ಕಾಂತಾರ ಶೂಟಿಂಗ್‌ ಮುಗಿಸಿಬಂದ ರಾಕೇಶ್‌ ಪೂಜಾರಿಗೆ ಏನಾಯ್ತು?

ಕಾಮಿಡಿ ಕಿಲಾಡಿಗಳು ಸೀಸನ್ 3 ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ಕಾಂತಾರ ಸಿನಿಮಾ ಯಶಸ್ವಿನ ಬಳಿಕ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ರಿಷಬ್ ಶೆಟ್ಟಿ ಶುರು ಮಾಡಿದ್ರು. ಮೇ 11ರ ಬೆಳಿಗ್ಗೆ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1'ರ ಶೂಟ್ನಲ್ಲಿ ನಟ ರಾಕೇಶ್‌ ಪೂಜಾರಿ ಇದ್ದರು. ಮಧ್ಯರಾತ್ರಿ ರಾಕೇಶ್‌ ಪೂಜಾರಿ ಸಾವನ್ನಾಪಿದ್ದಾರೆ.

ಇನ್ನೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾಗೆ ಅಪಶಕುನದ ಮೇಲೆ ಅಪಶಕುನಗಳು ಎದುರಾಗ್ತಾನೆ ಇದೆ. ಆದರೆ, ಕಾಂತಾರ ಚಿತ್ರ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗ್ತಾನೆ ಇದೆ. ಇತ್ತೀಚಿಗಷ್ಟೇ ಕಾಂತಾರ ಚಾಪ್ಟರ್ 1 ಸೆಟ್ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ರು. ಇದೀಗ ಹಾಸ್ಯನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದು ಕಾಂತಾರ ಚಿತ್ರತಂಡಕ್ಕೆ ದೊಡ್ಡ ಆಘಾತವೇ ಆಗಿದೆ.

Kantara Chapter 1 Rakesh Poojary Who Played A Leading Role In The Film Passed Way

ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುತ್ತಿದ್ದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನದ ಸುದ್ದಿ ಕೇಳಿ ಚಿತ್ರತಂಡ ಬೆಚ್ಚಿಬಿದ್ದಿದೆ. ಇದೀಗ ಕಾಂತಾರ ಚಾಪ್ಟರ್​ 1 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್ ಪೂಜಾರಿ ನಿಧನರಾಗಿದ್ದು, ಮೇ 11ರ ಬೆಳಗ್ಗೆ 'ಕಾಂತಾರ ಚಾಪ್ಟರ್ 1'ರ ಶೂಟ್​ನಲ್ಲಿ ರಾಕೇಶ್ ಭಾಗಿಯಾಗಿದ್ದರು. ಮಧ್ಯರಾತ್ರಿ ಅವರಿಗೆ ಸಾವು ಸಂಭವಿಸಿದೆ. ನಿನ್ನೆವರೆಗೂ ಆರೋಗ್ಯವಾಗಿಯೇ ಇದ್ದ ನಟ ರಾಕೇಶ್ ಪೂಜಾರಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು, ಸಿನಿಮಾಗಳಲ್ಲಿ ರಾಕೇಶ್ ಪೂಜಾರ್ ನಟಿಸಿದ್ದಾರೆ. ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್ 1 ಚಿತ್ರದಲ್ಲೂ ರಾಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ರು.

ಎಲ್ಲರನ್ನೂ ನಗಿಸಿಕೊಂಡಿದ್ದ ಕಲಾವಿದ ರಾಕೆಶ್ ಪೂಜಾರಿ ನಿನ್ನೆಯವರೆಗೂ ಆರಾಮಾಗಿದ್ದರು. ಅವರಿಗೆ ಯಾವುದೇ ಕಾಯಿಲೆ ಅಥವಾ ಅನಾರೋಗ್ಯವಾಗಲಿ ಇರಲಿಲ್ಲ. ಲಭ್ಯವಾದ ಮಾಹಿತಿ ಅನ್ವಯ ನಿನ್ನೆ(ಮೇ 11) ಮಿಯ್ಯಾರಿನ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಖುಷಿಯಾಗೇ ಸಮಯ ಕಳೆದಿದ್ದರು. ಅಲ್ಲದೇ ಅಲ್ಲಿ ಡ್ಯಾನ್ಸ್ ಕೂಡಾ ಮಾಡಿ ಸಂಭ್ರಮಿಸಿದ್ದರು. ಮೆಹೆಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ರಾಕೇಜ್‌ ಪೂಜಾರಿ ಅವರನ್ನು ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಅವರ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+