ಯಶ್ ಸಿನಿಮಾಗೆ ಜೋಡಿಯಾಗಿ ಕರೀನಾ ಕಪೂರ್ ಬಂದ್ರು, ದಾರಿ ಬಿಡಿ.. ದಾರಿ ಬಿಡಿ..?

ಕೆಜಿಎಫ್ ಸ್ಟಾರ್ ನಟ ಯಶ್ ಅವರು ಈಗ ಏನೇ ಮಾಡಿದ್ರೂ ಟ್ರೆಂಡ್. ಅದರಲ್ಲೂ ಯಶ್ ಅವರ ಜೊತೆಗೆ ನಟನೆ ಮಾಡಬೇಕು ಅಂತಾ ದೊಡ್ಡ ದೊಡ್ಡ ಬಾಲಿವುಡ್ ನಟ & ನಟಿಯರ ದಂಡೇ ಕಾಯುತ್ತಿರುತ್ತದೆ. ಅದೇ ರೀತಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರು ಕೂಡ ಕನ್ನಡದ ನಟ, ಯಶ್ ಅವರ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಕರೀನಾರ ಆಸೆ ಈಡೇರುತ್ತಿದ್ದು, ಯಶ್ ಅವರ ಮುಂದಿನ ಚಿತ್ರಕ್ಕೆ ಕರೀನಾ ಕಪೂರ್ ನಾಯಕಿ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ಅಂದಹಾಗೆ ಯಶ್ 'ಕೆಜಿಎಫ್' ಸರಣಿ ಮೂಲಕ ಕ್ರಿಯೇಟ್ ಮಾಡಿದ್ದ ಸೌಂಡ್ ಜಗತ್ತಿನ ಮೂಲೆ ಮೂಲೆಗೆ ಹಬ್ಬಿದೆ. ಕನ್ನಡ ಸಿನಿಮಾಗೆ ಮಾರುಕಟ್ಟೆ ಸೀಮಿತ ಅಂತ ಡೈಲಾಗ್ ಹೊಡೆಯುತ್ತಿದ್ದ ಕೆಲವರಿಗೆ ಪಾಠ ಹೇಳಿ ಆಗಿದೆ. ಇದಾದ ನಂತರ ಮತ್ತೆ ಯಶ್‌ರ ಸಿನಿಮಾ ಬದುಕನ್ನು, ಕೆಲವರು ಟಾರ್ಗೆಟ್ ಮಾಡಿದ್ದರು ಅನ್ನೋ ಆರೋಪ ಕೇಳಿಬಂದಿತ್ತು. ಆದ್ರೆ ಎಲ್ಲದಕ್ಕೂ ಉತ್ತರ ನೀಡಿದ ರಾಕಿಭಾಯ್ 19ನೇ ಸಿನಿಮಾ ಟೈಟಲ್‌ನ ಅನೌನ್ಸ್ ಮಾಡಿದ್ದು ಫಸ್ಟ್ ಲುಕ್ ಉತ್ತರ ಭಾರತದಲ್ಲಿ ಹವಾ ಎಬ್ಬಿಸಿದೆ. ಈ ಸಮಯದಲ್ಲಿ ಕರೀನಾ ಕಪೂರ್ ಅವರ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

Kareena Kapoor May Share The Screen with Rocking star Yash in Toxic Movie

ಬಾಲಿವುಡ್ ಬ್ಯೂಟಿ ಎಂಟ್ರಿ ಗ್ಯಾರಂಟಿ?

ಹೀಗೆ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಅಬ್ಬರ ಎಲ್ಲೆಲ್ಲೂ ಜೋರಾದ ಸಮಯದಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದೇ ಸಮಯದಲ್ಲಿ ಉತ್ತರ ಭಾರತದ ಖ್ಯಾತ ನಟಿಯೇ ಯಶ್ ಸಿನಿಮಾಗೆ ಹೀರೋಯಿನ್ ಅನ್ನೋ ಸುದ್ದಿ ಹಲ್‌ಚಲ್ ಎಬ್ಬಿಸಿದೆ. 'ಟಾಕ್ಸಿಕ್' ಸಿನಿಮಾಗೆ ಕರೀನಾ ಕಪೂರ್ ಎಂಟ್ರಿ ಆಗಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದೇ ವಿಚಾರವಾಗಿ ಮಾತುಕತೆ ಕೂಡ ನಡೆದಿದೆಯಂತೆ.

ಕರೀನಾ ಕಪೂರ್ ಬರ್ತಾರಾ? ಬರಲ್ವಾ?

ದಕ್ಷಿಣ ಭಾರತದ ಸಿನಿಮಾ ಅಂದ್ರೆ ದೊಡ್ಡ ಹವಾ ಇದೆ ಈಗ ಕನ್ನಡ ಸಿನ್ಮಾ ಅಂದ್ರೆ, ಮತ್ತೊಂದು ರೇಂಜ್ ಹವಾ ಕ್ರಿಯೇಟ್ ಆಗಿದೆ. ಕನ್ನಡ ನಾಡಿನಲ್ಲಿ ಬೆಳೆದು ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲು ಸಜ್ಜಾಗಿರುವ ಯಶ್ ಅವರಿಗು ಭರ್ಜರಿ ಸಪೋರ್ಟ್ ಸಿಗುತ್ತಿದ್ದು, ಉತ್ತರ ಭಾರತದಲ್ಲಿ ಯಶ್ ಫುಲ್ ಫೇಮಸ್. ಹೀಗಿದ್ದಾಗ ನಟ ಯಶ್ ಅವರ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರೇ ನಟನೆ ಮಾಡಲಿದ್ದಾರೆ ಎನ್ನಲಾಗಿದೆ. ಹಿಂದೆ ಸಾಯಿ ಪಲ್ಲವಿ ಅವರ ಹೆಸರು ಕೇಳಿಬಂದಿತ್ತು. ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಅಖಾಡಕ್ಕೆ ಕರೀನಾ ಎಂಟ್ರಿ ಬಹುತೇಕ ಪಕ್ಕಾ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಹೊರಗೆ ಬೀಳಬೇಕಿದೆ.

ಹಾಲಿವುಡ್ ಲೆವೆಲ್ ಸಿನಿಮಾ ಪಕ್ಕಾ?

'ಟಾಕ್ಸಿಕ್' ಫಸ್ಟ್ ಲುಕ್‌ ನೋಡುತ್ತಿದ್ರೆ ದೊಡ್ಡ ಪ್ಲಾನ್ ಮಾಡುತ್ತಿರುವಂತೆ ಕಾಣುತ್ತಿದೆ. ಹೀಗೆ ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಯಶ್ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು, ಕನ್ನಡಿಗರಿಗೂ ಖುಷಿ ಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳ ಸಹಿತ, ಭಾರತದ ಸಿನಿಮಾ ಫ್ಯಾನ್ಸ್ 'ಟಾಕ್ಸಿಕ್' ಫಸ್ಟ್‌ಲುಕ್‌ಗೆ ಫಿದಾ ಆಗಿದ್ದಾರೆ. ಇದೇ ವೇಳೆ ಕರೀನಾ ಕಪೂರ್ ಎಂಟ್ರಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.

Kareena Kapoor May Share The Screen with Rocking star Yash in Toxic Movie

ಒಟ್ನಲ್ಲಿ ಕನ್ನಡದ ನಟ ಯಶ್ ಏನೇ ಮಾಡಿದರೂ ಕನ್ನಡ ಸಿನಿಮಾ ರಂಗಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಈ ಮಾತನ್ನು ಅವರು ಪದೇ ಪದೆ ಹೇಳುತ್ತಾ ಬಂದಿದ್ದಾರೆ. 'ಕೆಜಿಎಫ್' ಸಿನಿಮಾ ಬಿಡುಗಡೆಯ ಮೊದಲು ಯಶ್ ಕನ್ನಡ ಸಿನಿಮಾ ಇಂಡಸ್ಟ್ರಿ ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಂತಾ ಹೇಳಿಕೆಯನ್ನ ನೀಡಿದ್ರು. ಅದು ನೆರವೇರಿತು, ಆಧುನಿಕ ಕಾಲದಲ್ಲಿ ಕನ್ನಡ ಸಿನಿಮಾಗಳ ಗತ್ತು ಜಗತ್ತಿಗೆ ತಿಳಿಯಿತು. ಇದೇ ಸಮಯದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಟಾಕ್ಸಿಕ್ ಸಿನಿಮಾ ತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+