ಕನ್ನಡತಿ ನಟಿ ರಂಜನಿ ರಾಘವನ್ ಲವ್ ಸ್ಟೋರಿ ಎಷ್ಟು ಚಂದ ಗೊತ್ತಾ..?
ಬೆಂಗಳೂರು, ಸೆಪ್ಟೆಂಬರ್ 12: ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಇತ್ತೀಚಿಗಷ್ಟೇ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಜೀವನ ಸಂಗಾತಿಯನ್ನು ಪರಿಚಯಿಸುವ ಮೂಲಕ ತಾವು ಎಂಗೇಜ್ ಆದ ವಿಚಾರವನ್ನು ಹಂಚಿಕೊಂಡಿದ್ದರು. ಫೋಟೋ ಜೊತೆಗೆ ಜೀವನ ಸಂಗಾತಿ, ನನ್ನ ಹುಡುಗ ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಇದರಿಂದ ಇದೊಂದು ಲವ್ ಮ್ಯಾರೇಜ್ ಎಂದು ಊಹಿಸಿದ್ದರು. ಈ ಬಗ್ಗೆ ಸ್ವತಃ ರಂಜನಿ ರಾಘವನ್ ಸ್ಪಷ್ಟಪಡಿಸಿದ್ದಾರೆ.
ನ್ಯಾಶನಲ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, 'ಜೀವನದಲ್ಲಿ ಅಷ್ಟು ವರ್ಷಗಳಿಂದ ನನ್ನ ಏಳು-ಬೀಳುಗಳನ್ನು, ನನ್ನ ಯೋಚನೆಗಳನ್ನು ನೋಡಿಕೊಂಡು ಬಂದವರ ಜೊತೆ ಜೀವನ ಪೂರ್ತಿ ಇರುತ್ತೇನೆ ಎನ್ನುವ ಬದ್ಧತೆಯೇ ಪ್ರೀತಿ. ಇದನ್ನು ಬಿಟ್ಟು ಉಳಿದ ಹೆಚ್ಚಿನವು ನಮಗೆ ಸಿನಿಮಾ ತೋರಿಸಿ ನಮ್ಮನ್ನು ಹಾಳು ಮಾಡಿರುವುದು ಅಂತಾ ನನಗೆ ಅನಿಸುತ್ತದೆ. ಪ್ರೀತಿಯ ಪ್ರಯಾಣ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿರುತ್ತದೆ' ಎಂದು ನಟಿ ರಂಜನಿ ಹೇಳಿದ್ದಾರೆ.

'ಟೀನೇಜ್ ಅಲ್ಲಿ ಇರುವವರಿಗೆ ಪ್ರೀತಿ ಬೇರೆ. ಅದೊಂದು ಪುಳಕ ಹುಟ್ಟಿಸಬೇಕು. ಆದರೆ ನನಗೆ ಜೀವನ ಪೂರ್ತಿ ನೆಮ್ಮದಿಯಾಗಿರುವ ಜೊತೆಗಾರ ಬೇಕು. ಟೀನೇಜ್‌ನ ಆ ಪುಳಕಗಳನ್ನು ನೋಡಿದ್ದೇನೆ. ಜೊತೆಗೆ ಅವರಿಗೆ ಜೀವನ ಪೂರ್ತಿ ಜೊತೆಯಾಗಿರಲು ಇರಲು ಇಷ್ಟಪಡುತ್ತೇನೆ. ಸಿನಿಮಾದಲ್ಲಿ ತೋರಿಸಿದ ಹಾಗೆ ಅವರು ನಮ್ಮ ಜೀವನದ ಖುಷಿಯಾಗುತ್ತಾರೆ ಅಂದರೆ ತುಂಬಾ ಕಷ್ಟವಾಗುತ್ತದೆ. ನಮ್ಮ ಖುಷಿಗೆ ನಾವೇ ಹೊಣೆ. ನಮ್ಮ ಖುಷಿಗಾಗಿ ಜೀವನ ಸಂಗಾತಿ ಮೇಲೆ ಒತ್ತಡ ಹೇರಬಾರದು' ಎಂದರು.
ಇನ್ನು ತಮ್ಮ ಪ್ರೀತಿ ಬಗ್ಗೆ ಮಾತನಾಡಿದ ಅವರು, 'ನಾವಿಬ್ಬರು ಕಾಲೇಜಿನಲ್ಲಿ ಒಂದೇ ಕ್ಲಾಸ್. ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದು. ನಾವಿಬ್ಬರೂ ಕ್ಲಾಸ್ ಲೀಡರ್ ಆಗಿದ್ದೇವು. ನಮ್ಮ ಮಧ್ಯೆ ಆಗ ಓದುದರಲ್ಲಿ ಒಂದು ರೀತಿಯ ಕಾಂಪಿಟೇಷನ್ ಇತ್ತು. ಅಲ್ಲದೇ ಅವರು ನಮ್ಮ ಮನೆ ಹತ್ತಿರನೇ ಇರುವುದರಿಂದ ಎಲ್ಲಿಯೂ ಹೋಗುವಂತಹ ಅವಕಾಶವೇ ಬರಲಿಲ್ಲ. ಪಿಯುಸಿಯಲ್ಲಿ ಜೊತೆಯಾದ ನಮ್ಮನ್ನು ಜೀವನ ಯಾವ ಕಾರಣಕ್ಕೂ ದೂರ ಇಡಲೇ ಇಲ್ಲ. ನನ್ನ ಪ್ರಕಾರ ನಾವಿಬ್ಬರು ಜೊತೆಗಿರಲು ವಿಧಿಯೇ ಕಾರಣ' ಎಂದರು.

