Varun Aradya: ಕುಚಿಕು ಸ್ನೇಹಿತನನ್ನು ಕಳೆದು ಕೊಂಡ ವರುಣ್ ಆರಾಧ್ಯ: ಆಗಿದ್ದೇನು?
ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ, ತಮ್ಮ ಜೀವದ ಗೆಳೆಯನನ್ನು ಕಳೆದು ಕೊಂಡಿದ್ದಾರೆ. ಬಾಲ್ಯದಿಂದಲೂ ಕೂಡಿ ಬೆಳೆದ ಇಬ್ಬರೂ, ಪ್ರಾಣ ಸ್ನೇಹಿತರು. ವರುಣ್ ಆರಾಧ್ಯ ಕುಚಿಕು ಗೆಳೆಯ ತೇಜಸ್ ನಿಧನರಾಗಿದ್ದಾರೆ.
ಈ ಸುದ್ದಿ ನಿಜಕ್ಕೂ ಕನ್ನಡ ಕಿರುತರೆ ವಲಯದಲ್ಲಿ ಆಘಾತ ಸೃಷ್ಟಿಸಿದೆ. ತೇಜಸ್ ಸಾವಿಗೆ ಸಮಾಜಿಕ ತಾಣದಲ್ಲಿ ಕಲಾವಿದರು ಸಂತಾಪ ಸೂಚಿಸಿದ್ದಾರೆ. ತೇಜಸ್ ಅವರ ನಿಧನಕ್ಕೆ ವರುಣ್ ಭಾವುಕರಾಗಿದ್ದಾರೆ. ಈ ಸುದ್ದಿಯನ್ನು ತಿಳಿಯುತ್ತಿದ್ದಂತೆ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ನನ್ನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿದ್ದ ಗೆಳೆಯನನ್ನು ಇಷ್ಟು ಬೇಗ ಹೋಗಿ ಬಿಟ್ಟಿದ್ದಾನೆ ಎಂದು ನೋವನ್ನು ತೋಡಿಕೊಂಡಿದ್ದಾರೆ. ಸಾಧ್ಯವಾದರೆ ಮತ್ತೆ ಹುಟ್ಟಿ ಬಾ ಎಂದು ತಿಳಿಸಿದ್ದಾರೆ.

ಸಾವನ್ನಪ್ಪಿದ್ದು ಹೇಗೆ?
ತೇಜಸ್ ಹಾಗೂ ಸ್ನೇಹಿತ ಚಿಕ್ಕಬಳ್ಳಾಪುರದ ಕಡೆ ಹೊರಟಿದ್ದಾಗ ರಸ್ತೆ ಅಫಘಾತದಲ್ಲಿ, ತೇಜಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ಜೊತೆ ಇದ್ದ ಸ್ನೇಹಿತನಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಮಾಜಿಕ ತಾಣದಲ್ಲಿ ಸಖತ್ ಸಕ್ರಿಯರಾಗಿದ್ದ ತೇಜಸ್, ಅವರ ಸಾವಿನ ಸುದ್ದಿಗೆ ಹಲವರು ಕಂಬಿನಿ ಮಿಡಿದಿದ್ದಾರೆ.
ವರುಣ್ ಆರಾಧ್ಯ ಹಾಗೂ ತೇಜಸ್ ಬಾಲ್ಯದಿಂದಲೂ ಸ್ನೇಹಿತರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಎಲ್ಲಿ ಹೋದರೂ ಇಬ್ಬರೂ ಸೇರಿ ಹೋಗುತ್ತಿದ್ದರು. ವರುಣ್ ಅವರ ಸಾಕಷ್ಟು ರೀಲ್ಸ್‌ಗಳಲ್ಲಿ ತೇಜಸ್‌ರನ್ನು ಕಾಣಬಹುದು. ತೇಜಸ್ ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ನಟರು ಸ್ನೇಹಿತರಾಗಿದ್ದು, ಸಾವನ್ನಪ್ಪಿರುವ ಸುದ್ದಿ ತಿಳಿದು ಸ್ನೇಹಿತರು ಸಹ ಶ್ರದ್ಧಾಂಜಲಿ ಸಲಿಸಿದ್ದಾರೆ.
ವರುಣ್ ಆರಾಧ್ಯ ಸ್ನೇಹಿತ ತೇಜಸ್ (23) ಇಂದು ಬೆಳಗಿನ ಜಾವ 12.30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನೊಂದಿಗೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಹಿಂತಿರುಗುವಾಗ ಈ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿದ್ದ ಇನ್ನೋರ್ವ ಆಕಾಶ್‌ರ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.
ಈ ಇಬ್ಬರು ರಾಯಲ್ ಎನ್ಫೀಲ್ಡ್ ಬುಲೆಟ್‌ನಲ್ಲಿ ಹೋಗುತ್ತಿದ್ದರು. ತೇಜಸ್ ಸ್ವತಃ ಟೂವೀಲರ್ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಅತಿವೇಗವಾಗಿ ಬುಲೆಟ್ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ತೇಜಸ್ ಅವರ ಕಾಲು, ತಲೆ, ಮುಖಕ್ಕೆ, ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications