ಲ, ನಾನು ಅದನ್ನು ಮನಸ್ಸಿಗೂ ಹಚ್ಚಿಕೊಳ್ಳಲಿಲ್ಲ. ನಮಗೆ ಸಿನಿಮಾ ಗೆಲ್ಲುವುದು ಮುಖ್ಯ, ಹೆಸರಲ್ಲೇನಿಗೆ ಬದನೆಕಾಯಿ ಎಂದು ಸುದೀಪ್‌ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+