Kiccha Sudeep: ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಕಿಚ್ಚ: ಕಣ್ಣೀರಿಟ್ಟ ನಟ ಸುದೀಪ್
ಕನ್ನಡದ ಬಹುದೊಡ್ಡ ಶೋ ಬಿಗ್ ಬಾಸ್ ಕನ್ನಡ 11ನೇ ಸೀಸನ್ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಈಗಾಗಲೇ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ್ದಾರೆ. ತಾವೇ ಖುದ್ದಾಗಿ ಟ್ವೀಟ್ ಮಾಡೋ ಮೂಲಕ ನನ್ನದು ಇದೇ ಲಾಸ್ಟ್ ಸೀಸನ್ ಅಂತಾ ಹೇಳಿ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ, ಎಲ್ಲಾ ಚೆನ್ನಾಗಿ ನಡೀತಿರೋವಾಗ ಸುದೀಪ್ ಆ ಶೋಗೆ ಬಾಯ್ ಹೇಳಿದ್ದೇಕೆ? ಎನ್ನುವ ಹಲವು ಪ್ರಶ್ನೆಗಳ ನಡುವೆ ನಟ ಕಿಚ್ಚ ಸುದೀಪ್ ಅವರು ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ನೇ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದ್ದು, ಬಿಗ್ ಬಾಸ್ ಮನೆಯಲ್ಲಿ 9 ಮಂದಿ ಸ್ಪರ್ಧಿಗಳು ಇದ್ದಾರೆ. ಫಿನಾಲೆಗೆ ದಿನಾಂಕ ಹತ್ತಿರ ಆಗುತ್ತಿರುವಾಗಲೇ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿಕ್ಕಿದೆ. ನಟ ಸುದೀಪ್ ಅವರು ಜೀ ಕನ್ನಡ ರಿಯಾಲಿಟಿ ಶೋಗೆ ಆಗಮಿಸಿದ್ದು, ಈ ಪ್ರೋಮೋ ಎಲ್ಲಾರ ಗಮನ ಸೆಳೆಯುವಂತೆ ಮಾಡಿದೆ. ಜೀ ಕನ್ನಡದಲ್ಲಿ 'ಸರಿಗಮಪ' ಶೋ ಪ್ರಸಾರ ಕಾಣುತ್ತಿದೆ. ಈ ಶೋ ನಲ್ಲಿ ಕುಟುಂಬ ಸಮೇತರಾಗಿ ಸರಿಗಮಪ ಶೋಗೆ ಸುದೀಪ್ ಅವರ ಕುಟುಂಬ ಸರ್‌ಪ್ರೈಸ್ ಆಗಿ ಎಂಟ್ರಿಕೊಟ್ಟಿದ್ದಾರೆ.

ಸರಿಗಮಪ ರಿಯಾಲಿಟಿ ಶೋಗೆ ಸುದೀಪ್ ಅವರು ಅವರ ಪತ್ನಿ ಪ್ರಿಯಾ ಜೊತೆಗೆ ಮೊದಲು ಬಂದಿದ್ದಾರೆ. ನಂತರ ಕಾರ್ಯಕ್ರಮದ ಮಧ್ಯ ಮಗಳು ಸಾನ್ವಿ ಕೂಡ ವೇದಿಕೆ ಏರಿದ್ದಾರೆ. ಈ ವಾರಂತ್ಯದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಇದರ ಪ್ರೋಮೋ ಗಮನ ಸೆಳೆದಿದೆ. ಸದ್ಯ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಾ ಇದೆ. ಮ್ಯಾಕ್ಸ್ ಯಶಸ್ಸಿನಿಂದ ಫುಲ್ ಖುಷ್ ಆಗಿರೊ ಕಿಚ್ಚ ಸುದೀಪ್ ಅವರು ಜೀ ಕನ್ನಡದ ಶೋ ನಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ ತಮ್ಮ ಪತ್ನಿಗಾಗಿ ಹಾಡನ್ನು ಸಹ ಹಾಡಿದ್ದಾರೆ. ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮ್ಯಾಕ್ಸ್ ಮೂವಿಗೆ ತೆಲುಗು, ತಮಿಳಿನಲ್ಲೂ ಒಳ್ಳೆ ರೆಸ್ಪಾನ್ಸ್ ಬರ್ತಾ ಇದ್ದು, ವರ್ಷಾಂತ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೆಲುವಿನ ನಗೆ ಮೂಡಿದೆ.
ಇನ್ನೂ ಸರಿಗಮಪ ರಿಯಾಲಿಟಿ ಶೋಗೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಹಿಂದಿನ ನೆನಪುಗಳನ್ನ ಮೆಲಕು ಹಾಕಿದ್ದಾರೆ. ಮೊದಲು ಮೇಕಪ್ ಹಾಕಿ ಪಾದಾರ್ಪಣೆ ಮಾಡಿದ ಸ್ಟುಡಿಯೋ ಇದು ಎಂದು ಕಿಚ್ಚ ಸುದೀಪ್ ಅವರು ಖುಷಿ ಕ್ಷಣವನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ಇದೇ ವೇದಿಕೆಯ ಮೇಲೆ ತಂದೆಗಾಗಿ ಸಾನ್ವಿ ಸುದೀಪ್ ಅವರು ಒಂದು ಸಾಂಗ್ ಹಾಡಿದ್ದಾರೆ. ಈ ವೇಳೆ ಸುದೀಪ್ ಮಗಳ ಹಾಡು ಕೇಳಿ ಭಾವುಕರಾಗಿದ್ದಾರೆ. ಇನ್ನೂ ಜೀ ಕನ್ನಡ ಕುಟುಂಬ ಸುದೀಪ್ ಅವರಿಗೆ ಆಗಲಿದ ತಾಯಿಯ ಮೂರ್ತಿಯನ್ನ ಸರ್‌ಪ್ರೈಸ್ ಆಗಿ ನೀಡಿದ್ದಾರೆ. ಈ ವೇಳೆ ಸುದೀಪ್ ಅವರು ತಾಯಿಯನ್ನ ನೆನೆಪು ಕಣ್ಣೀರು ಹಾಕಿದ್ದು, ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗಿಯಾದ ಪ್ರತಿಯೊಬ್ಬರು ಸಹ ಕಣ್ಣೀರಿಟ್ಟಿದ್ದಾರೆ. ಸುದೀಪ್ ಅವರು ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡರು. ಈ ನೋವಿನಿಂದ ಅವರು ಹೊರ ಬಂದಿಲ್ಲ. ಅನೇಕ ವೇದಿಕೆ ಮೇಲೆ ಸುದೀಪ್ ಅವರು ತಾಯಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.












Click it and Unblock the Notifications