Darshan Thoogudeepa: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ...
ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿರುವ ದರ್ಶನ್ ತೂಗುದೀಪ್ ಅವರು ಸದ್ಯದಲ್ಲೇ ಜೈಲಿಂದ ರಿಲೀಸ್ ಆಗಿ, ಜಾಮೀನು ಪಡೆದು ಹೊರಗೆ ಬರುತ್ತಾರೆ. ಈ ಮೂಲಕ ದರ್ಶನ್ ತೂಗುದೀಪ್ ಅವರು ವರ್ಷಕ್ಕೆ 3 ಸಿನಿಮಾ ಮಾಡ್ತಾರೆ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದರು. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆದ ತಕ್ಷಣ ಅವರನ್ನು ಕರೆದುಕೊಂಡು ಬರಲು ಹೆಲಿಕಾಪ್ಟರ್ ಕೂಡ ಬುಕ್ ಮಾಡಲಾಗಿದೆ ಎಂಬ ಮಾತು ಹರಡಿದೆ. ಆದರೆ ಇಂತಹ ಸಮಯದಲ್ಲೇ, ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ...
ದರ್ಶನ್ ತೂಗುದೀಪ್ ಕೇವಲ 70 ರೂಪಾಯಿ ದಿನಗೂಲಿ ಪಡೆದು ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದ್ದವರು. ಎಷ್ಟೋ ದಿನಗಳ ಕಾಲ ಊಟ ಇಲ್ಲದೆ ನರಳಾಡಿದ್ದೀನಿ, ಮನೆಯಲ್ಲಿ ರಾಗಿ ಗಂಜಿ ಕುಡಿದು ದಿನ ಕಳೆದಿದ್ದೇವೆ ಅಂತಾ ಖುದ್ದು ದರ್ಶನ್ ತೂಗುದೀಪ್ ಅವರು ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದರು. ಅದರಲ್ಲೂ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಸಾಕಷ್ಟು ನೋವು ತಿಂದು, ಕಣ್ಣೀರು ಹಾಕಿ ಜೀವನ ಸಾಗಿಸಿದ್ದರು.

ಈ ರೀತಿ ಇಷ್ಟೆಲ್ಲ ಕಷ್ಟ ಅನುಭವಿಸಿದ್ದ ನಟ ದರ್ಶನ್ ತೂಗುದೀಪ್, ರೇಣುಕಾಸ್ವಾಮಿ ಕೊಲೆಯ ಕೇಸ್‌ನಲ್ಲಿ ಬಳ್ಳಾರಿ ಜೈಲಲ್ಲಿ ನರಳುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಸ್ಫೋಟಕ ಸುದ್ದಿಯೊಂದು ಹರಡಿದೆ. ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ....
ದರ್ಶನ್ ತೂಗುದೀಪ್‌ಗೆ ಮರಣ ದಂಡನೆ?
ರೇಣುಕಾಸ್ವಾಮಿ ಎಂಬ ಚಿತ್ರದುರ್ಗದ ವ್ಯಕ್ತಿ ಪವಿತ್ರಾ ಗೌಡಗೆ ಕೆಟ್ಟ ಕೆಟ್ಟದಾಗಿ ಮೆಸೇಜ್‌ಗಳ ಕಳುಹಿಸಿ, ತನ್ನ ಮರ್ಮಾಂಗ ತೋರಿಸಿದ್ದ ಎಂಬ ಕಾರಣಕ್ಕೆ ದರ್ಶನ್ ತೂಗುದೀಪರು ಈತನ ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಹೀಗಾಗಿಯೇ ದರ್ಶನ್ ತೂಗುದೀಪ್ ಅವರೀಗ, ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ ಗ್ಯಾರಂಟಿ, ಈಗಿರುವ ಪರಿಸ್ಥಿತಿ ನೋಡುತ್ತಿದ್ದರೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಇನ್ನೂ 2 ವರ್ಷ ಹೊರಗೆ ಬರೋದಿಲ್ಲ ಎಂಬ ಸುದ್ದಿ ಹರಡಿದೆ.
ದರ್ಶನ್ ಅವರ ಅಭಿಮಾನಿಗಳು....
ಅದರಲ್ಲೂ ದರ್ಶನ್ ತೂಗುದೀಪ್ ಅವರಿಗೆ ಮರಣ ದಂಡನೆ ಶಿಕ್ಷೆ ಆಗಬಹುದು ಎನ್ನುವ ಬಗ್ಗೆ ಲಾಯರ್ ಅಂದ್ರೆ ವಕೀಲರು ಹೇಳಿರುವ ಮಾತಿನ ವಿಡಿಯೋ ತುಣುಕು ಈಗ ಸೋಷಿಯಲ್ ಮೀಡಿಯಾ ಫುಲ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಕಮೆಂಟ್ ಹಾಕುತ್ತಿರುವ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ನಮ್ಮ ಡಿ-ಬಾಸ್ ಅವರಿಗೆ ಏನಾದರೂ ಆದರೆ ನಾವು ತಡೆದುಕೊಳ್ಳಲು ಆಗಲ್ಲ ಅಂತಿದ್ದಾರೆ. ಇನ್ನೂ ಕೆಲವರು ನಮ್ಮ ಡಿ-ಬಾಸ್‌ಗೆ ಏನು ಆಗದೇ ಇರಲಿ ದೇವರೆ ಅಂತಾ ಬೇಡಿಕೊಂಡಿದ್ದಾರೆ. ಹಾಗೇ ಇನ್ನೂ ಕೆಲವರು ಇದೆಲ್ಲಾ ನಿಜವಾಗಲ್ಲ ನಮ್ಮ ಪಾಲಿನ ದೇವರು ಡಿ-ಬಾಸ್ ದರ್ಶನ್ ತೂಗುದೀಪ್ ದಸರಾ ಒಳಗೆ ರಿಲೀಸ್ ಆಗಿ ಹೊರಗೆ ಬರ್ತಾರೆ ಅಂತಾ ಕೆಲವು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಕೋಟಿ ಒಡೆಯ ದರ್ಶನ್ ತೂಗುದೀಪ್...
ರೇಣುಕಾಸ್ವಾಮಿ ಕುಟುಂಬ ಇದೀಗ ಅನಾಥವಾಗಿದ್ದು, ಮನೆಯಲ್ಲಿ ಯಾರೂ ದಿಕ್ಕೇ ಇಲ್ಲದೆ ವೃದ್ಧ ತಂದೆ & ತಾಯಿ ನರಳುತ್ತಿದ್ದಾರೆ. ಪರಿಸ್ಥಿತಿ ಕೂಡ ಕೈಮೀರಿ ಹೋಗಿದ್ದು, ರಾಜ್ಯದಲ್ಲಿ ಹಲವರು ಈಗಾಗಲೇ ರೇಣುಕಾಸ್ವಾಮಿ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದಾರೆ. ಇಂತಹ ಸಮಯದಲ್ಲೇ ಕೋಟಿಯ ಒಡೆಯ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ರೇಣುಕಾಸ್ವಾಮಿ ಹೆಂಡತಿಗೆ ಸಹಾಯ ಮಾಡಲು ಮುಂದಾಗಿ, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಇದೀಗ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ, ರೇಣುಕಾಸ್ವಾಮಿ ಹೆಂಡತಿಗೆ ಸಹಾಯ ಮಾಡಲಿರುವ ನಟ ದರ್ಶನ್ ತೂಗುದೀಪ್ ಅಂತಾ ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಈವರೆಗೂ ಇದರ ಬಗ್ಗೆ ದರ್ಶನ್ ತೂಗುದೀಪ್ ಅಥವಾ ಅವರ ಕುಟುಂಬ ಸದಸ್ಯರು ಅಧಿಕೃತ ಹೇಳಿಕೆ ನೀಡಿಲ್ಲ.
ದರ್ಶನ್ ತೂಗುದೀಪ್ ದೂರ.. ದೂರ..?
ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ತೂಗುದೀಪ್ ತಮ್ಮ ಸಿನಿಮಾಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದರು. ಈ ಕಾರಣಕ್ಕೆ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗೆ ಕೂಡ ವಾಯ್ಸ್ ಡಬ್ಬಿಂಗ್ ಆಗುತ್ತಿತ್ತು. ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಅವರ ವಿಚಾರ ಈಗ ಭಾರತದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ರಾಷ್ಟ್ರೀಯ ಮಾಧ್ಯಮಗಳು ಕೂಡ ಈ ವಿಚಾರವಾಗಿ ಚರ್ಚೆ ನಡೆಸುತ್ತಿವೆ. ಮತ್ತೊಂದು ಕಡೆ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ, ನಟ ದರ್ಶನ್ ತೂಗುದೀಪ್ ಅವರು ಹೊರಗೆ ಬರುತ್ತಾರೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಆಘಾತವೇ ಎದುರಾಗಿದೆ.
ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರವೇ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದ್ದು, ಜಾಮೀನು ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications