ಕಾಂತಾರಾ-1 ಚಿತ್ರತಂಡದ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ನಿಧನ
ಕಾಂತಾರಾ-1 ಚಿತ್ರತಂಡದ ಮತ್ತೊಬ್ಬ ಕಲಾವಿದರೊಬ್ಬರು ಹೃದಾಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿ ಬುಧವಾರ ತಡರಾತ್ರಿ ನಡೆದಿದೆ. ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸಾವಿನ ನೋವು ಮಾಸುವ ಮುನ್ನ ಈ ದುರ್ಘಟನೆ ಸಂಭವಿಸಿದೆ.
ಕಾಂತಾರ ಚಿತ್ರ ಕಲಾವಿದ ವಿಜು ವಿಕೆ ಮೃತ ವ್ಯಕ್ತಿ ಎನ್ನಲಾಗಿದ್ದು, ಇವರು ಕೇರಳದ ತ್ರಿಶೂರ್ ಮೂಲಕ ಮಿಮಿಕ್ರಿ ಕಲಾವಿದಗಿದ್ದರು. ಸಿನಿಮಾದ ಚಿತ್ರೀಕರಣಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿ ಆಗುಂಬೆ ಬಳಿ ಹೋಂ ಸ್ಟೇವಿಂದರಲ್ಲಿ ತಂಗಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಆರಂಭ ಆದಾಗಿನಿಂದಲೂ ಒಂದಲ್ಲಾ ಒಂದು ಅಹಿತಕರ ಘಟನೆಗಳು ಸಂಭವಿಸುತ್ತಲೇ ಇವೆ. ಈ ಚಿತ್ರತಂಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಸಾವಿನ ನೋವು ಮಾಸುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.
ಮಿಮಿಕ್ರಿ ಕಲಾವಿದ ನಿಜು ವಿ ಕೆ ಅವರು ಕಾಂತಾರ ಚಾಪ್ಟರ್ 1 ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಅವರು ಆಗುಂಬೆ ಹೋಮ್ ಸ್ಟೇವೊಂದರಲ್ಲಿ ತಂಗಿದ್ದರು.
ಬುಧವಾರ (ಜೂನ್ 11) ರಾತ್ರಿ ನಿಜು ವಿ ಕೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇನ್ನು ನಿಜು ವಿ ಕೆ ಕುಟುಂಬಸ್ಥರು ಕೇರಳದಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ, ಮೇ 12ರಂದು ಮಧ್ಯರಾತ್ರಿ ಹೃದಯಾಘಾತದಿಂದ ವಿಧಿವಶರಾದರು. ಆರಾಮಾಗಿ ಓಡಾಡಿಕೊಂಡಿದ್ದ ರಾಕೇಶ್ ಪೂಜಾರಿ ಅವರು ಹಠಾತ್ ಸಾವನ್ನಪ್ಪಿದ್ದರು.
ಕಾಂತಾರ ಸಿನಿಮಾ ಹಿಟ್ ಆದಮೇಲೇ ರಿಷಬ್ ಶೆಟ್ಟಿ ಅವರು ಕಾಂತಾರ: ಚಾಪ್ಟರ್ 1 ಸಿನಿಮಾ ಮಾಡಲು ಮುಂದಾದ್ರು. ಆದರೆ, ಕಾಂತಾರ: ಚಾಪ್ಟರ್ 1 ಆರಂಭದಿಂದಲೂ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದರಿಂದ ಅಡೆತಡೆಗಳಾಗುತ್ತಲೇ ಇದೆ. ಒಟ್ಟಿನಲ್ಲಿ ಕಾಂತಾರ: ಚಾಪ್ಟರ್ 1 ಸಿನಿಮಾ ಆರಂಭವಾದ ನಂತರ ಈವರೆಗೂ ಒಟ್ಟು 3 ಸಾವುಗಳು ಸಂಭವಿಸಿದ್ದು, ಕೊಲ್ಲೂರಿನಲ್ಲಿ ಬಸ್ ಅಪಘಾತಕ್ಕೀಡಾದ ಘಟನೆ ನಡೆದಿತ್ತು.












Click it and Unblock the Notifications