Darshan Thoogudeepa: ‘ಪವಿತ್ರಾ ಗೌಡಳ ಕಾರಣಕ್ಕೆ ನಮ್ಮ ಬಾಸ್ ಹಾಳಾಗಿದ್ದು’ ದರ್ಶನ್ ತೂಗುದೀಪ್ ಫ್ಯಾನ್ಸ್ ಗರಂ!
ಪವಿತ್ರಾ ಗೌಡ ವಿರುದ್ಧ, ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ರೊಚ್ಚಿಗೆದ್ದಿದ್ದಾರೆ. ಈ ಕುರಿತು ತೀವ್ರ ಆಕ್ರೋಶದ ಬಿರುಗಾಳಿ ಎದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಡಿ-ಬಾಸ್ ಫ್ಯಾನ್ಸ್ ಇದೀಗ ಬಾಯಿಗೆ ಬಂದಂತೆ ಪವಿತ್ರಾ ಗೌಡ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅರೆಸ್ಟ್ ಆಗಲು, ಪವಿತ್ರಾ ಗೌಡ ಪ್ರಮುಖ ಕಾರಣ ಎನ್ನುವ ಸ್ಫೋಟಕ ಆರೋಪವನ್ನ ಇದೀಗ ದರ್ಶನ್ ತೂಗುದೀಪ್ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಮಾಡಿದ್ದು. ಹೀಗಾಗಿ ಈಗ ದೊಡ್ಡ ಗಲಾಟೆ ಶುರುವಾಗಿದೆ!
ದರ್ಶನ್ ತೂಗುದೀಪ್ ಹೆಸರೇ ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು. ಯಾಕಂದ್ರೆ, ಈ ಬ್ರಾಂಡ್ ಕಟ್ಟಿ ಬೆಳೆಸಲು ದರ್ಶನ್ ತೂಗುದೀಪ್ ಸುಮಾರು 25 ವರ್ಷಗಳ ಕಾಲ ಹಗಲು & ರಾತ್ರಿ ಬೆವರು ಹರಿಸಿದ್ದಾರೆ ಎಂಬುದು ಅವರ ಅಭಿಮಾನಿಗಳ ಮಾತು. ಹೀಗಿದ್ದರೂ ದರ್ಶನ್ ತೂಗುದೀಪ್ ಮಾತ್ರ ಪವಿತ್ರಾ ಗೌಡ ಸಹವಾಸ ಮಾಡಿ ಬಾಳು ಹಾಳು ಮಾಡಿಕೊಂಡಿದ್ದಾರೆ, ಈಗಲಾದರೂ ಇದು ಸರಿ ಆಗಬೇಕು ಅಂತಾ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಆಗ್ರಹ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ, ಬೆಂಕಿ ಹೊತ್ತಿಕೊಂಡಿದ್ದು ಪವಿತ್ರಾ ಗೌಡ ಬೆಂಬಲಿಗರು & ದರ್ಶನ್ ಅಭಿಮಾನಿಗಳು ಇದೀಗ ಕಿತ್ತಾಡುತ್ತಿದ್ದಾರೆ!

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಪರದಾಟ!
ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದರು, ಆದರೆ ಯಾವಾಗ ಪವಿತ್ರಾ ಗೌಡ ದರ್ಶನ್‌ರ ಜೀವನಕ್ಕೆ ಎಂಟ್ರಿ ಆದರೂ ಆ ಕ್ಷಣದಿಂದಲೇ ಸಮಸ್ಯೆ ಶುರುವಾಗಿತ್ತು ಎಂಬುದು ದರ್ಶನ್‌ರ ಅಭಿಮಾನಿಗಳ ಆರೋಪ. ಹೀಗಿದ್ದಾಗ ಪವಿತ್ರಾ ಗೌಡ ಬಗ್ಗೆ ಮಾತನಾಡಿದರೆ ಅಭಿಮಾನಿಗಳನ್ನ ಕೂಡ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗ್ತಾರೆ ಹುಷಾರ್ ಅಂತಾ ಇದೀಗ, ದರ್ಶನ್ ತೂಗುದೀಪ್ ಅವರ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಿರಿಕಿರಿ ನಡುವೆ & ಆರೋಪಗಳ ನಡುವೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಪರದಾಡುವ ಪರಿಸ್ಥಿತಿ ಬಂದಿದೆ.
ಪವಿತ್ರಾ ಪರವಾಗಿ ಕೆಲವರ ಧ್ವನಿ!
ಒಟ್ನಲ್ಲಿ ಇದೀಗ ದರ್ಶನ್ ಅವರ ಅಭಿಮಾನಿಗಳು ರೊಚ್ಚಿಗೆದ್ದು, ಪವಿತ್ರಾ ಗೌಡ ವಿರುದ್ಧವೇ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭ ಮಾಡಿದ್ದಾರೆ. ಹೀಗಾಗಿ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಗೆಳೆತನದ ಸಂಬಂಧ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹಾಗೇ ಈ ವಿಚಾರದಲ್ಲಿ ಕೆಲವರು ಪವಿತ್ರಾ ಗೌಡ ಪರವಾಗಿ ಕೂಡ ನಿಂತಿದ್ದು, ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಒಟ್ನಲ್ಲಿ ಸೋಷಿಯಲ್ ಮೀಡಿಯಾ ಈ ಜಗಳದಲ್ಲಿ ಕೊತ ಕೊತ ಕುದಿಯುತ್ತಿದೆ.











Click it and Unblock the Notifications