ನಟ ಉಪೇಂದ್ರ ಮನೆ ಕಾಂಪೌಂಡ್‌ಗೆ ಕಾರಿನಿಂದ ಗುದ್ದಿದ್ದು ನಾನೇ: ಸತ್ಯ ಒಪ್ಪಿಕೊಂಡ ಖ್ಯಾತ ನಟಿ
ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯ ಕಾಂಪೌಂಡ್‌ಗೆ ನಟಿಯೊಬ್ಬರು ಕಾರಿನಲ್ಲಿ ಡಿಕ್ಕಿ ಹೊಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಡೆದು ಬಹಳ ದಿನಗಳಾಗಿದ್ದು, ಖ್ಯಾತ ಕಿರುತೆರೆ ನಟಿಯೊಬ್ಬರ ಕಾರು ಉಪೇಂದ್ರ ಅವರ ಮನೆ ತಡೆಗೋಡೆಗೆ ಗುದ್ದಿದೆ. ಈ ವಿಚಾರವನ್ನು ಆ ನಟಿಯೇ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಅಲ್ಲೇ ಇದ್ದ ಪ್ರಿಯಾಂಕಾ ಉಪೇಂದ್ರ ನಿಜಕ್ಕೂ ಶಾಕ್ ಆಗಿದ್ದಾರೆ.
ಕನ್ನಡದ ಖ್ಯಾತ ಸೀರಿಯಲ್ ನಟಿ ಹರಿಣಿ ಅವರು ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಹರಟೆ ಜೋಕ್ ಮಾಡುತ್ತಾ ಈ ವಿಚಾರವನ್ನು ಹರಿಣಿ ಬಾಯ್ಬಿಟ್ಟಿದ್ದಾರೆ. ಹರಿಣಿ ಅವರು ತಾವು ಕಾರು ಕಲಿಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡು ಅಂದು ಉಪೇಂದ್ರ ಅವರ ಮನೆ ಬಳಿ ನಡೆದಿದ್ದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಕಾರು ಡ್ರೈವಿಂಗ್ ಕಲಿಯುವ ಶುರುವಲ್ಲಿ ಆಕ್ಸಿಡೆಂಟ್ ಮಾಡಿದ್ದಾಗಿ ಹರಿಣಿ ರಿವೀಲ್ ಮಾಡಿದ್ದಾರೆ.

ಹರಿಣಿ ಅವರು ಈ ವಿಚಾರವನ್ನು ಪ್ರಿಯಾಂಕಾ ಉಪೇಂದ್ರ ಎದುರು ಹೇಳಿಕೊಂಡಿದ್ದಾರೆ. ನಟಿ ಹರಿಣಿ ಮಾತು ಕೇಳಿ ಎಲ್ಲರೂ ಫುಲ್ ಶಾಕ್ ಆಗಿದ್ದಾರೆ. ಮಜಾ ಟಾಕೀಸ್ ವೇದಿಕೆಯಲ್ಲಿ ಹರಿಣಿ ಈ ವಿಚಾರ ಬಾಯ್ಬಿಟ್ಟಿದ್ದಾರೆ. ಉಪೇಂದ್ರ ಅವರ ಮನೆಯ ಕಾಂಪೌಂಡ್ಗೆ ಕಾರಿನಲ್ಲಿ ಗುದ್ದಿದ್ದೆ, ಅಲ್ಲಿದ್ದ ಕುಂಡಗಳನ್ನು ಹಾಳು ಮಾಡಿದ್ದು ನಾನೇ ಎಂದು ಹರಿಣಿ ಸತ್ಯ ಒಪ್ಪಿಕೊಂಡಿದ್ದಾರೆ. ಇದನ್ನು ಕೇಳಿ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ.
