Kiccha Sudeep: ಡೆವಿಲ್ vs ಮಾರ್ಕ್ ಎಂದಿದ್ದಕ್ಕೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು?
ನಟ ದರ್ಶನ್ ತೂಗುದೀಪ ಅವರ ಬಹುನಿರೀಕ್ಷಿತ "ಡೆವಿಲ್" ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗಲಿದೆ. ಇನ್ನು ಕಿಚ್ಚ ಸುದೀಪ್ ನಟನೆಯ "ಮಾರ್ಕ್" ಸಿನಿಮಾ ಕೂಡ ಇದೇ ತಿಂಗಳ 25ರಂದು ಕ್ರಿಸ್ಮಸ್ ದಿನವೇ ತೆರೆ ಕಾಣಲಿದೆ. ಇದೇ ದಿನ ಶಿವಣ್ಣ-ಉಪೇಂದ್ರ ನಟನೆಯ "45" ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಕನ್ನಡ ಸಿನಿ ಪ್ರೇಕ್ಷಕರ ಪಾಲಿಗೆ ದೊಡ್ಡ ಹಬ್ಬವಾಗಿದೆ. ಇನ್ನು ಕಿಚ್ಚ ಸುದೀಪ್ ಅವರು ತಮ್ಮ ಮಾರ್ಕ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಅವರ ಡೆವಿಲ್ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ.
ಒಂದೇ ತಿಂಗಳು ಕನ್ನಡದ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗುತ್ತಿದೆ. ಈ ಪೈಕಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಕೂಡ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲುವಾಸದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಡೆವಿಲ್ ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಎರಡು ವರ್ಷಗಳ ಬಳಿಕ ಡಿಬಾಸ್ ಅಭಿಮಾನಿಗಳು ಹಬ್ಬ ಮಾಡಲು ರೆಡಿಯಾಗಿರುವುದಂತೂ ಸತ್ಯ.

ಡೆವಿಲ್ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಸುದೀಪ್ ಅವರ ಸಿನಿಮಾ ಕೂಡ ರಿಲೀಸ್ ಆಗುತ್ತಿರುವುದು ಕುತೂಹಲ ಮೂಡಿಸಿದೆ. ಅತ್ತ ಕಿಚ್ಚ ಫ್ಯಾನ್ಸ್ ಕೂಡ ಮಾರ್ಕ್ ಟ್ರೇಲರ್ ನೋಡಿ ಫಿದಾ ಆಗಿದ್ದು, ಸಿನಿಮಾ ಬ್ಲಾಕ್ಬಸ್ಟರ್ ಎನ್ನುತ್ತಿದ್ದಾರೆ. ಇನ್ನು ಸ್ಯಾಂಡಲ್ವುಡ್ನ ಎಲ್ಲ ಸೂಪರ್ ಸ್ಟಾರ್ಗಳಾದ ದರ್ಶನ್, ಶಿವಣ್ಣ-ಉಪೇಂದ್ರ ಅವರ ಸಿನಿಮಾಗಳು ಒಟ್ಟಿಗೆ ಬರುತ್ತಿದೆಯಲ್ಲ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸುದೀಪ್ ಈ ರೀತಿ ಉತ್ತರ ನೀಡಿದರು..
"ಮಾರ್ಕ್ ಹಾಗೂ 45 ಎರಡೇ ಸಿನಿಮಾ ಒಟ್ಟಿಗೆ ಬರುತ್ತಿರೋದು. ಇನ್ನೊಂದು (ಡೆವಿಲ್) ಮುಂಚೆಯೇ ರಿಲೀಸ್ ಆಗುತ್ತಿದೆ. ಇದಾದ ಮೂರು ವಾರಕ್ಕೆ ನಮ್ಮ ಸಿನಿಮಾ ಬರ್ತಿದೆ. ಹಾಗಾಗಿ ನಾವು ನೇರವಾಗಿ ನಮ್ಮ ಸಿನಿಮಾ ರಿಲೀಸ್ ಆಗೋ ಡಿಸೆಂಬರ್ 25ರ ಟಾಪಿಕ್ ಕಡೆಗೆ ಹೋಗೋಣ.." ಎಂದಿದ್ದಾರೆ ಸುದೀಪ್.
'ಥಿಯೇಟರ್ ಸಮಸ್ಯೆ ಇಲ್ಲ'
'ದೀಪಾವಳಿ ಬಂದಾಗ ಕರ್ನಾಟಕದ ಎಲ್ಲ ಮನೇಲೂ ಹಬ್ಬ ನಡೆಯುತ್ತೆ. ಆದರೂ ಎಲ್ಲರಿಗೂ ತರಕಾರಿ ದೊರೆಯುತ್ತದೆ. ಎಲ್ಲರ ಮನೇಲೂ ಹಬ್ಬದ ಊಟ ಇರುತ್ತೆ. ಯಾವ ತರಕಾರಿಯೂ ಕಡಿಮೆ ಆಗಲ್ಲ, ಹೀಗಾಗಿ ಊಟಕ್ಕೇ ಯಾವುದೇ ಕೊರತೆ ಇಲ್ಲ ಅಂದಾಗ ಇನ್ನು ಚಿತ್ರಮಂದಿರಗಳಲ್ಲಿ ಜನ ಕಡಿಮೆ ಆಗ್ತಾರಾ? ಜನ ಬಂದೇ ಬರ್ತಾರೆ. ಥಿಯೇಟರ್ಗಳ ಸಮಸ್ಯೆ ಇದ್ದಿದ್ರೆ ನಾವು ಆ ಡೇಟ್ಗೆ ಸಿನಿಮಾ ರಿಲೀಸ್ ಮಾಡ್ತಿದ್ವಾ? ಸಿನಿಮಾ ಪ್ರದರ್ಶಕರನ್ನು ಕೇಳಿ ಅವರು ಎಷ್ಟು ಖುಷಿಯಾಗಿದ್ದಾರೆ ಅಂತ ಹೇಳ್ತಾರೆ' ಎಂದು ಸುದೀಪ್ ಹೇಳಿದ್ದಾರೆ.
ಈ ವರ್ಷದಲ್ಲಿ ಸ್ಯಾಂಡಲ್ವುಡ್ನಲ್ಲಿ ರಿಷಬ್ ಶೆಟ್ಟಿಯ "ಕಾಂತಾರ ಚಾಪ್ಟರ್-1" ಬಳಿಕ ಸ್ಟಾರ್ ನಟರ ಸಿನಿಮಾಗಳು ಒಂದೇ ತಿಂಗಳಲ್ಲಿ ಸಾಲು ಸಾಲಾಗಿ ರಿಲೀಸ್ ಆಗುತ್ತಿವೆ. ಇದರಲ್ಲಿ ಯಾವ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿ ಸೂಪರ್ ಹಿಟ್ ಆಗಲಿದೆ ಎನ್ನುವುದೇ ಈಗಿರುವ ಕುತೂಹಲ..
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications