Kantara Chapter-1: ಕಾಂತಾರ ಸಿನಿಮಾ ಸರಣಿ ದುರಂತ, ರಾಕೇಶ್ ಪೂಜಾರಿ ಸಾವು: ಚಿತ್ರ ತಂಡದಿಂದ ಮಹತ್ವದ ಸಂದೇಶ!

Kantara Chapter-1: ಕನ್ನಡ ಚಿತ್ರರಂಗದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿರುವ ಹಾಗೂ ಇಡೀ ದೇಶವೇ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದ ಸಿನಿಮಾಗಳಲ್ಲಿ ಕಾಂತಾರ ಹಾಗೂ ಕೆಜಿಎಫ್ ಸಿನಿಮಾಗಳು ಪ್ರಮುಖವಾಗಿವೆ. ಈ ಎರಡೂ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶವೇ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದೆ. ಅದರಲ್ಲೂ ಕಾಂತಾರ ಸಿನಿಮಾದ ನಂತರ ಕನ್ನಡಕ್ಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇದೀಗ ಇದರ ಮುಂದುವರಿದ ಭಾಗವಾಗಿ ಕನ್ನಡದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುವುದಕ್ಕೆ ಭರ್ಜರಿ ಸಿದ್ಧತೆಗಳು ನಡದಿರುವಾಗಲೇ ಒಂದರ ಹಿಂದೆ ಒಂದು ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಲಾಗಿದೆ. ಇದೀಗ ಈ ಸಂಬಂಧ ಕೊನೆಗೂ ಚಿತ್ರ ತಂಡವೇ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವರ್ಷಗಳಿಂದಲೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲ್ಲೇ ಇವೆ. ಅದರಲ್ಲೂ ಸ್ಟಾರ್‌ ನಟರ ಸಿನಿಮಾಗಳು ಬೇಗ ಬಿಡುಗಡೆಯಾಗದೆ. ಚಿತ್ರಮಂದಿರಗಳಿಗೆ ಸಂಕಷ್ಟ ಎದುರಾಗಿದ್ದರೆ ಕನ್ನಡಿಗರು ಸಹ ಹೊಸ ಹಾಗೂ ಸ್ಟಾರ್‌ ನಟರ ಸಿನಿಮಾ ಬೇಗ ಬಿಡುಗಡೆ ಆಗದೆ ಇರುವುದಕ್ಕೆ ತೀರ ಬೇಸರ ಹಾಗೂ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇನ್ನು ಕನ್ನಡದ ಸ್ಟಾರ್‌ ನಟರು ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲ ಗೊಂದಲಗಳು ಇರುವಾಗ ಕನ್ನಡದ ಮತ್ತೊಂದು ಪ್ರಮುಖ ಹಾಗೂ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಸಂಕಷ್ಟ ಎದುರಾಗುತ್ತಿದೆ. ದೈವ ಹೇಳಿದ ಮಾತು ನಿಜವಾಯಿತೇ ಎನ್ನುವ ಪ್ರಶ್ನೆ ಎದುರಾಗಿದೆ.

Kantara Chapter-1 Kantara Cinema Tragedys Rakesh Poojary Death Important Message from Film Team

ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿವೆ. ಸಿನಿಮಾ ನಿರ್ಮಾಣಕ್ಕೆ ಭಾರೀ ಅಡೆತಡೆ

ಎದುರಾಗುತ್ತಿರುವುದಕ್ಕೆ ಕಾರಣವೇನು ಎಂದು ಭಾರೀ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ ಈ ಸಿನಿಮಾದ ಸಹ ಕಲಾವಿದ ಹಾಗೂ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿತ್ರತಂಡವು ನಿರಂತವಾಗಿ ಸಮಸ್ಯೆ ಎದುರಿಸುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿರುವಾಗಲೇ ಚಿತ್ರತಂಡದ ಈ ಬಗ್ಗೆ ಮಹತ್ವದ ಸ್ಪಷ್ಟನೆ ಬಂದಿದೆ.

ಕಾಂತಾರ ಸಿನಿಮಾಕ್ಕೆ ಎದುರಾದ ಪ್ರಮುಖ ಸಮಸ್ಯೆಗಳು

* ಬಸ್‌ ದುರಂತ: ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶನ ಮಾಡುತ್ತಿರುವ "ಕಾಂತಾರ ಚಾಪ್ಟರ್ 1" ಸಿನಿಮಾ ಶೂಟಿಂಗ್ ಪ್ರಾರಂಭವಾದಾಗಿನಿಂದಲೂ ತೊಡಕು ಅನುಭವಿಸುತ್ತಿದೆ ಎಂದು ಹೇಳಲಾಗಿದೆ. ಕಳೆದ ನವೆಂಬರ್‌ನಲ್ಲಿ ಕಾಂತಾರ ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ತೆರಳುವಾಗ 20 ಜ್ಯೂನಿಯರ್ ಕಲಾವಿದರಿದ್ದ ಮಿನಿ ಬಸ್‌ ಉಡುಪಿ ಜಿಲ್ಲೆಯ ಬೈಂದೂರಿನ ಜಡ್ಕಲ್ ಎನ್ನುವ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿತ್ತು. ಇದರಲ್ಲಿ 5 ಜನ ಕಲಾವಿದರೆ ಸಣ್ಣಪುಟ್ಟ ಗಾಯಗಳಾಗಿತ್ತು.

Kantara Chapter-1 Kantara Cinema Tragedys Rakesh Poojary Death Important Message from Film Team

* ಈಚೆಗೆ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದ ಕಾಂತಾರ ಸಿನಿಮಾದ ಸಹಕಲಾವಿದ ಎಂ.ಎಫ್‌ ಕಪಿಲ್‌ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿದ್ದ ಚಿತ್ರತಂಡವು ಚಿತ್ರೀಕರಣದ ಸಮಯದಲ್ಲಿ ಈ ದುರಂತ ನಡೆದಿಲ್ಲ. ಈ ಘಟನೆಗೂ ಕಾಂತಾರ ಸಿನಿಮಾ ಚಿತ್ರೀಕರಣಕ್ಕೂ ಸಂಬಂಧವಿಲ್ಲ ಎಂದಿತ್ತು.

* ಅರಣ್ಯ ನಾಶ ಮಾಡಿದ ಆರೋಪ: ಇನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆರೂರು ಗ್ರಾಮದ ಸಮೀಪದಲ್ಲಿ "ಕಾಂತಾರ" ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅರಣ್ಯದಲ್ಲಿ ಸ್ಫೋಟಕ ಬಳಕೆ ಮಾಡುವ ಮೂಲಕ ಅರಣ್ಯ ನಾಶ ಮಾಡಲಾಗಿದೆ ಎನ್ನುವ ಗಂಭೀರ ಆರೋಪವೂ ಕೇಳಿ ಬಂದಿತ್ತು. ಚಿತ್ರೀಕರಣಕ್ಕಾಗಿ ಚಿತ್ರತಂಡವು ಮೊದಲೇ ಅರಣ್ಯ ಇಲಾಖೆಯ ಅನುಮತಿ ಪಡೆದುಕೊಂಡಿತ್ತು. ಯಾವುದೇ ಅರಣ್ಯನಾಶ ಮಾಡಿರಲಿಲ್ಲ ಎನ್ನುವ ವಿಷಯ ಆ ಮೇಲೆ ಸ್ಪಷ್ಟವಾಗಿತ್ತು.

* ರಾಕೇಶ್‌ ಪೂಜಾರಿ ನಿಧನ: ಕಾಂತಾರ 1 ಸಿನಿಮಾದ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಿನಿಮಾದಲ್ಲಿ ಅವರು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಮುಗಿದು ಒಂದು ತಿಂಗಳ ನಂತರ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ.

ಕಾಂತಾರ ದುರಂತ: ಚಿತ್ರ ತಂಡ ಹೇಳಿದ್ದೇನು ?

ಇನ್ನು ಕಾಂತಾರ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ ಎನ್ನುವ ಆರೋಪದ ನಡುವೆಯೇ ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕಾಂತಾರದಿಂದ ಈ ದುರಂತವಾಗಿಲ್ಲ. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಆಗಿಲ್ಲ. ಚಿತ್ರದ ಚಿತ್ರೀಕರಣವು ಕೊನೆಯ ಹಂತದಲ್ಲಿದ್ದು, ವಿಜಯದಶಮಿಗೆ ಕಾಂತಾರ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಸ್ಪಷ್ಟನೆ ನೀಡಿದೆ.

ಕನ್ನಡ ಚಿತ್ರರಂಗಕ್ಕೆ ಶಾಕ್‌!

ಇನ್ನು ಕಾಂತಾರ ಚಾಪ್ಟರ್‌ 1 ಚಿತ್ರದ ನಿರ್ಮಾಣ ಸಮಯದಲ್ಲಿ ನಡೆಯುತ್ತಿರುವ ಅವಘಡಗಳು ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಕಾಂತಾರ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಇದರ ಎರಡನೇ ಭಾಗ ಬಿಡುಗಡೆಗೆ ಸಂಕಷ್ಟ ಸೃಷ್ಟಿಯಾಗಿದೆ. ಮುಂದುವರಿದು ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಸಂಕಷ್ಟ ಇದೆ ಎಂದು ಪಂಜುರ್ಲಿ ದೈವದ ಮುನ್ಸೂಚನೆ ಸಹ ಭಾರೀ ಚರ್ಚೆಗೆ ಕಾರಣವಾಗಿದೆ.

ಆತಂಕದ ವಾತಾವರಣ: ಕಾಂತಾರ ಚಾಪ್ಟರ್‌ 1 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪದೇ ಪದೇ ಕಹಿ ಘಟನೆಗಳು ನಡೆಯುತ್ತಿರುವುದು ಸಿನಿಮಾದ ನಿರ್ದೇಶಕರು ಹಾಗೂ ಸಹಕಲಾವಿದರಲ್ಲಿ ಸಣ್ಣ ಆತಂಕವನ್ನೂ ಮೂಡಿಸಿದೆ ಎಂದು ಹೇಳಲಾಗುತ್ತಿದೆ.

ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಹೆಚ್ಚು ಕಳಾಜಿ ವಹಿಸಿ ಚಿತ್ರೀಕರಣ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+