ನಾನಿನ್ನೂ ಆಗ ಕಾರ್ ಡ್ರೈವಿಂಗ್ ಕಲೀತಿದ್ದೆ. ನನ್ನ ಕಾರಿನ ಮುಂದೆ ಮತ್ತೊಂದು ದೊಡ್ಡ ಕಾರ್ ಬಂದುಬಿಟ್ಟಿತ್ತು. ಆಗ ಭಯದಲ್ಲಿ ನಾನು ಆಕ್ಸಿಲರೇಟರ್ ತುಳಿದುಬಿಟ್ಟೆ. ಕಾರ್ ಡಿಕ್ಕಿ ಹೊಡೆದಿದ್ದರಿಂದ ಕೊನೆಗೆ ಅಲ್ಲೇ ಇದ್ದ ಮನೆಯೊಂದರ ಕಾಂಪೌಂಡ್ ಬಳಿ ಇದ್ದ ಕುಂಡಗೆಳೆಲ್ಲಾ ಪುಡಿ ಪುಡಿಯಾಯ್ತು. ಆ ಸದ್ದು ಕೇಳಿ ಉಪೇಂದ್ರ ಸರ್ ಮನೆಯಿಂದ ಹೊರಬಂದರು. ಆಗಲೇ ಆ ಮನೆ ಉಪೇಂದ್ರ ಅವರದ್ದು ಎನ್ನುವ ವಿಚಾರ ಗೊತ್ತಾಯ್ತು ಎಂದು ಹರಿಣಿ ವಿವರಿಸಿದ್ದಾರೆ.

ಉಪೇಂದ್ರ ಸರ್ ಕಾರು ತಳ್ಳಿದ್ರು!
ಉಪೇಂದ್ರ ಸರ್ ಬಂದಾಗ ನನಗೆ ತುಂಬಾ ಭಯ ಆಯ್ತು. ಆದ್ರೆ ಉಪೇಂದ್ರ ಅವರು ನನ್ನನ್ನು ಕಂಡು ನೀವೇನ್ರಿ? ಕಾರು ಕಲಿಯೋಕೆ ಇದೇನಾ ಜಾಗ? ಯಾವುದಾದರೂ ಮೈದಾನಕ್ಕೆ ಹೋಗಬಾರದಾ? ಎಂದು ಕೇಳಿದರು. ಅದಕ್ಕೆ ತಪ್ಪಾಯ್ತು ಸರ್ ಎಂದು ನಾನು ಕೇಳಿದೆ. ಇದನ್ನೆಲ್ಲ ರಿಪೇರಿ ಮಾಡಿ ಕೊಡುತ್ತೀನಿ ಎಂದೂ ಉಪೇಂದ್ರ ಅವರಿಗೆ ಹೇಳಿದೆ. ಅದಕ್ಕೆ ಅವರು ಅದೆಲ್ಲ ಏನೂ ಬೇಡ, ಮೊದಲು ನೀವು ಇಲ್ಲಿಂದ ಹೊರಡಿ ಎಂದು ಹೇಳಿದ್ರು. ಬಳಿಕ ಉಪೇಂದ್ರ ಉಪೇಂದ್ರ ಸರ್ ಹಾಗೂ ಅವರ ಮಗ, ನನ್ನ ಮಗ ಎಲ್ರೂ ಸೇರಿ ನನ್ನ ಕಾರು ತಳ್ಳಿ ಹೊರಗಡೆ ತೆಗೆದರು ಎಂದು ಹರಿಣಿ ಅಂದಿನ ಘಟನೆ ಬಿಚ್ಚಿಟ್ಟಿದ್ದಾರೆ.
ಅಚ್ಚರಿ ಅಂದ್ರೆ ಈ ವಿಚಾರ ಪ್ರಿಯಾಂಕಾ ಉಪೇಂದ್ರ ಅವರಿಗೆ ಗೊತ್ತೇ ಇಲ್ಲ. ಹರಿಣಿ ಅವರ ಮಾತು ಕೇಳಿ, ಹಾಗಿದ್ರೆ ಆವತ್ತು ಆಕ್ಸಿಡೆಂಟ್ ಮಾಡಿದ್ದು ನೀವಾ? ಎಂದು ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications