ಕನ್ನಡಿಗರ ಕಾಂತಾರ 20,00,00,00,000 ರೂಪಾಯಿ ಭರ್ಜರಿ ಕೆಲೆಕ್ಷನ್ ಮಾಡುವ ಬಗ್ಗೆ... Kantara Chapter-1
ಕನ್ನಡಿಗರ ಕಾಂತಾರ 3 ವರ್ಷಗಳ ನಂತರ ಮತ್ತೆ ಬಂದಿದೆ, ಕಾಂತಾರ ಹೊಸ ಭಾಗದಲ್ಲಿ ವಿಸ್ಮಯಗಳ ರಾಶಿಯನ್ನೇ ಶತಕೋಟಿ ಭಾರತೀಯರ ಎದುರು ಇಡಲು ರಿಷಬ್ ಶೆಟ್ಟರು ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಕಾಂತಾರ ಸಿನಿಮಾ ನೋಡಲು ಕಾಯುತ್ತಿದ್ದ ಕೋಟಿ ಕೋಟಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದೆ. ಮೊದಲ ಭಾಗದಲ್ಲೇ ಸುಮಾರು 400 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಮಾಡಿ ಸಂಚಲನ ಸೃಷ್ಟಿಸಿದ್ದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಈಗ, ಮತ್ತೊಂದು ಇತಿಹಾಸ ಸೃಷ್ಟಿ ಮಾಡಲು ಮುಂದೆ ನುಗ್ಗಿದೆ. ಈ ಸಮಯದಲ್ಲೇ, ಕನ್ನಡಿಗರ ಕಾಂತಾರ 20,00,00,00,000 ರೂಪಾಯಿ ಕೆಲೆಕ್ಷನ್ ಮಾಡುವುದು ಗ್ಯಾರಂಟಿ?
ಕಾಂತಾರ ಸಿನಿಮಾ ಅಬ್ಬರಿಸುತ್ತಿದೆ... ಕರಾವಳಿ ಸಂಸ್ಕೃತಿಯ ಅಬ್ಬರ ಕಂಡು ಇಡೀ ಇಂಡಿಯಾ ಮಾತ್ರ ಅಲ್ಲ ಇಡೀ ಜಗತ್ತು ಒಂದು ಬಾರಿ ತಲೆಬಾಗಿ ನಮಸ್ಕರಿಸಿದೆ... ಹೌದು, ಕಾಂತಾರ ಸಿನಿಮಾ ಎಲ್ಲೆಲ್ಲೂ ತನ್ನ ಹವಾ ಎಬ್ಬಿಸಿದೆ, ಸಿನಿಮಾ ನೋಡಲು ಟಿಕೆಟ್ ಸಿಗದೆ ಅಭಿಮಾನಿಗಳೂ ಕಾಯುವಂತೆ ಆಗಿದೆ. ಕನ್ನಡ ಸಿನಿಮಾ ನೋಡಿ ತೆಲುಗು, ತಮಿಳು, ಮಲಯಾಳಂ & ಹಿಂದಿ ಸಿನಿಮಾಗಳ ಪ್ರೇಕ್ಷಕ ಪ್ರಭುಗಳು ಕೂಡ ಫಿದಾ ಆಗಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಭರ್ಜರಿ ಸುದ್ದಿ ಕಾಂತಾರಾ ಪ್ರೇಮಿಗಳಿಗೆ ಇದೀಗ ಸಿಕ್ಕಿದೆ. ಅದು ಏನೆಂದರೆ ಕಾಂತಾರ ಸಿನಿಮಾ ಬರೋಬ್ಬರಿ ಎರಡು ಸಾವಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಾ? ಅನ್ನೋ ಚರ್ಚೆ ಇದೀಗ ಶುರುವಾಗಿದೆ.

ಕಾಂತಾರ ಸಿನಿಮಾ ಟಿಕೆಟ್ ಪಡೆಯಲು ಡಿಮ್ಯಾಂಡ್!
ಮತ್ತೊಂದು ಕಡೆ ಕಾಂತಾರ ಸಿನಿಮಾ ಟಿಕೆಟ್ ಪಡೆಯಲು ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೀಗಾಗಿಯೇ ಸದ್ಯಕ್ಕೆ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗೇ ಕನ್ನಡಿಗರ ಸಿನಿಮಾ ಹೀಗೆ ದೊಡ್ಡ ಮಟ್ಟಿಗೆ ಬೆಳೆದು ನಿಂತಿರುವುದು ಕನ್ನಡಿಗರಿಗೆ ಕೂಡ ಖುಷಿ ನೀಡಿದೆ. ಮತ್ತೊಂದು ಕಡೆ ಬರೋಬ್ಬರಿ ಎರಡು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ಸಾಧನೆ ಮಾಡಲಿ ಕನ್ನಡ ಸಿನಿಮಾ ಅನ್ನೋ ಹಾರೈಕೆ ಕೂಡ ಅಭಿಮಾನಿಗಳಿಂದ ಬರುತ್ತಿದೆ.
ಒಟ್ನಲ್ಲಿ ಕಾಂತಾರ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ಮತ್ತೊಂದು ಚಿನ್ನದಂತೆ ಬಂದಿದ್ದು, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಕನ್ನಡ ಸಿನಿಮಾ ನೋಡಿ ಜನರು ಜೈ ಎನ್ನುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ಕನ್ನಡ ಸಿನಿಮಾಗಳು ಇದೇ ರೀತಿ ಸದ್ದು ಮಾಡಲಿ ಅಂತಾ ಹಾರೈಸುತ್ತಿದ್ದಾರೆ ಅಭಿಮಾನಿಗಳು.












Click it and Unblock the Notifications