ಜೀವನದಲ್ಲಿ ಏನೇ ಮಾಡಿದರು ಅವರಿಂದ ಸ್ವಾತಂತ್ರ್ಯ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಂಜನಿ, 'ನಾನು ಫುಲ್ ತಲೆ ಕೆಟ್ಟವಳು ಅಂತಾ ಅವರಿಗೆ ಗೊತ್ತಿದೆ. ಅವರು ಮೊದಲು ರಂಜನಿಯನ್ನು ನೋಡಿದ್ದು ಸಿಂಗರ್ ಆಗಿ. ಆದರೆ ಆ ಹುಡುಗಿ ಈಗ ಕಳೆದೇ ಹೋಗಿದ್ದಾಳೆ. ನಟನೆ ಮಾಡುತ್ತೇನೆ, ಬರವಣಿಗೆ ಮಾಡುತ್ತೇನೆ. ಸಿನಿಮಾ ಮಾಡುತ್ತೇನೆ.. ನಾಳೆ ಇದನ್ನೆಲ್ಲಾ ಬಿಟ್ಟು ಬೇರೆ ಏನೋ ಮಾಡಬಹದು ಆದರೆ ಇಬ್ಬರು ಜೊತೆಯಾಗಿ ಬದುಕಲು ಇದೆಲ್ಲಾ ಬೇಕಾಗಿಲ್ಲ ಇದೆಲ್ಲಾ ನನ್ನ ಆಸಕ್ತಿ.
ಬದುಕಲು ಬೆಳಗ್ಗೆ ಎದ್ದಾಗ ಅವರನ್ನು ನೋಡಿದರೆ ಖುಷಿಯಾಗಬೇಕು. ಒಟ್ಟಿಗೆ ಊಟ ಮಾಡಲು ಆಗಬೇಕು. ಒಂದೇ ಜಾಗದಲ್ಲಿ ಇರಲು ಆಗಬೇಕು. ಈ ಅಂಶಗಳು ಜೊತೆಗಿರಲು ಮುಖ್ಯವಾಗುತ್ತದೆ. ಒಬ್ಬರ ಮೇಲೆ ಒಬ್ಬರಿಗೆ ಗೌರವ ಇದ್ದರೆ ಕಂಪ್ಲೀಟ್ ಬೇರೆ ಆಸಕ್ತಿ ಇರುವ ವ್ಯಕ್ತಿಯಾದರೂ ಜೀವನ ಒಕೆ ಅನಿಸುತ್ತದೆ. ಅವರು ನನ್ನ ಜೀವನ ಜೈಲಿಗೆ ಸಂಪೂರ್ಣವಾಗಿ ಗೌರವ ಕೊಡುತ್ತಾರೆ' ಎಂದು ತಮ್ಮ ಜೀವನ ಸಂಗಾತಿಯ ಬಗ್ಗೆ ನಟಿ ರಂಜನಿ ರಾಘವನ್ ತಮ್ಮ ಜೀವನ ಸಂಗಾತಿ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದಾರೆ.












Click it and Unblock the Notifications