ಕಾಂತಾರ ಚಾಪ್ಟರ್‌-1ಗೆ ಮತ್ತೊಂದು ವಿಘ್ನ, ಶೂಟಿಂಗ್‌ ರದ್ದು ಮಾಡುವ ಎಚ್ಚರಿಕೆ, ಯಾರಿಂದ?

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್‌-1 ಸಿನಿಮಾಗೆ ಸಾಲು ಸಾಲಾಗಿ ವಿಘ್ನಗಳು ಎದುರಾಗುತ್ತಲೇ ಇವೆ. ಈ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಕಲಾವಿದರ ಸರಣಿ ಸಾವು ಜೊತೆಗೆ ಇತ್ತೀಚೆಗೆ ಶೂಟಿಂಗ್‌ ವೇಳೆ ದೋಣಿ ಮುಗುಚಿ ಬಿದ್ದಿತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ, ಈ ಬಗ್ಗೆ ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್‌ ಸ್ಪಷ್ಟನೆ ನೀಡಿತ್ತು. ಅದೆಲ್ಲ ಸುಳ್ಳು ಸುದ್ದಿ, ಶೂಟಿಂಗ್‌ ಎಂದಿನಂತೆ ನಡೆಯುತ್ತಿದೆ ಎಂದು ಹೇಳಿತ್ತು. ಇದರ ನಡುವೆ ಕಾಂತಾರ ಚಿತ್ರತಂಡದಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.

ಶೂಟಿಂಗ್‌ ವೇಳೆ ರಿಷಬ್‌ ಶೆಟ್ಟಿ ಸೇರಿದಂತೆ ಹಲವರಿದ್ದ ಬೋಟ್‌ ಮುಗುಚಿಬಿದ್ದಿತ್ತು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆ ಹೊಂಬಾಳೆ ಸ್ಪಷ್ಟನೆ ನೀಡಿತ್ತು. ಶೂಟಿಂಗ್‌ಗೆ ಹಾಕಿದ್ದ ಸೆಟ್‌ನಲ್ಲಿದ್ದ ದೋಣಿ ಗಾಳಿ ಮಳೆಗೆ ಬಿದ್ದಿತ್ತು. ಆಗ ಯಾರೂ ಅಲ್ಲಿರಲಿಲ್ಲ, ವದಂತಿಗಳೆಲ್ಲ ಸುಳ್ಳು ಎಂದಿತ್ತು. ಈ ವಿಚಾರವಾಗಿ ಇದೀಗ ಶಿವಮೊಗ್ಗ ಜಿಲ್ಲಾಧಿಕಾರಿ ವರದಿ ಕೇಳಿದ್ದು, ಹೊಸನಗರ ತಹಶೀಲ್ದಾರ್‌ ಕಾಂತಾರ ಚಿತ್ರತಂಡಕ್ಕೆ ನೋಟಿಸ್‌ ಜಾರಿ ಮಾಡಿದೆ.

kantara-chapter-1-tragedy-hosanagar-tahsildar-issues-notice-to-film-team

ಜೂನ್‌ 15ರಂದು ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಕಾಂತರ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಮಾಣಿ ಜಲಾಶಯದಲ್ಲಿ ದೋಣಿ ಮುಗುಚಿ 30 ಜನ ನೀರಿನಲ್ಲಿ ಈಜಿ ದಡ ಸೇರಿರುತ್ತಾರೆ, ಹಾಗೆಯೇ ಒಂದು ಆಂಬುಲೆನ್ಸ್ ಚಿತ್ರೀಕರಣದ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿರುವ ಬಗ್ಗೆ ಪ್ರಕಟವಾಗಿರುತ್ತದೆ. ಸದರಿ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಹಾಗೂ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲ್ಲೂಕು ಆಡಳಿತಕ್ಕಾಗಲಿ, ಜಿಲ್ಲಾಡಳಿತಕ್ಕಾಗಲಿ ಯಾವುದೇ ಮಾಹಿತಿಯನ್ನು ತಾವು ನೀಡಿರುವುದಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ಹೊಂಬಾಳೆ ಫಿಲಂಸ್‌ ವತಿಯಿಂದ ಸ್ಪಷ್ಟೀಕರಣ ನೀಡಿದ್ದೀರಿ. ಆದರೆ ಸದರಿ ಸುದ್ದಿಯಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ವರದಿ ಕೇಳಿದ್ದಾರೆ. ರಾಜಸ್ಥ ನಿರೀಕ್ಷಕರು, ನಗರ ಹೋಬಳಿ ಅವರು ನಿಮ್ಮ ಸಂಸ್ಥೆಯ ಮ್ಯಾನೇಜರ್ ಅವರಿಗೆ ಅನುಮತಿ ಪತ್ರಗಳನ್ನು ಹಾಜರುಪಡಿಸಲು ದೂರವಾಣಿ ಮೂಲಕ ಸಂಪರ್ಕಿಸಿದರೂ ಯಾವುದೇ ಸ್ಪಂದನೆ ನೀಡಿರುವುದಿಲ್ಲ ಎಂದು ಹೇಳಿದೆ.

ಜೂನ್‌ 15ರಂದು ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಅವಶ್ಯವಿರುವುದರಿಂದ ಸಮರ್ಪಕ ದಾಖಲೆಗಳೊಂದಿಗೆ ಈ ನೋಟೀಸ್ ತಲುಪಿದ 3 ದಿನಗಳೊಳಗಾಗಿ ಸಮಜಾಯಿಷಿ ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಭಾವಿಸಿ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಚ್ಚರಿಕೆ ನೀಡಲಾಗಿದೆ.

ಏನಿದು ಘಟನೆ?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಕಾಂತಾರ ಚಾಪ್ಟರ್ 1 ಶೂಟಿಂಗ್‌ ವೇಳೆ ದೋಣಿ ಮುಗುಚಿತ್ತು ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಹೊಂಬಾಳೆ ಫಿಲಂಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್‌ ಆದರ್ಶ ಸ್ಪಷ್ಟನೆ ನೀಡಿದ್ದರು. ಭಾರಿ ಗಾಳಿ, ಮಳೆಯಿಂದಾಗಿ ಶೂಟಿಂಗ್‌ಗೆ ಹಾಕಿದ್ದ ಶಿಪ್ ಸೆಟ್ ಹಾನಿಗೆ ಒಳಗಾಗಿದೆ ಅಷ್ಟೇ. ನಾವು ಹಿನ್ನೀರಿನ ಭಾಗದಲ್ಲಿ ಯಾವುದೇ ಶೂಟಿಂಗ್‌ ನಡೆಸಿಲ್ಲ. ಶಿಪ್‌ ಸೆಟ್‌ ಹಾಕಿ ಶೂಟಿಂಗ್‌ ಮಾಡಿದ್ದೇವೆ. ಶೂಟಿಂಗ್‌ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+