Pranitha Subhash: ಪ್ರಣಿತಾ ಸುಭಾಷ್ ಮನೆಗೆ ಬಂದ ಹೊಸ ಅತಿಥಿ ಯಾರು?

ಕನ್ನಡ ಸಿನಿಮಾ ರಂಗಕ್ಕೆ ಇಂದು ಡಬಲ್ ಗುಡ್ ನ್ಯೂಸ್ ಸಿಕ್ಕಿದೆ. ಒಂದು ಕಡೆ ಲವ್ ಮಾಕ್ಟೇಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಗೆ ಇಂದು ಲಕ್ಷ್ಮೀ ಒಲಿದು ಬಂದಿದ್ದರೆ, ಕನ್ನಡ ಖ್ಯಾತ ನಟಿ ಹಾಗೂ ಪರಭಾಷೆ ಸಿನಿಮಾಗಳಲ್ಲಿ ಮಿಂಚಿದ್ದರೂ ಕನ್ನಡ ತನಕ್ಕೆ ಗೌರವ ನೀಡಿ ಕನ್ನಡತಿಯಾಗಿ ಗುರುತಿಸಿಕೊಂಡಿರುವ ಪ್ರಣಿತಾ ಸುಭಾಷ್ ಅವರ ಮನೆಗೂ ಹೊಸ ಅತಿಥಿ ಆಗಮನ ಆಗಿದೆ! ಹಾಗಾದ್ರೆ ಪ್ರಣಿತಾ ಸುಭಾಷ್ ಮನೆಗೆ ಬಂದ ಹೊಸ ಅತಿಥಿ ಯಾರು? ಬನ್ನಿ ತಿಳಿಯೋಣ.

ಪ್ರಣಿತಾ ಸುಭಾಷ್ ಅವರು ಅಭಿನಯದ ಮೂಲಕ ಕೋಟ್ಯಂತರ ಕನ್ನಡ ಅಭಿಮಾನಿ ಬಳಗ ಸೃಷ್ಟಿ ಮಾಡಿಕೊಂಡವರು. ಅದರಲ್ಲೂ ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದರು ಈ ನಟಿ ಪ್ರಣಿತಾ ಸುಭಾಷ್. ಹೀಗಿದ್ದಾಗ ನಟಿ ಪ್ರಣಿತಾ ಸುಭಾಷ್ ತಮ್ಮ 2ನೇ ಮಗುವಿನ ನಿರೀಕ್ಷೆ ಕೂಡ ಇಟ್ಟುಕೊಂಡಿದ್ದರು. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫೋಟೋಸ್ ಮತ್ತು ವಿಡಿಯೋಸ್ ಶೇರ್ ಮಾಡಿ ತಾವು ಮತ್ತೊಮ್ಮೆ ತಾಯಿ ಆಗುತ್ತಿರುವ ಸಿಹಿ ಸುದ್ದಿಯ ವಿಚಾರ ತಿಳಿಸಿದ್ದರು. ಅಭಿಮಾನಿಗಳು ಕೂಡ ಈ ಸಿಹಿ ಸುದ್ದಿಯಿಂದ ಖುಷಿ ಆಗಿದ್ದರು.

Kannada Star Actress Pranitha Subhash Is Gave Birth To Baby Boy

ಪ್ರಣಿತಾ ಸುಭಾಷ್ ದಂಪತಿ ಮನೆಗೆ...

ತಾಯಿ ಆಗುತ್ತಿರುವ ಸಿಹಿ ಸುದ್ದಿ ತಿಳಿಸಲು ಸೆಲೆಬ್ರಿಟಿಗಳು ಸದಾ ಹೊಸ ಹೊಸ ವಿಧಾನಗಳನ್ನೇ ಬಳಸುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಿನಿಮಾ ಸ್ಟಾರ್ಸ್ ಸರ್ಪ್ರೈಸ್ ಕೊಡ್ತಾರೆ. ಇದೀಗ ಪ್ರಣಿತಾ ಸುಭಾಷ್ ಅವರ ಅಭಿಮಾನಿಗಳು & ಕನ್ನಡ ಸಿನಿಮಾ ರಂಗದ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ! ಹಾಗಾದರೆ ಪ್ರಣಿತಾ ಸುಭಾಷ್ ದಂಪತಿ ಮನೆಗೆ ಬಂದ ಅತಿಥಿ ಗಂಡಾ ಅಥವಾ ಹೆಣ್ಣು ಪಾಪುನಾ? ಮುಂದೆ ಓದಿ.

2021ರಲ್ಲಿ ಉದ್ಯಮಿ ಜೊತೆ ಮದುವೆ

ಅಷ್ಟಕ್ಕೂ ಕನ್ನಡ ನಾಡಿನ ನಟಿ ಪ್ರಣಿತಾ ಸುಭಾಷ್ ಅವರು, 2021 ರಲ್ಲಿ ಉದ್ಯಮಿ ನಿತಿನ್ ರಾಜು ಅವರನ್ನು ಮದುವೆಯಾದರು. ಮರು ವರ್ಷವೇ ಅಂದ್ರೆ 2022 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು ನಟಿ ಪ್ರಣಿತಾ ಸುಭಾಷ್ ಅವರು. ಮೊದಲ ಮಗುವಿಗೆ ಆರ್ನಾ ಎಂಬ ಮುದ್ದಾದ ಹೆಸರು ಇಟ್ಟಿದ್ದರು, ಇದೀಗ ಪ್ರಣಿತಾ ದಂಪತಿಯ ಮಗಳಿಗೆ 2 ವರ್ಷ ತುಂಬಿದೆ. ಮತ್ತೊಂದು ಕಡೆ ಈಗ ಪ್ರಣಿತಾ ಸುಭಾಷ್ ಅವರ ಮನೆಗೆ ಗಂಡು ಮಗುವಿನ ಆಗಮನ ಆಗಿದ್ದು, ಪ್ರಣಿತಾ ಮಗಳು ಕೂಡ ತಮ್ಮನನ್ನ ಮುದ್ದಾಗಿ ಮಾತನಾಡಿತ್ತಾಳೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+